ಬಳ್ಳಾರಿ ಸೆ 07. ಅಂಕಮನಾಳು-ಎತ್ತಿನಗಾಡಿ ಮುಗುಚಿ ಎತ್ತುಗಳು,ಕುರಿ,ಆಕಳುಗಳ ಸಾವಿನ ಘಟನೆ ವಿಜಯನಗರ ಜಿಲ್ಲೆ ಸಂಡೂರು ತಾಲೂಕು ಅಂಕಮನಾಳು ಗ್ರಾಮದಲ್ಲಿ ನಡೆದಿದೆ. ಸೆ6ರಂದು ಕೆರೆ ಮೇಲೆ ಚಲಿಸುತ್ತಿದ್ದ ಎತ್ತಿನ ಗಾಡಿ ಮುಗುಚಿ ಕೆರೆಯಲ್ಲಿ ಬಿದ್ದಿದ್ದು ಪರಿಣಾಮ ಕುರಿ,ಎರೆಡು ಎತ್ತುಗಳು,ಆಕಳು ಅಸುನೀಗಿವೆ.ಅಂಕಮನಾಳು ಗ್ರಾಮದ ರೈತ ಬಸವರಾಜ ಎಂಬುವವರು, ಕುರಿ,ಆಕಳು,ಹಾಗೂ ಗಾಡಿಗೆ ಹೂಡಿದ್ದ ಎತ್ತುಗಳೊಂದಿಗೆ ತಮ್ಮ ಎತ್ತಿನ ಗಾಡಿಯಲ್ಲಿ ಕೆರೆ ಏರಿಯ ಮೇಲೆ ಚಲಿಸುವಾಗ ಆಯಾ ತಪ್ಪಿ ಎತ್ತಿನ ಗಾಡಿ ಕೆರೆ ಏರಿಯ ಮೇಲಿಂದ ಮುಗುಚಿ ಬಿದ್ದಿದೆ,ಪರಿಣಾಮ ರಾಸುಗಳು ಅಸು ನೀಗಿವೆ ರೈತ ಬವರಾಜನಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿದುಬಂದಿದೆ.ಈ ಘಟನೆ ಯಿಂದ ಆಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಅವರ ಕುಟುಂಭಕ್ಕೆ ಸರ್ಕಾರ ನಷ್ಟಪರಿಹಾರವನ್ನು ನೀಡಬೇಕೆಂದು ಅಲ್ಲಿನ ಜನರು ಸರಕಾರಕ್ಕೆ ಮನವಿ ಮಾಡಿಕೊಳ್ಳುತಿದ್ದಾರೆ.

0 Comments