ಬಳ್ಳಾರಿ, ಸೆ.12: ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ಸುಂದರ ಸುತ್ತಣ ಕಾರ್ಯಕ್ರಮದ ಅಂಗವಾಗಿ ದಿನಾಂಕ 12/09/2021 ರಂದು ಸಂಗನಕಲ್ಲು ಗುಡ್ಡಗಾಡು ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯಕ್ರಮ ಆಯೋಸಲಾಗಿದ್ದು ಸಂಸ್ಥೆಯ ಕಾರ್ಯನಿರ್ವಾಹಕರು ಸುಮಾರು 20 ಕ್ಕೂ ಹೆಚ್ಚು ಚೀಲಗಳಲ್ಲಿ (ಅಂದಾಜು 400ಕೆಜಿ) ಪ್ಲಾಸ್ಟಿಕ್ , ಗಾಜಿನ ಬಾಟಲ್ ಮತ್ತು ಇತರೆ ಕಸವನ್ನು ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ ಗಲೀಜಿನಿಂದ ಕೂಡಿದ ಸುತ್ತಣವನ್ನು ಸುಂದರ ಎನ್ನುವಂತೆ ಮಾಡಿದರು.
ಸಂಸ್ಥೆಯ ಕಾರ್ಯನಿರ್ವಾಹಕರಾದ ತ್ರಿವೇದಿ, ರಾಜೇಶ್ವರಿ, ನಾಗರಾಜ್, ಸುದರ್ಶನ್, ಹೇಮಂತ್ ಕುಮಾರ್, ವಿನಯ್, ರಾಯಚೋಟಿ ಸ್ವಾಮಿ, ಕೆಂಚಪ್ಪ, ಗೋಪಾಲ್, ನಿಜಲಿಂಗ, ಸುರೇಶ್, ಪ್ರಕಾಶ್, ವಿರೇಶ್ ಮತ್ತಿತರು ಪಾಲ್ಗೊಂಡಿದ್ದರು.

0 Comments