Ticker

6/recent/ticker-posts

Ad Code

Responsive Advertisement

ರಾಶ್ಚರುವು ಪಂಚಾಯಿತಿಯಲ್ಲಿ ಶಾಸಕ ಸುಬ್ಬಾರೆಡ್ಡಿ ಫುಡ್ ಕಿಟ್ ವಿತರಣೆ: ಮಿಂಚಿದ H.S. ನರೇಂದ್ರ

ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ರಾಶ್ಚರುವು ಗ್ರಾಮ ಪಂಚಾಯತಿಯಲ್ಲಿ ಉಚಿತ ಫುಡ್ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ನರೇಂದ್ರ ನೆರೆದಿದ್ದ ಎಲ್ಲರಿಗೂ ಸ್ವಾಗತ ಕೋರಿ ಈ ಭಾಗದಲ್ಲಿ ತುಂಬಾ ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕರಾದ ದಿವಂಗತ ಸತ್ಯನಾರಾಯಣ ಶರ್ಮ ರವರನ್ನು ಸ್ಮರಿಸುತ್ತ ಪಕ್ಷದ ಹಿರಿಯ ನಾಯಕರೊಂದಿಗೆ ಒಂದು ತಿಂಗಳ ಹಿಂದೆ ಬಾಗೇಪಲ್ಲಿಯಲ್ಲಿ ಚಾಲನೆ ಮಾಡಿದ ಈ ಕಾರ್ಯಕ್ರಮಕ್ಕೆ ಈ ದಿನ ರಾಶ್ಚರುವು ಪಂಚಾಯಿತಿಯಲ್ಲಿ ಚಾಲನೆ ಸಿಕ್ಕಿದೆ.


ಈಗ ಯಾವುದೇ   ಚುನಾವಣೆಗಳು ಇಲ್ಲಾ ಶಾಸಕರು ಯಾವುದೇ ಪ್ರಚಾರ ಗಿಟ್ಟಿಸಿಕೊಳ್ಳಲು ಈ ಸಮಾರಂಭ ಮಾಡುತ್ತಿಲ್ಲ ನಮ್ಮ ಕ್ಷೇತ್ರದ ಜನಸಾಮಾನ್ಯರು ಕರೋನ ಕರೀ ನೆರಳಿನ ತೆಕ್ಕೆಗೆ ಸಿಕ್ಕಿ ನಲುಗಿದ್ದಾರೆ ಎಷ್ಟೋ ಜನ ಉದ್ಯೋಗ ಆರಿಸಿ ಬೆಂಗಳೂರಿನಂತಹ ನಗರ ಪ್ರದೇಶಗಳಿಗೆ ಗುಳೆ ಹೋಗಿದ್ದು ಅಲ್ಲಿ ನೆಲೆ ಇಲ್ಲದೆ ಮತ್ತೆ ಗ್ರಾಮಪಂಚಾಯಿತಿಗಳಿಗೆ ಬಂದ ಬಡವರಿಗೆ ಜೀವನ ನಡೆಸಲು ತುಂಬಾ ಕಷ್ಟವಾಗಿದೆ ಇಂತಹ ಸಮಯದಲ್ಲಿ ಎಲ್ಲ ಜನಾಂಗದವರಿಗೂ ಪಕ್ಷಭೇದ ಮರೆತು ಜಾತಿಭೇದ ಮರೆತು ತಮ್ಮ ಸಹಾಯ ಹಸ್ತ ನೀಡುತ್ತಿದ್ದಾರೆ ಎಂದು ಸಮಾರಂಭದಲ್ಲಿ ಜನಸಾಮಾನ್ಯರನ್ನೇ ನಿಮಗೆ ಟೋಕನ್ ಕೊಡುವಾಗ ಯಾರಾದರೂ ಜಾತಿ ಪಕ್ಷ ಕೇಳಿದರೇ ಎಂದು ಪ್ರಶ್ನೆ ಕೇಳಿದಾಗ ಜನಸಾಮಾನ್ಯರು ಇಲ್ಲ ಎಂದು ಚಪ್ಪಾಳೆ ಹೊಡೆದಿರುತ್ತಾರೆ .



