Ticker

6/recent/ticker-posts

Ad Code

Responsive Advertisement

ವಿಧಾನ ಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ

ಬೆಂಗಳೂರು, ಸೆಪ್ಟೆಂಬರ್ 14, (ಕರ್ನಾಟಕ ವಾರ್ತೆ) : ವಿಧಾನಸಭೆಯ ಅಧಿವೇಶನದ ಪ್ರಾರಂಭದಲ್ಲಿ  ನಿನ್ನೆ ನಿಧನರಾದ ರಾಜ್ಯ ಸಭೆಯ ಹಾಲಿ ಸದಸ್ಯ ಹಾಗೂ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಹಾಗೂ ಇತ್ತೀಚೆಗೆ ನಿಧನರಾದ ರಾಷ್ಟ್ರ ಪ್ರಶಸ್ತಿ ವಿಜೇತ ಹಾಗೂ ಚಿತ್ರನಟ ಬಿ.ವಿಜಯ್ ಕುಮಾರ್ (ಸಂಚಾರಿ ವಿಜಯ್) ಅವರಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗೆಡೆ ಕಾಗೇರಿ ಅವರು ಸಂತಾಪ ಸೂಚನೆ ಮಂಡಿಸಿದರು.  

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚನೆಗೆ ಧ್ವನಿ ಗೂಡಿಸಿ, ಆಸ್ಕರ್ ಫರ್ನಾಂಡಿಸ್ ಅವರು ವಿಭಿನ್ನ ಅಪರೂಪದ ರಾಜಕಾರಣಿಯಾಗಿದ್ದು, ಅತ್ಯಂತ ಸರಳ ಮತ್ತು ಸ್ವಚ್ಚ ರಾಜಕಾರಣವನ್ನೇ ಅವರ ಜೀವನದುದ್ದಕ್ಕೂ   ನಡೆಸಿಕೊಂಡು ಬಂದಿದ್ದಾರೆ.

ನಮ್ಮಲ್ಲಿದ್ದ ಆದರ್ಶಗಳು ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತವೆ ಆದರೆ ಶ್ರೀಯತರು ಉಡುಪಿಯಲ್ಲಿದ್ದಾಗಲೂ ಹಾಗೂ ದೆಹಲಿಗೆ ಹೋದಾಗಲು ಒಂದೇ ರೀತಿ ಇದ್ದರು.  ಇವರಿಂದ  ಕರ್ನಾಟಕದ ಪ್ರಗತಿಗೆ ಬಹಳ ಸಹಾಯವಾಗಿದೆ.  ಅಜಾತಶತ್ರುವಾಗಿದ್ದ ಇವರು ಯಾರ ಮನಸ್ಸನ್ನು ನೋಯಿಸಿಲ್ಲ ಎಂದು ಗುಣಗಾನ ಮಾಡಿದರು.

ಇತ್ತೀಚೆಗೆ ನಿಧನರಾದ ರಾಷ್ಟ್ರ ಪ್ರಶಸ್ತಿ ವಿಜೇತ ಹಾಗೂ ಚಿತ್ರನಟ ಬಿ.ವಿಜಯ್ ಕುಮಾರ್ ಸಣ್ಣ ವಯಸ್ಸಿನಲ್ಲಿ ಬಹಳ ಸಾಧನೆ ಮಾಡಿದವರು.  ರಂಗಭೂಮಿಯಲ್ಲಿ ಬಹಳಷ್ಟು ಕೆಲಸ ಮಾಡಿ ಅನುಭವ ಪಡೆದು ಸಂಗೀತದಲ್ಲೂ ಸಾಧನೆ ಮಾಡಿದ್ದರು. ನಾನು ಅವನಲ್ಲ ಅವಳು ಚಿತ್ರದಲ್ಲಿ  ಮುಂಗಳಮುಖಿಯ ಪಾತ್ರದಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿ ಪಡೆದ ಇವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಸದನದಲ್ಲಿ ಅಗಲಿದ ಗಣ್ಯರಿಗೆ ಒಂದು ನಿಮಿಷಗಳ ಮೌನಾಚರಣೆ ಸಲ್ಲಿಸಿದ ನಂತರ ಮುಖ್ಯಮಂತ್ರಿಗಳು ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಿದರು.


Post a Comment

0 Comments

Ad Code

Responsive Advertisement