ಬಳ್ಳಾರಿ ಸೆ 07. ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ.ಮಿಗಿಲಾಗಿ, ರಾಜ್ಯ ನಾಯಕರ ಪಟ್ಟಿಯಲ್ಲಿರುವ ಸಚಿವ ಶ್ರೀರಾಮುಲು ತವರು ಬಳ್ಳಾರಿ. ಇದಷ್ಟೆ ಅಲ್ಲ, ಅದೇ ವಾರ್ಡ್ನ ಪಾಲಿಕೆ ಸದಸ್ಯರು ಮತ್ತು ನಗರ ಶಾಸಕ ಸೋಮಶೇಖರ್ ರೆಡ್ಡಿ ಆಪ್ತರು ಸೇರಿ ತಮ್ಮ ವಾರ್ಡ್ನ ಜನರಿಗೆ ಮೂಲ ಭೂತ ಸೌಕರ್ಯ ನೀಡುವಲ್ಲಿ ಪಾಲಿಕೆ ಆಯುಕ್ತರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆಯುಕ್ತರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಚರಿತ್ರೆ ನೋಡಿದರೇ ಗೊತ್ತಾಗುತ್ತೆ ಅವರ ಕೆಲಸದ ವಿಧಾನ, ಆರು ತಿಂಗಳಿಗಿAತ ಹೆಚ್ಚು ಅವಧಿ ಎಲ್ಲಿಯೂ ಕೆಲಸ ಮಾಡಿಲ್ಲ ಆಯುಕ್ತೆ ಪ್ರೀತಿ ಗೆಹ್ಲೋಟ್, ಇಂತವರನ್ನ ತಂದು ನಮ್ಮ ಬಳ್ಳಾರಿಗೆ ಹಾಕಿದ್ದಾರೆ ಎಂದು ಸರ್ಕಾರದ ವಿರುಧ್ದ ಕಿಡಿಕಾರಿದ್ದಾರೆ ಶ್ರೀನಿವಾಸ್ ಮೋತ್ಕರ್.ಈ ಘಟನೆ ಅಲ್ಲಿ ನೆರೆದಿದ್ದ ಸಾರ್ವಜನಿಕರಿಗಂತು ಆಶ್ಚರ್ಯ ಮೂಡಿಸಿದ್ದಂತು ನಿಜ.
ನಗರದ ತಾಳುರು ರಸ್ತೆಯ ವಾರ್ಡ್ ನಂ1,22 ವಾರ್ಡ್ಗಳಲ್ಲಿ ಒಳಚರಂಡಿ ನೀರು ಮನೆಗಳುಗೆ ನುಗ್ಗಿ ರಸ್ತೆ ಗಳು ಬ್ಲಾಕ್ ಅಗಿವೆ, ಜನರು ಮನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಪಾಲಿಕೆ ಚುನಾವಣೆ ನಡೆದು ನಾಲ್ಕೆöÊದು ತಿಂಗಳಗಳು ಕಳೆದರೂ ಇನ್ನೂ ಮೇಯರ್, ಉಪ ಮೇಯರ್,ಸೇರಿದಂತೆ ಬಾಡಿ ಕೂತಿಲ್ಲಿ.!!ಜನರ ಸಮಸ್ಯೆಗಳ ಬಗ್ಗೆ ಪಾಲಿಕೆ ಆಯುಕ್ತರುಗೆ ಏಷ್ಟು ಬಾರಿ ತಿಳಿಸಿದರು ಕಿವುಡರ ಮುಂದೆ ಜಾಗಟೆ ಬಾರಿಸಿದಂತೆ ಅಗಿದೆ.ಹೊಸದಾಗಿ ಬಂದಿರುವ ಕಮೀಷನರ್‌ಗೆ ಪಾಲಿಕೆ ಬಗ್ಗೆ ಅಗಲಿ ಜನರ ಬಗ್ಗೆ ಅಗಲಿ ಯಾವುದೇ ಕಾಳಜಿ ಇಲ್ಲ,ಅವರು ದೊಡ್ಡ ಓದನ್ನು ಹೊಂದಿಕೊAಡು ಬಂದಿದ್ದಾರೆ, ಜನರ ಸಮಸ್ಯೆಗಳು ಬುಕ್‌ನಲ್ಲಿ ಮಾತ್ರವೇ ಮಾಡುತ್ತಾರೆ!! ಪ್ರಾಕ್ಟಿಕಲ್ ಮಾಡಲು ಅವರುಗೆ ಗೊತ್ತಿಲ್ಲ. ಎಲ್ಲವು ರೂಲ್ಸ್ ಅಂತಾರೆ.ಸರಿ ಅದೆ ಪ್ರಕಾರವು ಅದ್ರು ಮಾಡಿ ಸಮಸ್ಯೆಗಳನ್ನು ಬಗೆ ಹರಿಸಲು ಪ್ರಯತ್ನಗಳು ಮಾಡುತ್ತಾ ಇಲ್ಲ.
