Ticker

6/recent/ticker-posts

Ad Code

Responsive Advertisement

ಸಾಂಸ್ಕೃತಿಕ ಕಲೆಗಳನ್ನು ಪ್ರೋತ್ಸಾಹಿಸುವ ಸಂಸ್ಥೆ ಬಿಸಿಎಎ

ಬಳ್ಳಾರಿ, ಆ.06: ಬಳ್ಳಾರಿ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಸೇವೆಯನ್ನು ಸಲ್ಲಿಸುತ್ತ ಸಮಾಜದ ಒಂದು ವಿಶಿಷ್ಟ ಸ್ಥಾನವನ್ನು ಗಳಿಸಿರುವ ಸಂಸ್ಥೆ ಬಳ್ಳಾರಿ ಕಲ್ಚರಲ್ ಆಕ್ಟೀವಿಟೀಸ್ ಅಸೋಸಿಯೇಷನ್ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಪಾಲನ್ನ ನುಡಿದರು.  ಭಾನುವಾರ ಬಿಪಿಎಸ್‌ಸಿ ಶಾಲೆಯ ಆವರಣದಲ್ಲಿ ನಡೆದ ಬಿಸಿಎಎ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಈ ಸಂಸ್ಥೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೀನಿ ಎಂದರು. 

ಅಧ್ಯಕ್ಷ ಶೀಲಾ ಬ್ರಹ್ಮಯ್ಯ ಅವರು ಕಾರ್ಯಕ್ರಮ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ  ಮಾಡಿದರು. ಸಂಸ್ಥೆಯ ವಾರ್ಷಿಕ ವರದಿಯನ್ನು ಗೌರವ ಕಾರ್ಯದರ್ಶಿ ಯಶ್ವಂತ್ ರಾಜ್ ಸಭೆ ಗೆ ವಿವರಿಸಿದರು. ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷರು ಪಾಲನ್ನ, ನಿವೃತ್ತ ಪ್ರಾಂಶುಪಾಲರು ಜಿ. ಆರ್.ವೆಂಕಟೇಶುಲು , ಕಾಂಡ್ರ ಶ್ರೀರಾಮುಲು, ನಿವೃತ್ತ ಉಪನ್ಯಾಸಕರು ಡಾ. ದೇವಣ್ಣ ಅವರನ್ನು ಸತ್ಕರಿಸಿದರು. ದೇಹತ್ಯಾಗ ಮಾಡಿದ ಸಂಸ್ಥೆಯ ಸದಸ್ಯರು, ಇತರ ಕಲಾವಿದರು, ಸಾಹಿತಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎರಡು ನಿಮಿಷ ಮೌನಾಚಾರಣೆ ಮಾಡಿದರು. 

ಸಂಸ್ಥೆಯ 2021-2024 ವಾರ್ಷಿಕ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶೀಲಾ ಬ್ರಹ್ಮಯ್ಯ  ವಿ. ರವಿಕುಮಾರ್, ಪಿ ಗಾದೆಪ್ಪ ,ಡಾಕ್ಟರ್ ರಾಧಾಕೃಷ್ಣ ,ಡಾಕ್ಟರ ಯಶವಂತ್ ಭೂಪಾಲ್, ಯಶವಂತರಾಜ್, ಎಂಟಿ. ಮಲ್ಲೇಶ್, ಎನ್ ಪ್ರಕಾಶ್, ವಿ. ರಾಮಚಂದ್ರ ನರಸೆಪಲ್ಲಿ ನಾಗರಾಜ್ ,ಎಸ್. ಸಿ. ಬ್ರಹ್ಮಾಯ್ಯ,ಆರ್. ನಾಗರಾಜ್, ಅವ್ವಾರು ಮಂಜುನಾಥ್, ಪಿಯತಿರಾಜುಲು, ರಾಮಕೃಷ್ಣ ,ರಾಮಮೂರ್ತಿ, ಟಿ ನಾಗಭೂಷಣ, ಶೇಷರೆಡ್ಡಿ, ತಿಪ್ಪೇರುದ್ರಪ್ಪ ,ದೊಡ್ಡನಗೌಡ, ಮೌಲಾಲಿ, ಎಸ್ಪಿ ವೆಂಕಟೇಶ್, ಟಿ ನಾಗರಾಜ್, ಉದಯಕುಮಾರ್ ,ಎಚ್ಎಮ್ ರಾಮೇಶ್ವರ, ಕೆಸಿ ಸುರೇಶ ಬಾಬು, ಅಲ್ಲಂ ಚನ್ನಪ್ಪ, ಮಹಾ ರುದ್ರಗೌಡ ,ಚನ್ನಪ್ಪ, ಮಲ್ಲಿಕಾರ್ಜುನ ಮಸ್ಕಿ, ವಿ. ವೆಂಕಟೇಶ ವಿಶೇಷ ಆಹ್ವಾನಿತರಾಗಿ ಡಾಕ್ಟರ್ ದೇವಣ್ಣ ,ನೇಕಾರ ನಾಗರಾಜ್, ಮಂಜುನಾಥ್ ಶೆಟ್ಟಿ, ಅಲ್ಲಭಕಷ್, ಶಿವಪ್ರಸಾದ್ ,ಜಿಆರ್ ವೆಂಕಟೇಶ್, ಶಿವಾಜಿರಾವ್,ಟಿ. ಎಚ್ ಎಮ್ ಬಸವರಾಜ್, ಶ್ರೀನಿವಾಸರಾವ್, ತಿಪ್ಪೇಸ್ವಾಮಿ, ಗೌರವ ಆಹ್ವಾನಿತರಾಗಿ ಜಿಎಂ ಚಂದ್ರಶೇಖರ ಸ್ವಾಮಿ, ಹರಿಕುಮಾರ್, ಬಿ. ಪ್ರಕಾಶ್ ,ಚಂದ್ರಶೇಖರ್,ಕಾAಡ್ರ ಶ್ರೀರಾಮುಲು ಅವರನ್ನು ಆಯ್ಕೆ ಮಾಡಲಾಯಿತು. 2021-22ಸಾಲಿಗೆ ಲೆಕ್ಕಪರಿಶೊಧಕರಾಗಿ ಪಿ. ಕೆ. ಬಸವರಾಜ ಅವರನ್ನು ಆಯ್ಕೆ ಮಾಡಿದರು. 

ಅಧ್ಯಕ್ಷ ಶೀಲಾ ಬ್ರಹ್ಮಯ್ಯ ಸಂಸ್ಥೆಗೆ ಅವಿರಳ ಸೇವೆಯನ್ನು ಸಲ್ಲಿಸುತ್ತ ಕಲೆಯನ್ನು ಪ್ರೋತ್ಸಾಹಿಸುವ ಅವರ ಕಾಳಜಿ ಅಪಾರ ಎಂದು ಡಾ. ಮಲ್ಲೇಶ್ ಕೀರ್ತಿಸಿದರು. ಪ್ರಾರ್ಥನೆ ನಳಿನಿ , ವಂದನಾರ್ಪಣೆ ಡಾ. ಮಲ್ಲೇಶ್ ನಡೆಸಿಕೊಟ್ಟರು.. ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರು, ಕಲಾವಿದರು  ಹಾಜರಿದ್ದರು.

Post a Comment

0 Comments

Ad Code

Responsive Advertisement