ಬೆಂಗಳೂರು : ರಾಜ್ಯದ ರಾಜಧಾನಿಯ ಜನರು ಈಗಾಗಲೇ ಲೈಂಗಿಕ ದರ್ಜನ್ಯ, ಸಿಲಿಂಡರ್ ಸ್ಪೋಟ, ಗ್ಯಾಸ್ ಸಿಲಿಂಡರ್ಸ್ಫೋಟ, ನಿಗೂಢ ಸ್ಪೋಟದಂತ ಸರಣಿ ಘಟನೆಗಳಿಂದ ಭಯಭೀತರಾಗಿದ್ದಾರೆ. ಇದರ ನಡುವೆ ಇಂದು ಮತ್ತೆ ಬೆಂಗಳೂರಿಗರು ಬೆಚ್ಚಿ ಬೀಳಿಸುವಂತೆ ಘಟನೆಯೊಂದು ನಡೆದಿದೆ.
ಹಾಡಹಗಲೇ ನಡುರಸ್ತೆಯಲ್ಲೇ ಕುಳ್ಳ ವೆಂಕಟೇಶ್ ಎಂಬ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ನಡೆದಿದೆ.
ಬೆಂಗಳೂರಿನ ಅವಲಹಳ್ಳಿ ಬಳಿಯ ಮಾರ್ಗೊಂಡನಹಳ್ಳಿಯಲ್ಲಿ ಕುಳ್ಳ ವೆಂಕಟೇಶ್ ಎಂಬ ವ್ಯಕ್ತಿಯ ಮೇಲೆ ಹಾಡಹಗಲೇ ಆಟೋದಲ್ಲಿ ಬಂದಂತ ಐವರು ದುಷ್ಕರ್ಮಿಗಳು ಮಚ್ಚು, ಲಾಂಗ್ ಇತರ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರೋ ಘಟನೆ ನಡೆದಿದೆ. ಕುಳ್ಳ ವೆಂಕಟೇಶ್ ಕೊಲೆಯಾದ ದುರ್ದೈವಿಯಾಗಿದ್ದು,
ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಕುಳ್ಳ ವೆಂಕಟೇಶ್ನನ್ನು ಆಟೋದಲ್ಲಿ ಬಂದ ಐದು ಜನ ದುಷ್ಕರ್ಮಿಗಳ ಗುಂಪು, ಆಟೋ ಡಿಕ್ಕಿ ಹೊಡೆದು ಬೀಳಿಸಿದ್ದಾರೆ. ಬೈಕ್ ನಿಂದ ವೆಂಕಟೇಶ್ ಕೆಳಗೆ ಬೀಳುತ್ತಿದ್ದಂತೆ ಲಾಂಗು, ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಜಮೀನು ವಿಚಾರವಾಗಿ ಕುಳ್ಳ ವೆಂಕಟೇಶ್ನ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಆವಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಟ್ಟಿನಲ್ಲಿ ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂಬ ಹೆಸರು ಮಾಯವಾಗಿ ಕಳಂಕ ತರುವ ಸಿಟ
0 Comments