ಕ್ಷೇತ್ರದಲ್ಲಿ ಇವರು ಯಾವ ರೀತಿ ಯಾರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ ಎಂದು ತಿಳಿಸಿರುತ್ತಾರೆ. ವಿದ್ಯಾಭ್ಯಾಸಕ್ಕಾಗಬಹುದು ರೋಗಿಗಳಿಗಾಗಬಹುದು ನಿರುದ್ಯೋಗಿಗಳಿಗೆ ಉದ್ಯೋಗಗಳಿಗಾಗಬಹುದು ಅವರ ಸ್ವಂತ ಖರ್ಚಿನಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ ಯಾರನ್ನೋ ಮೆಚ್ಚಿಸುವುದಕ್ಕಾಗಿ ಮಾಡುತ್ತಿಲ್ಲ ವೆಂದು ಕುಡಿಯುವ ನೀರಿಗೆ ಒತ್ತು ಕೊಟ್ಟಿರುವುದು ರಸ್ತೆ ಕಾಮಗಾರಿಗಳಿಗೆ ಒತ್ತು ಕೊಟ್ಟಿರುವುದು ಸಿಮೆಂಟ್ ರಸ್ತೆಗಳಿಗೆ ಒತ್ತು ಕೊಟ್ಟಿರುವುದು ಎಲ್ಲಾ ಸಮಾಜ ಸೇವೆಗಳು ಯಾವ ರೀತಿ ನಡೆಯುತ್ತಿವೆ ಎಂದು ಎಳೆಎಳೆಯಾಗಿ ಜನಸಾಮಾನ್ಯರಿಗೆ ಮನಮುಟ್ಟುವಂತೆ ಮಾತನಾಡಿರುತ್ತಾರೆ.

ಈ ಭಾಗಕ್ಕೆ ಕೆಲವು ಸಮಾಜ ಸೇವಕರು ಬರುತ್ತಾರೆ ಮತ್ತೆ ಸ್ವಲ್ಪ ದಿನಗಳಲ್ಲೇ ಕಣ್ಮರೆಯಾಗುತ್ತಾರೆ ಐವತ್ತು-ನೂರು ಯಾರನ್ನೋ ಮೆಚ್ಚಿಸಲು ಫುಡ್ ಕಿಟ್ ವಿತರಣೆ ಮಾಡುತ್ತಾರೆ ನಮ್ಮ ಬಾಗೇಪಲ್ಲಿ ಪಟ್ಟಣವನ್ನು ಲೂಟಿ ಮಾಡಲೇ ಬರುತ್ತಾರೆ ನಮ್ಮ ಬಗ್ಗೆ ಅಪಪ್ರಚಾರಗಳನ್ನು ಮಾಡುತ್ತಾರೆ ನಾವು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ನಮ್ಮ ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿಯೊಂದೇ ನಮ್ಮಗುರಿ ಪ್ರತಿಯೊಬ್ಬ ಜನಸಾಮಾನ್ಯನಿಗೂ ಸಿಗುವಂತ ಶಾಸಕರು ಗ್ರಾಮ ಪಂಚಾಯತಿ ಸದಸ್ಯರು ಮಾಡುವಂತಹ ಕೆಲಸಗಳು ಜನಸಾಮಾನ್ಯರು ಇವರ ಹತ್ತಿರ ಬಂದು ಮಾಡಿಸಿಕೊಂಡು ಹೋಗುತ್ತಿರುತ್ತಾರೆ ಹಿಂದಿನ ಶಾಸಕರಂತೂ ಚುನಾವಣೆ ಬಂದಾಗ ಬರುವುದಿಲ್ಲ ಕ್ಷೇತ್ರದಲ್ಲಿ ವಾರಕ್ಕೆ ಮೂರು ನಾಲ್ಕು ದಿವಸ ನೆಲೆಯೂರಿ ರುತ್ತಾರೆ ಬಡಕುಟುಂಬದಿಂದ ರೈತಾಪಿ ವರ್ಗದಿಂದ ಬಂದ ಸಮಾಜಸೇವಕರಾದ ಇಂತಹ ಶಾಸಕರನ್ನು ಪಡೆದಿರುವುದು ನಮ್ಮ ಪುಣ್ಯ.


