Ticker

6/recent/ticker-posts

Ad Code

Responsive Advertisement

RAJIV GANDHI KHEL RATHNA - `ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಬದಲಾವಣೆ ಹಿಂದೆ ಸೇಡಿನ ರಾಜಕಾರಣ': ಎಸ್.ಮನೋಹರ್

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಬದಲಾವಣೆ ಹಿಂದೆ ಸೇಡಿನ ರಾಜಕಾರಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ: -ಎಸ್.ಮನೋಹರ್

ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿನಲ್ಲಿ ನೀಡಲಾಗುತ್ತಿದ್ದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಅನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನಾ ಪ್ರಶಸ್ತಿ ಎಂದು ಮರು ನಾಮಕರಣ ಮಾಡಲಾಗಿದ್ದು ಇಬ್ಬರು ಗಣ್ಯಮಹನೀಯರುಗಳನ್ನು ಅಪಮಾನ ಮಾಡುವ ಸಲುವಾಗಿ ಬದಲಾವಣೆಯನ್ನು ಮಾಡಿ ಸೇಡಿನ ರಾಜಕಾರಣ ಮಾಡುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ಆಡಳಿತ ವೈಖರಿ ಖಂಡಿಸಿ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ  ನಡೆಸಲಾಯಿತು .


ಮಾಜಿ ಕ.ವಿ.ಕಾ.ಅಧ್ಯಕ್ಷರಾದ ಎಸ್.ಮನೋಹರ್ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರುಗಳಾದ ಜನಾರ್ಧನ್ ,ಆನಂದ್ ಮತ್ತು ಕೆ.ಪಿ.ಸಿ.ಸಿ.ವಕ್ತಾರರಾದ ಸಲೀಮ್ ರವರು ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರುಗಳಾದ ಇ.ಶೇಖರ್ ,ಪ್ರಕಾಶ್ , ಪುಟ್ಟರಾಜು ,ಚಂದ್ರಶೇಖರ್ ರವರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.


ಎಸ್.ಮನೋಹರ್ ರವರು ಮಾತನಾಡಿ, ಹಾಕಿ ಮಾಂತ್ರಿಕ ಧ್ಯಾನ್ ಚಂದ್ ರವರು ಮತ್ತು ಮಾಹಿತಿ ,ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ದೇಶಕ್ಕೆ ಅಪೂರ್ವ ಕೊಡುಗೆ ಮತ್ತು ದೇಶಕ್ಕಾಗಿ ಬಲಿದಾನ ಕೊಟ್ಟ ಮಾಜಿ ಪ್ರಧಾನಿ ರಾಜೀವ್ ಗಾಂಧಿರವರು ಸ್ಮರಣೀಯ ಮಹನೀಯರು .ಒಂದು ಪ್ರಶಸ್ತಿಗೆ ಇಟ್ಟ ಹೆಸರನ್ನ ಬದಲಾಯಿಸಿ ,ಇನ್ನೂಬ್ಬ ಮಹನೀಯರ ಹೆಸರು ಇಡುವುದು ಇಬ್ಬರಿಗೂ ಅಪಮಾನ ಮಾಡಿದಂತೆ .ಪ್ರಧಾನಿ ನರೇಂದ್ರ ಮೋದಿರವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ .

ಗುಜರಾತ್ ನ ಮೊಟೇರಾ ಕ್ರಿಕೆಟ್ ಸ್ಟೇಡಿಯಂ ಅನ್ನು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಅಂತ ಬದಲಾಯಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರೇನು ಕ್ರಿಕೆಟ್ ಆಟಗಾರರೇ? ಎಂಬ ಪ್ರಶ್ನೆ ದೇಶದ ಜನರಿಗೆ ಕಾಡುತ್ತಿದೆ.

ಇನ್ನು ಹೆಸರು ಬದಲಾವಣೆ ಮಾಡುವುದೇ ಜೀವನದ ಏಕೈಕ ಸಾಧನೆ ಎಂದುಕೊಂಡಿರುವ ಪ್ರಧಾನಿ ಮೋದಿಯವರು ಇಂತಹ ಹುಸಿ ಪ್ರಚಾರ ತಂತ್ರಗಳನ್ನು ಬದಿಗೊತ್ತಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಆಹಾರ ಸಾಮಗ್ರಿ ಬೆಲೆ ತಗ್ಗಿಸಿ ತಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಲಿ ಎಂದು ಹೇಳಿದರು.

Post a Comment

0 Comments

Ad Code

Responsive Advertisement