ಮಂಗಳವಾರ ನಗರದ ತಾಳುರು ರಸ್ತೆಯ ರೇಣುಕಾ ನಗರದ ಹರಿಶ್ಚಂದ್ರ ನಗರದ ಜನರು, ಬಿಜೆಪಿಯ ಪಾಲಿಕೆ ಸದಸ್ಯರು,ಶ್ರೀನಿವಾಸ ಮೊತ್ಕರ್, ತಿಲಕ್ ಕೊನಂಕಿ,ಮಲ್ಲನ ಗೌಡ,ವೇಮಣ್ಣ,ಹನುಮಂತ ಗುಡಿಗಂಟಿ, ಇಬ್ರಾಹಿಂ ಬಾಬು ,ಎಪಿಎಂಸಿ ಅಧ್ಯಕ್ಷ ಉಮೇಶ್ ಕುಮಾರ್, ಪಕ್ಷದ ಕಾರ್ಯಕರ್ತರು ಪಾಲ್ಗೊಂಡು ರಸ್ತೆ ಬಂದ್ ಮಾಡಿ ಕಮೀಷನರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಕಮೀಷನರ್ ಬರುವಂತೆ ಆಗ್ರಹಿಸಿದರು, ಕಮೀಷನರ್ ಬಂದಮೇಲೆ ವಾರ್ಡ್ ಗಳನ್ನು ವೀಕ್ಷಣೆ ಮಾಡಿಸಿ ಸಮಸ್ಯೆಗಳನ್ನು ಬಗೆಹರಿಸಲು,ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಖಾಜಾಹುಸೇನ್,ಫಿರೋಜ್ ಜಾಕಿರ್ ಮತ್ತು ಗ್ರಾಮೀಣ ಪೋಲಿಸ್ ಅಧಿಕಾರಿಗಳು ಇದ್ದರು.ಪಾಲಿಕೆ ಸದಸ್ಯರು ಬೀದಿಗೆ ಇಳಿದು ಹೋರಾಟ ಮಾಡುವ ಪರಿಸ್ಥಿತಿ ಉದ್ಭವ ಅಗಿದೆ ಅಂದರೆ,ಸಚಿವರು, ಶಾಸಕರು, ಸಂಸದರು, ಸರ್ಕಾರ ಇದ್ದು ಸತ್ತು ಶವ ಅಗಿದ್ದಾವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಇಂದು ನಡೆದ ರಸ್ತೆ ಬಂದ್ ಸರ್ಕಾರಕ್ಕೆ ಮಾನ,ಮರ್ಯಾದೆ ಇಲ್ಲದಂತೆ ಆಗಿದೆ.ಮುಖ್ಯಮಂತ್ರಿಗಳು ಬೊಮ್ಮಾಯಿ ಅವರಗೆ ಮುಖ ಭಂಗ ಅಗಿದೆ ಎಂದರೇ ತಪ್ಪಿಲ್ಲ ಎಂದು ಜನರು ಮಾತನಾಡಿಕೊಳ್ಳುತಿದ್ದಾರೆ.
ಸ್ಥಳೀಯ ಬಿಜೆಪಿ ಶಾಸಕರು ಇದ್ದು ಸರ್ಕಾರದ ವಿರುದ್ಧ ಅವರು ಪಾಲಿಕೆ ಸದಸ್ಯರು,ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರು, ಹೋರಾಟ ಮಾಡುತ್ತಾರೆ ಎನ್ನುವ ಸಂದೇಶ ಎಲ್ಲಿ ವರೆಗೆ ಹೋಗುತ್ತದೆ,!!?? ಶಾಸಕರು, ಸಂಸದರು ಮೌನವಾಗಿ ಇದ್ದು ಸರ್ಕಾರದ ವಿರುದ್ಧ ಸಂದೇಶ ರವಾನೆ ಮಾಡಿರಬಹುದೆ!! ಅನ್ನುವ ಅನುಮಾಗಳು ಹುಟ್ಟಿವೆ.ಇನ್ನೂಮುಂದೆ ನಗರದಲ್ಲಿ ಪ್ರತಿ ದಿನ ಪ್ರತಿ ವಾರ್ಡ್ ಗೆ ಒಂದು,ರಸ್ತೆ ಬಂದ್‌ಗಳು ನಡೆಯಬಹುದು.ಅಧಿಕಾರಿಗಳು ತಕ್ಷಣವೇ ಜನರ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಇಲ್ಲದಿದ್ದರೆ ಸರ್ಕಾರಕ್ಕು ಮುಜುಗರ ತಂದರು ಆಶ್ಚರ್ಯವಿಲ್ಲ ಎನ್ನುವಂತಾಗಿದೆ.
VARTHAJALA, BELLARY

0 Comments