 ಈಗ ಇರುವ ಸರ್ಕಾರವೂ ಮಾಡದ ಯಾವುದೇ ಪಕ್ಷವು ಮಾಡದ ಇಂತಹ ಫುಡ್ ಕಿಟ್ ವಿತರಣೆ ತಾಲೂಕಿನಾದ್ಯಂತ ಮಾಡುತ್ತಿರುವುದು ಇವರು ಸ್ವಂತ ಖರ್ಚಿನಲ್ಲಿಯೆ ಈ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಜನಸಾಮಾನ್ಯರ ನೆರವು ಸಹಾಯಹಸ್ತ ಇರಬೇಕೆಂದು ವಿನಂತಿಸಿಕೊಂಡರು. ರಾಶ್ಚರುವು ಗ್ರಾಮ ಪಂಚಾಯಿತಿ ಯು ಉಪಾಧ್ಯಕ್ಷರಾದ P.S. ಭಾನುಪ್ರಕಾಶ್ ರವರು ಮಾತನಾಡಿ ನಮ್ಮ ಪಂಚಾಯಿತಿಗೆ ಮೂಲಸೌಕರ್ಯಗಳು ಒದಗಿಸಬೇಕು ನಾವು ತುಂಬಾ ಹಿಂದೆ ಉಳಿದಿದ್ದೇವೆ 23 ಹಳ್ಳಿಗಳಲ್ಲಿ ರಸ್ತೆ ಸೌಕರ್ಯವಿಲ್ಲ ಮತ್ತು ಎಷ್ಟೋ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಇದೆ ಮತ್ತು ನಮ್ಮ ಕೆರೆಗೆ ಬರುವ ನೀರು ಪೋಲಾಗುತ್ತಿದೆ ಆಂಧ್ರ ಕಡೆಗೆ ಹೋಗುತ್ತಿದೆ ದಯವಿಟ್ಟು ಆ ನೀರು ನಮಗೆ ಸಿಗುವಂತೆ ಮಾಡಿ ಎಂದು ಬೇಡಿಕೆಗಳು ಶಾಸಕರ ಗಮನಕ್ಕೆ ತರುತ್ತಾರೆ ಇಡೀ ಜಿಲ್ಲೆಯಲ್ಲಿ ಇಂತಹ ಸಮಾಜ ಸೇವಕ ಶಾಸಕರು ನಮಗೆ ಸಿಕ್ಕಿರುವುದು ಪುಣ್ಯ ಎನ್ನುತ್ತಾರೆ. 

