ಬಳ್ಳಾರಿ ಸೆ 06. ನಗರದ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಓದುತ್ತಿರುವ 366 ಇಂಜಿನೀರಿ0ಗ್ ಮತ್ತು ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನಗಳಲ್ಲಿ ಹೆಸರಾದಂತ ಕಂಪನಿಗಳಲ್ಲಿ ಆಯ್ಕೆ ಆಗಿರುತ್ತಾರೆ ಎಂದು ತಿಳಿಸಲು ಸಂತೋಷದ ವಿಷಯವಾಗಿದೆ ಎಂದು ಮಹಾ ವಿದ್ಯಾಲಯದ ಮ್ಯಾನೇಜ್‌ಮೆಂಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಶೈಕ್ಷಣಿಕ ವರ್ಷ2020-21 ಸಾಲಿನಲ್ಲಿ ಹೆಸರಾಂತ ಕಂಪನಿಗಳಾದ -ಟಿ.ಸಿ.ಎಸ್, ಕೇಪ್‌ಜೆಮಿನಿ, ಮೈಂಡ್‌ಟ್ರೀ, ಐ.ಬೀ.ಎಂ, ಜೇ.ಎಸ್.ಡಬ್ಲೂ,ಕಾಗ್ನಿಜಂಟ್, ಟಾಟಾಎಲೆಕ್ಸಿ,ಟೆಕ್ ಮಹೀಂದ್ರ, ಎನ್.ಟಿ.ಟೀ.ಡಾಟಾ,ಕೋಡಿಲಾರ್, ಎಲ್.ಅಂಡ್.ಟೀ ಇಂಪೋಟೆಕ್, ಡೆಲ್ಲೊಟ್ಟೇ, ಎನ್‌ಟಿಟಿ ಡಾಟಾ, ಹೆಕ್ಸಾವೇರ್ ಟಕ್ನಾಲಜಿಸ್, ಆಪ್ಟೆಕ್, ವೆರ್‌ಜಿಯೋ, ಜಾರೋ ಎಡ್ಯೂಕೇಷನ್, ಮೈಕ್ರೋಲಾಂಡ್, ಕ್ಯೂಸ್ಪೆöಡರ್/ಜೇಸ್ಪೆöಡರ್, ಟೆಕ್ನೋಲಾಜಿಕ್ಸ್ ಗ್ಲೋಬಲ್ ಪ್ರೆö ಲಿ., ನೋಬ್ರೋಕರ್.ಕಾಮ್, ಪಿವೀಹೆಚ್ ಸಾಪ್ಟವೇರ್, ಸೈನ್ಡೆಸ್ಕ್, ವರ‍್ಚೂವೋಸ, ಅಜಿಲೈಟ್,ಕ್ಲೋಡ್‌ದಟ್ ಡೀಮಾರ್ಟ, ಬೈಜೂ¸,ï ಹ್ಯಾಲಿಸ್ಬೂ, ವಿಪ್ರೋ ಟಕ್ನಾಲಜಿಸ್, ಎಲ್ಲೋ ಮ್ಯಾನೇಜರ್, ವೇದಾಂತೂ, ಮಾಸ್ಟರ್ ಎಡ್ವಾಜ್, ಅಸ್ಸಂಚೂರ್, ವೆರ್‌ಜಿಯೋ,ಇನ್ಫೋಗೈನ್, ಇನ್ಫೋಪೈನ್, ಡಿಮಾರ್ಟ, ಇಮ್ಮೋವೀಡು ಟಕ್ನಾಲಜಿಸ್, ಮೆವೆರಿಕ್ ಸಿಸ್ಟಮ್ಸ್, ಓಪನ್ ಫಯಿವ್, ತಂತ್ರಗ್ಞಾನ್ ಸಲ್ಯೂಷನ್ಸ್, ಎಕ್ಸ್ವರ್ಕ್ಸ, ಡೆಸ್ಟಿನೇಷನ್ ಟಕ್ನಾಲಜಿಸ್, ಪೆಂಟಾಗನ್ ಸ್ಪೇಸ್, ಇನ್ನೂ ಹಲವಾರು ಕಂಪನಿಗಳು ಕ್ಯಾಂಪಸ್ ಸಂದರ್ಶನಗಳಲ್ಲಿ ಭಾಗವಹಿಸಿ 366 ಇಂಜಿನೀರಿ0ಗ್ ಮತ್ತು ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದಾರೆ.
