ಬಳ್ಳಾರಿ ಸೆ 02.ಬಳ್ಳಾರಿ ಜಿಲ್ಲೆಯ ತಾಲೂಕಿನ ಕೆ.ವೀರಾಪುರ ಗ್ರಾಮದ ಈಶ್ವರ ರೆಡ್ಡಿ 1999ರಿಂದ2021ವರಗೆ ಆರ್ಮಿಯಲ್ಲಿ ಸೇವೆ ಸಲ್ಲಿಸಿದ ವೀರಯೋಧನಿಗೆ ಗುರುವಾರ ನಗರದಲ್ಲಿ ಅದ್ದೂರಿ ಸ್ವಾಗತ ಕೋರಿದರು.22.ವರ್ಷಗಳ ಕಾಲ ಆರ್ಮಿ ನಲ್ಲಿ ಸೇವೆ ಸಲ್ಲಿಸಿ ನಗರಕ್ಕೆ ಆಗಮಿಸಿದ್ದರು. ನಗರದಲ್ಲಿ ಜನರು ಅವರನ್ನು ಕುದುರೆ ಮೇಲೆ ಮೆರವಣಿಗೆ ಮಾಡಿದರು.
ಈ ಸಂದರ್ಭದಲ್ಲ್ಲಿ ಮಾತನಾಡಿದ ಯೋಧ ಈಶ್ವರ ರೆಡ್ಡಿ, ತವರು ಜಿಲ್ಲೆನಲ್ಲಿ ಅದ್ದೂರಿ ಸ್ವಾಗತ ನೋಡಿ ಸಂತೋಷ ವ್ಯಕ್ತಪಡಿಸಿದರು,ಇಷ್ಟು ದಿನಗಳು ಕಾಲ ಆರ್ಮಿನಲ್ಲಿ ಇದ್ದರು ಸ್ವಾಗತ ನೋಡಿ ಮತ್ತೆ ಉತ್ಸಾಹ ಜಾಸ್ತಿ ಆಗಿದೆ ,ಯುವಕರು ದೇಶ ಭದ್ರತೆಗೆ ಸಿದ್ದರಾಗ ಬೇಕು ಎಂದು ನುಡಿದರು. ಈ ಸಂದರ್ಭದಲ್ಲಿ ಶಾಂತ ಕುಮಾರ್, ಮಂಜು,ಲಕ್ಷ್ಮಣ ಅಂಜಿನಿ, ಬಾಷ ನೂರಾರು ಮಂದಿ ಸಾರ್ವಜನಿಕರು ಉಪಸ್ಥಿತರಿದ್ದರು.
VARTHAJALA- BELLARY

0 Comments