ಬೆಂಗಳೂರು, ಕಾಂಗ್ರೆಸ್ನ ಒಕ್ಕಲಿಗ ನಾಯಕರ ಸಭೆಯಲ್ಲಿ ಕರ್ನಾಟಕ ರಾಜ್ಯದ ಕಾಂಗ್ರೆಸ್ಸಿನ ಎಲ್ಲಾ ಒಕ್ಕಲಿಗ ನಾಯಕರು ಸೇರಿದ್ದು, ಈ ಸಭೆಯಲ್ಲಿ ರಾಜಕೀಯ ತಂತ್ರಗಾರಿಕೆ ಹಾಗೂ ಮುಂದಿನ ಚುನಾವಣೆಯಲ್ಲಿ ಅಂದರೆ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಒಕ್ಕಲಿಗ ನಾಯಕರು ಸಭೆ ಸೇರಿದ್ದರು.
ಈ ಒಕ್ಕಲಿಗ ನಾಯಕರ ಸಭೆಗೆ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಹಾಜರಿರಲಿಲ್ಲ. ಎಲ್ಲಾರಿಗೂ ಆಶ್ಚರ್ಯ ಆಗಬಹುದು ಒಕ್ಕಲಿಗರು ಆದ ಡಿ. ಕೆ. ಶಿವಕುಮಾರ್ ಈ ಸಭೆಯಲ್ಲಿ ಹಾಜರಿರಲಿಲ್ಲವಲ್ಲ ಅಂತ, ಹೌದು ಇಲ್ಲಿದೆ ಲಾಜಿಕ್, ವಿಚಾರ ಏನೆಂದರೆ ಕೇವಲ ಒಂದು ಸಮುದಾಯದ ನಾಯಕ ನಾನಲ್ಲ ಅಂತ ರಾಜ್ಯದ ನಾಗರೀಕರಿಗೆ ತೋರಿಸುವುದು ಹಾಗೂ ಎಲ್ಲಾ ಸಮುದಾಯದ ನಾಯಕ ಅಂತ ಬಿಂಬಿಸುವ ತಂತ್ರ ಇದಾಗಿತ್ತು.
ಡಿ. ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರಾದ ಮೇಲೆ ಪಕ್ಷದ ಕಾರ್ಯಕರ್ತರು ಹಾಗೂ ಇತರ ನಾಯಕರು ಮೈಕೊಡವಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಮುನ್ನುಗ್ಗುತ್ತಿರುವದು ಗುಟ್ಟಾಗೇನೂ ಉಳಿದಿಲ್ಲ. ಈಗಾಗಲೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮೈಕ್ರೋ ಮನೆಜ್ಮೆಂಟ್ ಎಂಬ ತಂತ್ರಗಾರಿಕೆ ಶುರುವಾಗಿದೆ. ಅಲ್ಲದೆ ಇತರ ಪಕ್ಷದ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಳ್ಳುವ ತಂತ್ರಗಾರಿಕೆ ಕೂಡ ಶುರುವಾಗಿದೆ.
ಹಳೆ ಮೈಸೂರು ಭಾಗ ಹಾಗೂ ಒಕ್ಕಲಿಗರ ಪ್ರಭಾವ ಇರುವಂತಹ ಕ್ಷೇತ್ರಗಳನ್ನು ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಪಡೆದುಕೊಳ್ಳುವ ತಂತ್ರಗಾರಿಕೆ ಅಪಾರವಾಗಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಡಿ. ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೋಡೆತ್ತುಗಳ ಹಾಗೆ ಪಕ್ಷದ ಬೆಳವಣಿಗೆ ಹಾಗೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶತಪ್ರಯತ್ನ ಹಾಗೂ ತಂತ್ರ, ಕುತಂತ್ರ ಈಗಾಗಲೇ ಪ್ರಾರಂಭ ಮಾಡಿರುವುದು.