ಒಟ್ಟಾರೆ 30 ಕ್ಕಿಂತಾ ವಿದ್ಯಾರ್ಥಿಗಳು ಒಂದಕ್ಕಿAತಾ ಹೆಚ್ಚು ಕಂಪನಿಗಳಲ್ಲಿ ನೇಮಕಾತಿ ಪಡೆದಿದ್ದಾರೆ ಎಂದು ತಿಳಿಸಲು ತುಂಬಾ ಹೆಮ್ಮೆಯ ವಿಷಯವಾಗಿದೆ. ಇನ್ನುಳಿದ 336ವಿದ್ಯಾರ್ಥಿಗಳು ಹೆಸರಾಂತ ಕಂಪನಿಗಳಲ್ಲಿ ಉತ್ತಮ ಪ್ಯಾಕೆಜಿನೊಂದಿಗೆ ಆಯ್ಕೆಯಾಗಿದ್ದಾರೆ. ಇನ್ನೂ ಹಲವಾರು ಕಂಪನಿಗಳಿAದ ಫಲಿತಾಂಶಗಳ ನಿರೀಕ್ಷೆಮಾಡಲಾಗುತ್ತಿದೆ.
ಮೂರು ವಿದ್ಯಾರ್ಥಿಗಳು ವಾರ್ಷಿಕ 10ಲಕ್ಷ ರೂಪಾಯಿಗಳ ಪ್ಯಾಕೆಜಿನೊಂದಿಗೆ ನೇಮಕಾತಿಯಾದರೇ, ಇನ್ನುಳಿದ ವಿದ್ಯಾರ್ಥಿಗಳು ವಾರ್ಷಿಕ 3.5 ನಿಂದ 4.5ಲಕ್ಷ ರೂಪಾಯಿಗಳ ಪ್ಯಾಕೆಜಿನೊಂದಿಗೆ ನೇಮಕಾತಿಯಾಗಿದ್ದಾರೆ, ಎಂದು ತಿಳಿಸಲು ತುಂಬಾ ಸಂತೋಷದ ವಿಷಯವಾಗಿದೆ.ಕಾಲೇಜಿನ ಅಧ್ಯಕ್ಷರಾದ ಅಲ್ಲಂ ಚನ್ನಪ್ಪ ಇವರು, ಇಂತಹ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ, ಹಾಗು ಮಹಾವಿದ್ಯಾಲಯದ ಪ್ಲೇಸ್‌ಮೆಂಟ್ ಆಫೀಸ್ ತಂಡದ ಅವಿಶ್ರಾಂತ ಶ್ರಮೆಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ವೀ.ವಿ.ಸಂಘದ ಅಧ್ಯಕ್ಷರಾದ ಗುರುಸಿದ್ದಸ್ವಾಮಿ, ಉಪಾಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ದರೂರು ಶಾಂತವೀರನ ಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್ ಗೌಡರು. ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ ಮತ್ತು ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ, ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಇನ್ನು ಉತ್ತಮ ಸಾಧನೆ ಮಾಡಲು, ಮತ್ತು ಇನ್ನು ಮಹಾವಿದ್ಯಾಲಯದ ಕ್ಯಾಂಪಸ್ ಸಂದರ್ಶನಗಳಲ್ಲಿ ಭಾಗವಹಿಸಲಿರುವ ಅನೇಕ ಕಂಪನಿಗಳಲ್ಲಿ ಯಶಸ್ವಿಯಾಗಲು ಇನ್ನಿತರ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

0 Comments