ಈ ಬೇಡಿಕೆಗಳಿಗೆ ಓತ್ತು ಕೊಟ್ಟ ಶಾಸಕರು ನಿಮಗೆ ಯಾವುದೇ ಕೆಲಸವಾಗಲಿ ನಾನು ಮಾಡಲು ಸಿದ್ಧ ಸರ್ಕಾರಿ ಜಾಗದಲ್ಲಿ ಯಾರಾದರೂ ಮನೆ ಕಟ್ಟಿಕೊಂಡಿದ್ದಾರೆ ಅವರ ಹೆಸರಿಗೆ ಖಾತೆ ಮಾಡಿಸಿ ಕೊಡುತ್ತೇನೆ ಮತ್ತು ರೈತರು ಸರ್ಕಾರಿ ಜಾಗವನ್ನು ಸುಮಾರು ವರ್ಷದಿಂದ ವ್ಯವಸಾಯ ಮಾಡುತ್ತಿದ್ದ ಅವರಿಗೆ ಯಾವುದೇ ದಾಖಲೆಗಳಿಲ್ಲ ದಿದ್ದರೂ ನನಗೆ ಒಂದು ಅರ್ಜಿಯನ್ನು ಕೊಡಿ ನಿಮ್ಮ ಹೊಲಗಳಿಗೆ ಸಾಗುವಳಿ ಚೀಟಿ ಮಾಡಿಸಿ ಪಹಣಿ ಮತ್ತು ಖಾತೆಯನ್ನು ಮಾಡಿಸಿಕೊಡುತ್ತೇನೆ ಯಾವುದೇ ಅಧಿಕಾರಿಗಳಿಗೆ ಆಗಲಿ ಒಂದು ರೂಪಾಯಿ ಲಂಚ ಕೊಡಬೇಡಿ ಎಂದು ಶರ್ಮಾ ಸ್ವಾಮಿಗಳನ್ನು ಸ್ಮರಿಸುತ್ತಾ ನಾನು ಮೊದಲ ಬಾರಿ ಶಾಸಕರಾಗಲು ಪಕ್ಷೇತರ ಅಭ್ಯರ್ಥಿಯಾದಾಗ ಅತಿ ಹೆಚ್ಚು ಮತಗಳನ್ನು ಕೊಟ್ಟು ಗೆಲ್ಲಿಸಿ ದಂತಹ ನೀವು ಮತ್ತು ನಮ್ಮ ದಿವಂಗತ ಶರ್ಮ ಸ್ವಾಮಿಗಳನ್ನು ನಿಮ್ಮನ್ನು ಯಾರನ್ನು ಮರೆಯಲಾಗುವುದಿಲ್ಲ , ಆದ್ದರಿಂದ ನಿಮ್ಮ ಊರಿನ ಮುಂಭಾಗದಲ್ಲಿ 5 ಲಕ್ಷ ರೂಗಳ ಕೊಟ್ಟು ಶರ್ಮ ಸ್ವಾಮಿಗಳ ಜ್ಞಾಪಕಾರ್ಥ ಅವರ ಪ್ರತಿಮೆ ಯನ್ನು ಮಾಡಿ ಆರ್ಚ ನ್ನು ಕಟ್ಟಿಸಿ ಕೊಡುವುದಾಗಿ ಇಂತಹ ಮಹಾಪುರುಷರನ್ನು ಎಲ್ಲರೂ ನೆನಪಿಸಿಕೊಳ್ಳಬೇಕೆಂದು ಮತ್ತು ನಿಮ್ಮ ಬೇಡಿಕೆಗೆ ತಕ್ಕಂತೆ ಪೀರ್ ಚಾವಡಿಕಟ್ಟಿಸಿ ಕೊಡುವುದಾಗಿ ಒಂದು ಕೋಟಿ ಡ್ಯಾಂ ಕಾಮಗಾರಿ ಹಾಗೂ 80 ಲಕ್ಷ ನಮೋಜ್ ಕಟ್ಟೆ ಇಂದ ಕೊಟ್ಟಂಪಲ್ಲಿ ರಸ್ತೆ ಕಾಮಗಾರಿ ಅತಿಶೀಘ್ರದಲ್ಲೇ ಕಾಮಗಾರಿಗಳು ಪ್ರಾರಂಭವಾಗುತ್ತದೆ .

ಅರಿಗೇವಾರಿಗುಟ್ಟೆ ಇಂದ ಬಿಳ್ಳೂರಿಗೆ ಮತ್ತು ದಿಗವ ಗೊಲ್ಲಪಲ್ಲಿ ಇಂದ ಉಗ್ರಾಣಂಪಲ್ಲಿರಸ್ತೆ ಕಾಮಗಾರಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳು ಇಲ್ಲದೆ ಇರುವ ಹಳ್ಳಿಗಳಿಗೆ ಹಾಕಿಸಿ ಆರು ತಿಂಗಳ ಒಳಗಾಗಿ ಎಲ್ಲಾ ಕಾಮಗಾರಿಗಳನ್ನು ಮುಗಿಸಿ ನಿಮ್ಮ ಕ್ಷೇತ್ರಕ್ಕೆ ಕಾಲಿಡುತ್ತೇನೆ ಎಂದು ಶಪಥ ಮಾಡಿದರು ಮತ್ತು ಎಲ್ಲರಿಗೂ ಒಂದು ನಿವೇಶವನ್ನು ಕುಡಿಸಬೇಕು ಎನ್ನುವುದೇ ನನ್ನ ಒಂದು ಆಸೆ ಇದೆ ಎಂದು ಅದನ್ನು ಮುಂದಿನ ದಿನಗಳಲ್ಲಿ ಮಾಡುತ್ತೇನೆಂದರು.



