ಆಜಾದಿ ಕಾ ಅಮೃತ್ ಮಹೋತ್ಸವ: ಜಿಲ್ಲಾ ಕೈಗಾರಿಕಾ ಕೇಂದ್ರದ ರಪ್ತು ಉತ್ತೇಜನಾ ಕಾರ್ಯಕ್ರಮ
ಬಳ್ಳಾರಿ,ಸೆ.24: ಜಿಲ್ಲೆಯಲ್ಲಿ ವಿವಿಧ ಉದ್ದಿಮೆಗಳನ್ನು ಸ್ಥಾಪಿಸಲು ಹಾಗೂ ವಿವಿಧ ಉತ್ಪನ್ನಗಳನ್ನ ರಫ್ತು ಮಾಡಲು ವಿಫುಲ ಅವಕಾಶಗಳಿದ್ದು,ಉದ್ದಿಮೆದಾರರಿಗೆ ಭೂಮಿ ಒದಗಿಸುವಿಕೆ, ಅನುಮೋದನೆ, ಕಾರ್ಮಿಕರ ಕೌಶಲ್ಯವೃದ್ಧಿ ಸೇರಿದಂತೆ ವಿವಿಧ ರೀತಿಯ ಅಗತ್ಯ ಸಹಕಾರಗಳನ್ನು ಜಿಲ್ಲಾಡಳಿತ ಆದ್ಯತೆ ಮೇರೆಗೆ ಒದಗಿಸಲಿದೆ. ಕಡ್ಡಾಯವಾಗಿ ಸ್ಥಳೀಯರಿಗೆ ಉದ್ಯೋಗ ನೀಡುವುದಕ್ಕೆ ಉದ್ದಿಮೆಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಸೂಚನೆ ನೀಡಿದರು.
ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ,ಜಿಲ್ಲಾಡಳಿತ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಗರದ ಪೋಲಾ ಹೋಟಲ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಾಣಿಜ್ಯ ಸಪ್ತಾಹದ ರಫ್ತು ಉತ್ತೇಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕೈಗಾರಿಕಾ ನೀತಿ,ಟೆಕ್ಸಟೈಲ್ ಪಾಲಿಸಿ,ಕಾಂಪಿಟ್ ವಿತ್ ಚೀನಾ ಯೋಜನೆಗಳಲ್ಲಿ ವಿವಿಧ ರೀತಿಯ ಕೌಶಲ್ಯಕ್ಕೆ ಉತ್ತೇಜನ ಇದೆ. ಜಿಲ್ಲಾ ಖನಿಜ ನಿಧಿ ಅಡಿಯೂ ಕೌಶಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇನ್ನೂ ಯಾವ ರೀತಿಯ ಕೌಶಲ್ಯ ಅಗತ್ಯ ಎಂದು ಉದ್ದಿಮೆದಾರರು ತಿಳಿಸಿದಲ್ಲಿ ಜಿಲ್ಲಾಡಳಿತದಿಂದಲೂ ಕೌಶಲ್ಯ ತರಬೇತಿಯನ್ನು ಸ್ಥಳೀಯರಿಗೆ ಕೊಡಿಸಲಾಗುವುದು ಎಂದು ಹೇಳಿದ ಡಿಸಿ ಮಾಲಪಾಟಿ ಅವರು ತಾವು ಕೂಡ ಸ್ಥಳೀಯ ಜನರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯಮಗಳನ್ನ ಸ್ಥಾಪಿಸಿ ಉದ್ಯೋಗ ನೀಡುವುದಕ್ಕೆ ಮುಂದಾಗಬೇಕು ಎಂದರು.