Ticker

6/recent/ticker-posts

Ad Code

Responsive Advertisement

ಮೋದಿ ಎಂದು ಕುಣಿಯುತ್ತಿದ್ದವರಿಗೆ ಪ್ರಧಾನಿ ಮೂರು ನಾಮ ಹಾಕಿದ್ದಾರೆ: ಸಿದ್ದರಾಮಯ್ಯ ಟೀಕೆ

 ''ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಬಂದರೆ ಸ್ವರ್ಗ ಸೃಷ್ಟಿಯಾಗುತ್ತದೆ ಎಂದಿದ್ದರು. ಆದರೆ, ಭ್ರಷ್ಟಾಚಾರ ಹೆಚ್ಚಿದ್ದರಿಂದ ಯಡಿಯೂರಪ್ಪ ಅವರನ್ನು ಕಿತ್ತು ಹಾಕಿದ್ದಾರೆ. ಈ ಬಗ್ಗೆ ಮಾತನಾಡಲು ಪಕ್ಷದ ಕಾರ್ಯಕರ್ತರು ಹಿಂಜರಿಯಬಾರದು,'' ಎಂದು ಸೂಚಿಸಿದರು.

ಆದರೆ, ಮೋದಿ ಮೋದಿ ಎಂದು ಕುಣಿಯುತ್ತಿದ್ದವರಿಗೆ ಮೋದಿಯವರು ಮೂರು ನಾಮ ಹಾಕಿದ್ದಾರೆ,'' ಎಂದು ವ್ಯಂಗ್ಯವಾಡಿದರು. ''ಕೋವಿಡ್‌ 2ನೇ ಅಲೆಯಲ್ಲಿ ಪದ್ಮನಾಭನಗರದಲ್ಲಿ ಯಾರಾದರೂ ಸೋಂಕಿಗೆ ಬಲಿಯಾಗಿದ್ದರೆ ಅದಕ್ಕೆ ಅಶೋಕ್‌ ಕಾರಣರಾಗುತ್ತಾರೆ. ಯಾಕೆಂದರೆ ಅವರು ಸಚಿವರಾಗಿದ್ದರು. ಈ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆ ಮಾಡಲು ಅಶೋಕ್‌ ಅನುಮತಿ ಬೇಕು ಎನ್ನುತ್ತಾರೆ. ಪದ್ಮನಾಭನಗರವೇನು ಅಶೋಕ್‌ ಸ್ವತ್ತೇ,'' ಎಂದು ಪ್ರಶ್ನಿಸಿದರು.


ಪ್ರಧಾನಿ ಮೋದಿಯವರು ನಿರುದ್ಯೋಗ ಸಮಸ್ಯೆ, ಜಿಡಿಪಿ ಕುಸಿತದ ಬಗ್ಗೆ ಮಾತನಾಡುವುದಿಲ್ಲ. ಬದಲಾಗಿ ಪಾಕಿಸ್ತಾನ, ರಾಮಮಂದಿರದಂತಹ ಭಾವನಾತ್ಮಕ ವಿಷಯ ತೆಗೆದು ಜನರ ಗಮನ ಬೇರೆಡೆ ಸೆಳೆಯುತ್ತಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

Post a Comment

0 Comments

Ad Code

Responsive Advertisement