Ticker

6/recent/ticker-posts

Ad Code

Responsive Advertisement

ನೂತನ ವಿಜಯನಗರ ಜಿಲ್ಲೆ ಉದ್ಘಾಟನೆ ಪ್ರಯುಕ್ತ ಎಲ್ಲಾ ಗ್ರಾ.ಪಂ.ಗಳಿಗೆ ದೀಪಾಲಂಕಾರ-ರ0ಗೋಲಿ ಸ್ಪರ್ಧೆ, ನೇರಾ ಪ್ರಸಾರ ವ್ಯವಸ್ಥೆ

ಬಳ್ಳಾರಿ, ಸೆ 28. ವಿಜಯನಗರ ಜಿಲ್ಲೆ ರಚನೆಯಾದ ಹಿನ್ನಲೆಯಲ್ಲಿ ಅಕ್ಟೋಬರ್ 2 ಮತ್ತು 3ರಂದು ವಿಜಯನಗರ ಜಿಲ್ಲಾ ಉತ್ಸವ ಹಮ್ಮಿಕೊಂಡಿರುವುದರಿAದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿ ಕಚೇರಿಗಳಿಗೆ ದೀಪಲಂಕಾರ ಮಾಡುವಂತೆ ಬಳ್ಳಾರಿ-ವಿಜಯನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ. 

ವಿಜಯನಗರ ಜಿಲ್ಲೆ ರಚನೆಯಾದ ಹಿನ್ನಲೆಯಲ್ಲಿ ಅಕ್ಟೋಬರ್ 2 ಮತ್ತು 3ರಂದು ವಿಜಯನಗರ ಜಿಲ್ಲಾ ಉತ್ಸವ ಹಮ್ಮಿಕೊಳ್ಳಲಾಗಿದೆ. ಅ.2ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಜಯನಗರ ಜಿಲ್ಲೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಅದ್ದರಿಂದ ವಿಜಯನಗರ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿ ಕಚೇರಿಗಳಿಗೆ ದೀಪಾಲಂಕಾರ ಮಾಡಬೇಕು ಮತ್ತು ಅ.2ರಂದು ರಂಗೋಲಿ ಸ್ಪರ್ಧೆ ಏರ್ಪಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ. ಅ.2ರಂದು ಮುಖ್ಯಮಂತ್ರಿಗಳಿAದ ನೂತನ ಜಿಲ್ಲೆ ಉದ್ಘಾಟನೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೇರಾ ಪ್ರಸಾರ ಮಾಡಲು ಸೂಕ್ತ ವ್ಯವಸ್ಥೆ ಕಲಿಸುವಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಾ.ಪಂ ಇಒ ಮತ್ತು ಗ್ರಾ.ಪಂ ಪಿಡಿಒಗಳಿಗೆ ನಿರ್ದೇಶನ ನೀಡಲಾಗಿದೆ.


Post a Comment

0 Comments

Ad Code

Responsive Advertisement