ಮನೆಯಲ್ಲಿ ತೆರೆದ ಬಾಗಿಲ ಮೂಲಕ ಒಳ ಬಂದು ಮನೆಯ ಬೆಡ್ ರೂಮ್‌ನ ಕಬೋರ್ಡ್ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಗಂಗಮ್ಮಗುಡಿ ಪೊಲೀಸ್ ಠಾಣೆಯಲ್ಲಿ ಮನೆಕಳವು ಪ್ರಕರಣ ದಾಖಲಾಗಿರುತ್ತದೆ.
ಗಂಗಮ್ಮಗುಡಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯವರು ದಿನಾಂಕ: 22/08/2021ರಂದು ಗಸ್ತಿನಲ್ಲಿದ್ದಾಗ ಆರೋಪಿಯು ಅನುಮಾನಾಸ್ಪದವಾಗಿ ಬರುತ್ತಿದ್ದು, ಅವರನ್ನು ತಡೆದು ಪರಿಶೀಲಿಸಲಾಗಿ, ಚಿನ್ನಾಭರಣಗಳು ಪತ್ತೆಯಾಗಿದ್ದು, ಅದರ ಬಗ್ಗೆ ವಿಚಾರಣೆಗೊಳಪಡಿಸಿದಾಗ ಈತನು ಕಳವು ಮಾಡಿರುವ ಚಿನ್ನಾಭರಣಗಳನ್ನು ಮಾರಾಟ ಮಾಡಲು ಬಂದಿರುವುದಾಗಿ ತಿಳಿದುಬಂದಿರುತ್ತದೆ.
ಈ ಪ್ರಕರಣದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ, ಆರೋಪಿ ನೀಡಿದ ಮಾಹಿತಿ ಮೇರೆಗೆ ಸುಮಾರು 8 ಲಕ್ಷ ರೂ. ಬೆಲೆಬಾಳುವ 180 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಗಂಗಮ್ಮಗುಡಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿಯು ಪಿರ್ಯಾದುದಾರರ ಮಗಳನ್ನು ಇನ್ಸಾ÷್ಟಗ್ರಾಂನಲ್ಲಿ ಪರಿಚಯಮಾಡಿಕೊಂಡು ಆಕೆಯ ಜೊತೆ ಸುತ್ತಾಡಿ ಆಕೆಯ ಬಳಿ ಇದ್ದ ಒಂದು ಚಿನ್ನದ ಸರವನ್ನು ಪಡೆದುಕೊಂಡು ಗಿರವಿ ಇಟ್ಟು ಬಂದ ಹಣವನ್ನು ಮೋಜು ಮಾಡಿದ್ದು, ನಂತರ ಮತ್ತೆ ಹಣಕ್ಕಾಗಿ ಆಕೆಯನ್ನು ನೀನು ಇನ್ನು ಹೆಚ್ಚಿನ ಆಭರಣಗಳನ್ನು ತಂದು ಕೊಡು ಇಲ್ಲವಾದರೆ ನೀನು ನನಗೆ ಚೈನ್ ಕೊಟ್ಟಿರುವ ವಿಚಾರ ಮತ್ತು ನನ್ನ ಜೊತೆ ಸುತ್ತಾಡುತ್ತಿರುವ ವಿಚಾರವನ್ನು ನಿಮ್ಮ ಮನೆಯವರಿಗೆ ತಿಳಿಸಿ, ನಿನ್ನ ಬಗ್ಗೆ ಅಪಪ್ರಚಾರ ಮಾಡುತ್ತೇನೆಂದು ಬೆದರಿಸಿ ಆಗಾಗ ವಿವಿಧ ಚಿನ್ನದ ಆಭರಣಗಳನ್ನು ಆಕೆಯಿಂದ ಪಡೆದುಕೊಂಡಿದ್ದು ಹಾಗೂ ಪಿರ್ಯಾದುದಾರರ ಮನೆಗೆ ಬಂದಿದ್ದಾಗ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬೆಡ್ ರೂಮ್‌ನ ಕಬೋರ್ಡ್ನಲ್ಲಿದ್ದ ಒಂದು ಲಾಂಗ್ ಚೈನ್‌ಅನ್ನು ಕಳ್ಳತನ ಮಾಡಿಕೊಂಡು ಹೋಗಿ ಮಾರಾಟ ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಆರೋಪಿಯು ಮದ್ಯಪಾನ, ದೂಮಪಾನ ಮಾಡುವ ಹವ್ಯಾಸಿಯಾಗಿದ್ದು, ಮನೆಯಲ್ಲಿ ಖರ್ಚಿಗೆ ಹಣ ನೀಡದೇ ಇರುವುದರಿಂದ ದೈನಂದಿನ ಖರ್ಚಿ ಹಣಕ್ಕಾಗಿ ಈ ಕೃತ್ಯವೆಸಗಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಪ್ರಕರಣದಲ್ಲಿ ಅರುಣ್‌ನಾಗೇಗೌಡ, ಯಶವಂತಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಸಿದ್ದೇಗೌಡ, ಪೊಲೀಸ್ ಇನ್ಸ್ಪೆಕ್ಟರ್, ಗಂಗಮ್ಮಗುಡಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ರವಿಚಂದ್ರ, ಪಿ.ಎಸ್.ಐ ಶ್ರೀ.ಬಸವಂತರಾಯ, ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-ಗಳಾದ ಮಹೇಶ್, ಶ್ರೀ.ಮೋಹನ್ ನಾಯಕ್, ಕರಿಯಪ್ಪ, ರೇಣುಕಪ್ಪ, ಪಿ.ಸಿ ಶ್ರೀ.ಗುರುಮೂರ್ತಿ ರವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.


0 Comments