ಬಳ್ಳಾರಿಯಲ್ಲಿ ಬೆಳೆಯುವ ಮೆಣಸಿನಕಾಯಿ ಬೆಳೆಯಲ್ಲಿ ಶೇ.80ರಷ್ಟು ಬ್ಯಾಡಗಿ ಮಾರುಕಟ್ಟೆಗೆ ಹೋಗುತ್ತದೆ;ಅದರ ಬದಲು ಇಲ್ಲಿಯೇ ಪ್ರೊಸೆಸಿಂಗ್ ಯೂನಿಟ್ ಸ್ಥಾಪಿಸಿದರೇ ಸಾಗಾಣಿಕೆ ವೆಚ್ಚ ಉಳಿಯುವುದರ ಜತೆಗೆ ಒಳ್ಳೆಯ ದರ ರೈತರಿಗೆ ಸಿಗುತ್ತದೆ ಮತ್ತು ಉದ್ದಿಮೆದಾರರಿಗೂ ಅನುಕೂಲವಾಗುತ್ತದೆ;ಈ ನಿಟ್ಟಿನಲ್ಲಿಯೂ ಇಲ್ಲಿನ ಉದ್ದಿಮೆದಾರರು ಯೋಚಿಸಬೇಕು ಎಂದು ವಿವರಿಸಿದ ಜಿಲ್ಲಾಧಿಕಾರಿಗಳು ಬಳ್ಳಾರಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಣಸಿಕಾಯಿ ಸಂಸ್ಕರಣಾ ಘಟಕಕ್ಕೆ 9 ಎಕರೆ ಹಂಚಿಕೆ ಮಾಡಲಾಗಿದ್ದು,ಇನ್ನೂ 3 ಎಕರೆ ಹಂಚಿಕೆ ಮಾಡಲಾಗುವುದು ಎಂದರು.ವಿಜಯನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಮೂಲಸೌಕರ್ಯ ಕಲ್ಪಿಸುವಿಕೆಯಲ್ಲಿ ವಿಫುಲ ಅವಕಾಶಗಳಿದ್ದು,ಇತ್ತಲೂ ಗಮನಹರಿಸಿ ಹೂಡಿಕೆ ಮಾಡುವುದಕ್ಕೆ ಉದ್ದಿಮೆದಾರರು ಮುಂದಾಗಬೇಕು ಎಂದರು.ಜಿಲ್ಲೆಯಲ್ಲಿ ಲಭ್ಯವಿರುವ ಉತ್ಪನ್ನಗಳಿಗೆ ರಫ್ತಿಗೆ ಇರುವ ಅವಕಾಶಗಳ ಬಗ್ಗೆ ಪರಿಚಯಿಸುವುದು;ಈಗಾಗಲೇ ಜಿಲ್ಲೆಯಿಂದ ರಫ್ತಾಗುತ್ತಿರುವ ಉತ್ಪನ್ನಗಳಿಗೆ ಇನ್ನೂ ಹೆಚ್ಚಿನ ಉತ್ಪನ್ನಗಳನ್ನು ಬೇಡಿಕೆ ಇರುವಂತೆ ದೇಶಗಳಿಗೆ ರಫ್ತು ಮಾಡುವ ಬಗ್ಗೆ ಅರಿವು ಮೂಡಿಸುವುದು,ರಫ್ತು ಕ್ಷೇತ್ರದಲ್ಲಿ ದೇಶ ಮತ್ತು ವಿದೇಶಗಳಲ್ಲಿರುವ ಅವಕಾಶಗಳನ್ನು ತಿಳಿಸಿಕೊಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ರಫ್ತು ಉತ್ತೇಜನಕ್ಕಾಗಿ ಈಗಾಗಲೇ ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ರಫ್ತು ಉತ್ತೇಜನಾ ಸಮಿತಿ ರಚಿಸಲಾಗಿದ್ದು,ರಫ್ತು ಉತ್ತೇಜನಕ್ಕೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಕೇAದ್ರ ಸರಕಾರದ ಕಾರ್ಯಕ್ರಮಗಳಿಗನುಗುಣವಾಗಿ ಪ್ರತಿ ಜಿಲ್ಲೆಯನ್ನು ರಫ್ತುಕೇಂದ್ರವಾಗಿಸುವ ದೃಷ್ಟಿಯಿಂದ ಜಿಲ್ಲಾ ರಫ್ತು ಹಬ್ ಅನ್ವಯ ಗ್ರಾö್ಯನೈಟ್,ಜೀನ್ಸ್, ಐರಾನ್ ಸಂಬAಧಿತ ಉತ್ಪನ್ನಗಳು, ಎಂಜನಿಯರಿAಗ್ ಉತ್ಪನ್ನಗಳು, ಅಂಜೂರ, ಮೆಣಸಿನಕಾಯಿ, ಉಡುಪುಗಳು, ಅಕ್ಕಿಗಳನ್ನು ಗುರುತಿಸಲಾಗಿದೆ. ಒಂದು ಜಿಲ್ಲೆ ಒಂದು ಉತ್ಪನ್ನದತ್ತ ಗಮನ, ರಫ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿ ರಫ್ತು ಉತ್ತೇಜನಕ್ಕೆ ಕ್ರಮವಹಿಸಲಾಗುತ್ತಿದೆ ಎಂದರು.