ಬೆಳಗಾವಿ ಮಹಾನಗರಪಾಲಿಕೆಯ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷವು ಬಹಳ ನಾಜೂಕಾಗಿ ತಂತ್ರಗಾರಿಕೆ ಮಾಡುತ್ತಿದ್ದು, ಅದಕ್ಕೆ ಪುರಾವೆ ಅಥವಾ ಪುಷ್ಟಿ ನೀಡುವಂತೆ ಹಲವಾರು ಉದಾಹರಣೆಗಳು ಇಲ್ಲಿವೆ. ಈಗಾಗಲೇ ರಾಜ್ಯ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಹಲವಾರು ಸಮುದಾಯದ ಮುಖಂಡರುಗಳನ್ನು ಭೇಟಿಯಾಗಿ ಹಲವು ಸುತ್ತಿನ ಮಾತುಕತೆ ಮಾಡಿದ್ದಾರೆ.
ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಹಾಗೆ ಜೆಡಿಎಸ್ ಪಕ್ಷ ನಿಂತಿರುವುದು ಒಕ್ಕಲಿಗರ ಮತದಿಂದ, ಅದೇ ರೀತಿಯಾಗಿ ಬಿಜೆಪಿ ಪಕ್ಷ ಹಿಂದುತ್ವದ ಅಜೆಂಡಾ ದಿಂದ ಅಧಿಕಾರವನ್ನು ಪಡೆಯುವುದಕ್ಕಾಗಿ ಪರಿತಪಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇವೆಲ್ಲ ಮೀರಿ ಒಂದು ಕೈ ಮುಂದಕ್ಕೆ ಹೊರಟಿದೆ ಕಾಂಗ್ರೆಸ್ ಪಕ್ಷ, ಇದಕ್ಕೆ ಉದಾಹರಣೆ ಎಂದರೆ ಡಿ. ಕೆ. ಶಿವಕುಮಾರ್ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಹಲವಾರು ಸಮುದಾಯಗಳನ್ನು ಭೇಟಿ ಮಾಡಿ ಚರ್ಚಿಸಿರುವುದು, ಅದರಂತೆ ಆಟೋಚಾಲಕರು ಹಾಗು ಮುಖಂಡರನ್ನು ಭೇಟಿ ಮಾಡಿ ಚಾಲಕರ ಪರಿಸ್ಥಿತಿ, ಸಮಸ್ಯೆ, ಹಾಗೂ ಪೆಟ್ರೋಲ್ ಬೆಲೆ ಏರಿಕೆ, ಆಟೋ ಗ್ಯಾಸ್ ಬೆಲೆ ಏರಿಕೆ ಮತ್ತು ಇನ್ನಿತರ ವಿಚಾರಗಳನ್ನು ಚರ್ಚಿಸಿರುವುದು, ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಪ್ರಯತ್ನವೆಂಬಂತೆ ಚಾಲಕರ ಘಟಕವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿರುವುದು ಕೂಡ ಇದಕ್ಕೆ ಒಂದು ಉದಾಹರಣೆ ಆಗಿದೆ. ಅಲ್ಲದೆ ಆಗಸ್ಟ್ ತಿಂಗಳಲ್ಲಿ ಸಿದ್ದಾಪುರದ ತಿಗಳರ ಜನಾಂಗದ ನಾಯಕರನ್ನು ಭೇಟಿ ಮಾಡಿರುವುದು ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಮಡಿವಾಳ ಜನಾಂಗದ ನಾಯಕರನ್ನು ಭೇಟಿ ಮಾಡಿರುವುದು ಪುಷ್ಟಿ ನೀಡುತ್ತದೆ. ಅಲ್ಲದೆ ಕಾಂಗ್ರೆಸ್ ಹಿಂದೂಪರ ಎಂಬಂತೆ ಬಿಂಬಿಸುವ ಪ್ರಯತ್ನ ಕೂಡ ನಡೆದಿದೆ. ಇದೇ ಸಪ್ಟೆಂಬರ್ ತಿಂಗಳಲ್ಲಿ ಬಿಜೆಪಿ ಸರ್ಕಾರದ ಎಡವಟ್ಟು ಅದು ಯಾವುದೆಂದರೆ ಸುಪ್ರಿಂಕೋರ್ಟಿನ ಆದೇಶದ ಮೇರೆಗೆ ಹಲವಾರು ಮಂದಿರಗಳನ್ನು ಸ್ಥಳಾಂತರ ಮಾಡುವ ವಿಚಾರವಾಗಿ ಕೆಲವು ಎಡವಟ್ಟಾಗಿರುವುದು ಅಂದರೆ ಮಂದಿರಗಳನ್ನು ಕೆಡವಿರುವುದು, ಇದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ಕೂಡ ಹಿಂದೂಗಳ ಪರವಾಗಿದೆ ಎಂಬುದನ್ನು ಬಿಂಬಿಸುತ್ತಿರುವುದು ಕೂಡ ಒಂದು ಉದಾಹರಣೆ.