ನಿಮ್ಮ ಪಂಚಾಯತಿಯಲ್ಲಿ  1,500 ಮನೆಗಳಿವೆ ಆದರೆ ನಾನು 2000 ಕಿಟ್ಟು ಗಳನ್ನು ತರಿಸಿದ್ದೇನೆ ಎಲ್ಲರಿಗೂ ಸಿಗುತ್ತದೆ. ಆತುರ ಪಡದೆ ನಿಧಾನವಾಗಿ ಅಂತರ ಕಾಪಾಡಿ ಕಿಟ್ ಗಳನ್ನು ತೆಗೆದುಕೊಳ್ಳಿ ಎಂದು ಮನವಿ ಮಾಡಿದರು.ಈ ಸಮಾರಂಭದಲ್ಲಿ ಕೆಪಿಸಿಸಿ ಸದಸ್ಯರು ಅಮರನಾಥ ರೆಡ್ಡಿ,ಜಯರಾಮರೆಡ್ಡಿ, ಪ್ರಭಾಕರ್, ಆನಂದ್ ಪಂಚಾಯತಿ ಅಧ್ಯಕ್ಷರಾದ ಲೀಲಾವತಮ್ಮ ಬಾಬುರೆಡ್ಡಿ,ಉಪಾಧ್ಯಕ್ಷರಾದ P.S. ಭಾನುಪ್ರಕಾಶ್ ಸದಸ್ಯರುಗಳಾದ G.B. ಗೋವಿಂದರೆಡ್ಡಿ. ಸಲೀಂ ಅಭಿದ್ ಭಾಷಾ, ಶ್ರೀಮತಿ ಲಕ್ಷ್ಮೀನರಸಮ್ಮ, ಶ್ರೀಮತಿ ಕಮಲಮ್ಮ, ಶ್ರೀಮತಿ ಸರಸ್ವತಮ್ಮ, ಶ್ರೀಮತಿ ರಾಣಿ ಹಾಗೂ ಚೌಡಪ್ಪ ಹಾಗೂ ಯುವ ಮುಖಂಡರಾದ ಬಾಬುರೆಡ್ಡಿ, ಮನೋಹರ್ ರೆಡ್ಡಿ, ಚಲಪತಿ, ಸೋಮು, ನಾಗೇಶ್, ಶಾಮೀರ್, ಮಾಜಿ ಪಿಡಿಓ ವೆಂಕಟರಮಣ ಇನ್ನೂ ಅನೇಕ ಹಿರಿಯ ಮುಖಂಡರು ಯುವ ಮುಖಂಡರು ಭಾಗವಹಿಸಿರುತ್ತಾರೆ. 

ಸಮಾರಂಭದಲ್ಲಿ ಕೆಪಿಸಿಸಿ ಸದಸ್ಯರು ಅಮರನಾಥ ರೆಡ್ಡಿ,ಜಯರಾಮರೆಡ್ಡಿ, ಪ್ರಭಾಕರ್, ಆನಂದ್ ಪಂಚಾಯತಿ ಅಧ್ಯಕ್ಷರಾದ ಲೀಲಾವತಮ್ಮ ಬಾಬುರೆಡ್ಡಿ,ಉಪಾಧ್ಯಕ್ಷರಾದ P.S. ಭಾನುಪ್ರಕಾಶ್ ಸದಸ್ಯರುಗಳಾದ G.B. ಗೋವಿಂದರೆಡ್ಡಿ. ಸಲೀಂ ಅಭಿದ್ ಭಾಷಾ, ಶ್ರೀಮತಿ ಲಕ್ಷ್ಮೀನರಸಮ್ಮ, ಶ್ರೀಮತಿ ಕಮಲಮ್ಮ, ಶ್ರೀಮತಿ ಸರಸ್ವತಮ್ಮ, ಶ್ರೀಮತಿ ರಾಣಿ ಹಾಗೂ ಚೌಡಪ್ಪ ಹಾಗೂ ಯುವ ಮುಖಂಡರಾದ ಬಾಬುರೆಡ್ಡಿ, ಮನೋಹರ್ ರೆಡ್ಡಿ, ಚಲಪತಿ, ಸೋಮು, ನಾಗೇಶ್, ಶಾಮೀರ್, ಮಾಜಿ ಪಿಡಿಓ ವೆಂಕಟರಮಣ ಇನ್ನೂ ಅನೇಕ ಹಿರಿಯ ಮುಖಂಡರು ಯುವ ಮುಖಂಡರು ಭಾಗವಹಿಸಿರುತ್ತಾರೆ.

Post a Comment

0 Comments

Ad Code

Responsive Advertisement