*ಅಮೆಜಾನ್ ಫ್ಲಿಫ್ ಕಾರ್ಟ್ನೊಂದಿಗೆ ಒಪ್ಪಂದ: ಬಳ್ಳಾರಿ ಜಿಲ್ಲೆಯಲ್ಲಿರುವ ಸ್ಥಳೀಯ ಉತ್ಪನ್ನಗಳಿಗೆ ಇ-ಕಾಮರ್ಸ್ ಫ್ಲಾಟ್‌ಫಾರಂ ಮೂಲಕ ಮಾರುಕಟ್ಟೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಮೆಜಾನ್ ಮತ್ತು ಫ್ಲಿಫ್‌ಕಾರ್ಟ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಬಂಕದ್ ಅವರು ತಿಳಿಸಿದರು.
ಜಿಲ್ಲೆಯಲ್ಲಿರುವ ಉದ್ದಿಮೆದಾರರು,ಉತ್ಪಾದಕರು ಹಾಗೂ ವ್ಯಾಪಾರಸ್ಥರು ತಮ್ಮ ಉತ್ಪನ್ನಗಳನ್ನು ಇ-ಕಾಮರ್ಸ್ ಮೂಲಕ ಮಾರಾಟ ಮಾಡಬಹುದಾಗಿದೆ. ಈಗಾಗಲೇ ಅಮೆಜಾನ್ ಸಂಸ್ಥೆ ಮತ್ತು ಉದ್ದಿಮೆದಾರರೊಂದಿಗೆ ಸಮಾಲೋಚನಾ ಸಭೆ ನಡೆಸಿ ಉದ್ದಿಮೆಗಳನ್ನು ಇ-ಕಾಮರ್ಸ್ ಮೂಲಕ ಆನ್‌ಬೋರ್ಡ್ ಮಾಡಲು ಕ್ರಮವಹಿಸಲಾಗುತ್ತಿದೆ ಎಂದರು.
ರಫ್ತು ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ಸರಕಾರದಿಂದ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಹೊಸ ಕೈಗಾರಿಕಾ ನೀತಿಯು ರಫ್ತು ಉದ್ದಿಮೆಗಳಿಗೆ ವಿಶೇಷವಾದ ರಿಯಾಯ್ತಿ ಮತ್ತು ಸೌಲಭ್ಯಗಳನ್ನು ಮತ್ತು ಪ್ರಶಸ್ತಿಗಳನ್ನು ನೀಡುತ್ತಿದೆ ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿರುವ ಉತ್ಪಾದಕರು,ಉದ್ದಿಮೆದಾರರ ಹಾಗೂ ಕುಶಲಕರ್ಮಿಗಳು ಈ ರಫ್ತು ಉತ್ತೇಜನಾ ಕಾರ್ಯಕ್ರಮಗಳ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.ಬಳ್ಳಾರಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಅವರು ಮಾತನಾಡಿ ರಫ್ತುದಾರರಿಗೆ ಉತ್ಪನ್ನಗಳ ರಫ್ತು ಸಂದರ್ಭದಲ್ಲಿ ಸಾಕಷ್ಟು ಗೊಂದಲಗಳು ಮತ್ತು ಪ್ರಶ್ನೆಗಳು ಮೂಡುವುದು ಸಹಜ. ಅವುಗಳಿಗೆಲ್ಲವುಗಳನ್ನು ಇಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಮತ್ತು ಅನೇಕ ಸಲಹೆ-ಸೂಚನೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದರು.’
ಈ ಸಂದರ್ಭದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಾಲನ್ನ, ವಿಜಯನಗರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕ ಕೊತಂಬರಿ, ಡಿಜೆಎಫ್‌ಐನ ಅಕ್ಷಯಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ನಾಗರಾಜ ಸೇರಿದಂತೆ ಉದ್ದಿಮೆದಾರರು ಇದ್ದರು.
ನಂತರ ರಫ್ತುಗೆ ಸಂಬಧಿಸಿದ0ತೆ ವಿವಿಧ ವಿಷಯಗಳ ಕುರಿತು ವಿಚಾರಸಂಕಿರಣಗಳು ನಡೆದವು.

0 Comments