Ticker

6/recent/ticker-posts

Ad Code

Responsive Advertisement

ಬಾಕಿ ಬಿಲ್ ಪಾವತಿಸದಿದ್ರೆ ಶಾಶ್ವತ ವಿದ್ಯುತ್ ನಿಲುಗಡೆ

ಬಳ್ಳಾರಿ,ಆ.07: ನಗರದ ಜೆಸ್ಕಾಂ ಉಪವಿಭಾಗ-2ರ ಕಾರ್ಯವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರು ಸತತವಾಗಿ ಮೂರು ತಿಂಗಳಿಗಿAತ ಹೆಚ್ಚಿನ ದಿನಗಳಿಂದ ವಿದ್ಯುತ್ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಕಾರಣ ಸ್ಥಾವರಗಳನ್ನು ಶಾಶ್ವತವಾಗಿ ನಿಲುಗಡೆಗೊಳಿಸಿ ವಿದ್ಯುತ್ ಮಾಪನಗಳನ್ನು ಕಳಚಲಾಗುತ್ತದೆ ಎಂದು ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮೂರು ತಿಂಗಳಿಗಿAತ ಹೆಚ್ಚಿನ ದಿನಗಳಿಂದ ವಿದ್ಯುತ್ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಕೆಇಆರ್‌ಸಿ ನಿಯಮಾವಳಿ ಪ್ರಕಾರ ಬಿಲ್ ಪಾವತಿಸದೆ ಇರುವ ಸ್ಥಾವರಗಳ ವಿದ್ಯುತ್ ಸಂಪರ್ಕ ಗಣಕೀಕೃತಯಂತ್ರದಲ್ಲಿ ಸ್ವಯಂಚಾಲಿತವಾಗಿ ಶಾಶ್ವತವಾಗಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಅವರು ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. 

ಶಾಶ್ವತವಾಗಿ ನಿಲುಗಡೆಗೊಳಿಸಿದ ಸ್ಥಾವರಗಳ ಠೇವಣಿ ಹಣವನ್ನು ಬಾಕಿಗೆ ಹೊಂದಾಣಿಕೆ ಮಾಡಲಾಗುವುದು. ಹೆಚ್ಚಿನ ಬಾಕಿ ಇದ್ದಲ್ಲಿ ಭೂಮಿ ಮತ್ತು ಕಂದಾಯ ಕಾಯ್ದೆ ಅಡಿಯಲ್ಲಿ ಬಾಕಿಯನ್ನು ವಸೂಲಿ ಮಾಡಲಾಗುತ್ತದೆ. ಒಂದು ಬಾರಿ ವಿದ್ಯುತ್ ಸ್ಥಾವರಗಳನ್ನು  ಶಾಶ್ವತವಾಗಿ ನಿಲುಗಡೆಯಾದ ನಂತರ ಮರು ಸಂಪರ್ಕಕ್ಕೆ ಗಣಕೀಕೃತದಲ್ಲಿ ಆಸ್ಪದ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. 

ನಂತರದ ದಿನಗಳಲ್ಲಿ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಲ್ಲಿ ಕಳ್ಳತನ ಪ್ರಕರಣ ದಾಖಲಿಸಲಾಗುವುದು. ಮತ್ತೊಮ್ಮೆ ವಿದ್ಯುತ್ ಸಂಪರ್ಕಕ್ಕಾಗಿ ಗ್ರಾಹಕರು ಹಳೆಯ ಬಾಕಿಯನ್ನು ಸಂಪೂರ್ಣವಾಗಿ ಪಾವತಿಸಿ, ಹೊಸದಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಹೊಸ ಠೇವಣಿಗಳನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ ವಿದ್ಯುತ್ ಗ್ರಾಹಕರು ಕೂಡಲೇ ಜಾಗರೂಕರಾಗಿ ಚಾಲ್ತಿಯಲ್ಲಿರುವ ತಮ್ಮ ಸ್ಥಾವರಗಳ ಬಾಕಿಯನ್ನು ಪಾವತಿಸಿ ಜೆಸ್ಕಾಂನೊAದಿಗೆ ಸಹಕರಿಸಿ ಎಂದು ಅವರು ಕೋರಿದ್ದಾರೆ. 


Post a Comment

0 Comments

Ad Code

Responsive Advertisement