ನಾನು ಆಗಲೇ ಹೇಳಿದಂತೆ ಕಾಂಗ್ರೆಸ್ನಲ್ಲಿ ಮೈಕ್ರೋ ಮ್ಯಾನೇಜ್ಮೆಂಟ್ ಅಸ್ತ್ರ ಪ್ರಯೋಗ ಶುರುವಾಗಿದೆ. ಅದು ಏನು ಮೈಕ್ರೋ ಮನೆಜ್ಮೆಂಟ್ ಅಂದರೆ ಸಣ್ಣ ಸಣ್ಣ ಸಮುದಾಯಗಳ ಓಲೈಕೆ ಮಾಡುವುದು ಹಾಗೂ ಗಣನೆಗೆ ತೆಗೆದುಕೊಳ್ಳುವುದು. ಕಾಂಗ್ರೆಸ್ ಪಾಲಿಗೆ ಒಕ್ಕಲಿಗ ನಾಯಕನೆಂದರೆ ಅದು ಡಿ. ಕೆ. ಶಿವಕುಮಾರ್, ಅದನ್ನು ಮೀರಿ ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗದೆ ಎಲ್ಲಾ ಸಮುದಾಯದ ನಾಯಕರಾಗಲು ಹೊರಟಿದ್ದಾರೆ. ಸಣ್ಣ ಸಣ್ಣ ಸಮುದಾಯಗಳ ಮತ ಬೇಟೆಯೇ ಡಿ. ಕೆ. ಶಿವಕುಮಾರ್ ಅವರ ಪ್ಲಾನ್. ನಾನು ಆಗಲೇ ಹೇಳಿದಂತೆ ಬಿಜೆಪಿ ಮತ್ತು ಜೆಡಿಎಸ್ ನಿಂತಿರುವುದು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಮೇಲೆ.
ಅಲ್ಪಸಂಖ್ಯಾತರ, ಆಟೋಚಾಲಕರ ಹಾಗೂ ಸಣ್ಣ ಸಮುದಾಯದ ಮನವೊಲಿಕೆ ಪ್ಲಾನ್ ಡಿಕೆಶಿಯದು. ಈಗಾಗಲೇ ಈ ನಿಟ್ಟಿನಲ್ಲಿ ಮೈಕ್ರೋ ಮ್ಯಾನೇಜ್ಮೆಂಟ್ ಎಂಬ ಅಸ್ತ್ರವು ಪ್ರಯೋಗವಾಗಿದೆ. ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಲೈಂಗಿಕ ಅಲ್ಪಸಂಖ್ಯಾತರನ್ನು ಕೂಡ ಮನವೊಲಿಸುವ ಪ್ರಯತ್ನ ಕೂಡ ನಡೆದಿದೆ. ಕೇವಲ ಒಕ್ಕಲಿಗ ಸಮುದಾಯಕ್ಕೆ ನಾಯಕನಾಗದೆ ಎಲ್ಲಾ ಸಮುದಾಯಗಳ ನಾಯಕನಾಗಲು ಡಿಕೆಶಿ ಹೊರಟಿರುವುದು ಗುಟ್ಟಾಗೇನುಳಿದಿಲ್ಲ. ಮುಂದಿನ ದಿನಗಳಲ್ಲಿ ಡಿಕೆಶಿಯ ತಂತ್ರಗಾರಿಕೆ ಯಾವ ರೀತಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಕಾದುನೋಡಬೇಕಾಗಿದೆ.
-Shivaprasad,G. 7204714959



0 Comments