Ticker

6/recent/ticker-posts

Ad Code

Responsive Advertisement

ಬಂಗ್ಲೆ ಮಲ್ಲಿಕಾರ್ಜುನ ಅವರಿಗೆ ಕನ್ನಡ ಸೇವಾ ವಿಭೂಷಣ ರಾಜ್ಯ ಪ್ರಶಸ್ತಿ ಪ್ರದಾನ.

ಬಳ್ಳಾರಿ, ಸೆ 28. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ ರವರಿಗೆ ಧಾರವಾಡದಲ್ಲಿ ಕನ್ನಡ ಸೇವಾ ವಿಭೂಷಣ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿದರು.

ಧಾರವಾಡ ನಗರದ ರಂಗಾಯಣ ಸಭಾ ಭವನದಲ್ಲಿ ಕನಕಶ್ರೀ ಪ್ರಕಾಶನ ಬ್ಯಾಕೂಡ ವತಿಯಿಂದ ಜರುಗಿದ ಕನಕ ಸಾಹಿತ್ಯ ಸಮ್ಮೇಳನ ಹಾಗೂ ಕರ್ನಾಟಕ ಮಹಿಳಾ ಸಮ್ಮೇಳನ ಸಮಾರಂಭದಲ್ಲಿ ಕನ್ನಡ ಸೇವಾ ವಿಭೂಷಣ ರಾಜ್ಯ ಪ್ರಶಸ್ತಿಯನ್ನು ಬಂಜಾರ ಗುರುಪೀಠದ ಪರಮ ಪೂಜ್ಯರಾದ ಶ್ರೀ ಬಸವ ಸೇವಾ ಸರ್ದಾರ ಮಹಾಸ್ವಾಮೀಜಿಗಳು ಪ್ರದಾನ ಮಾಡಿದರು, 

ಉಧ್ಗಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿಗಳಾದ ಸಿ.ಕೆ.ರಾಮೇಗೌಡರು ದೀಪ ಬೆಳಗುವುದರ ಮುಖಾಂತರ ನೆರವೇರಿಸಿದರು. ಅಧ್ಯಕ್ಷತೆಯನ್ನು ಕನಕಶ್ರೀ ಪ್ರಕಾಶನದ ಅಧ್ಯಕ್ಷರಾದ ಸಿದ್ರಾಮ್ ಎಂ. ನಿಲಜಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಂಡ0ತ ನಾಡಿನ ಹಿರಿಯ ಸಾಹಿತಿಗಳಾದ ಡಾ.ರಾಜೇಶ್ವರಿ ಬಿ. ಹಿರೇಮಠ, ಖ್ಯಾತ ಡೊಳ್ಳಿನಪದ ಕಲಾವಿದರಾದ ಕು.ಸುಮಿತ್ರಾ ದಳವಾಯಿ; ಡಾ.ಎಸ್.ಎಸ್.ಪಾಟೀಲ್, ಸಂಪಾದಕರು, ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹಾಗೂ ಸಾಹಿತಿಗಳಾದ ಲತಾ ಹಾಗೂ ಇನ್ನೀತರರು ಭಾಗವಹಿಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗನ್ನು ತಂದರು.



Post a Comment

0 Comments

Ad Code

Responsive Advertisement