ಬಳ್ಳಾರಿ, ಅ.೧೨: ಕರ್ನಾಟಕ ಮರಾಠ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಸೇನೆ ಹಾಗೂ ಬಳ್ಳಾರಿ ಮರಾಠ ಪರ ಸಂಘಟನೆಗಳು ಸೇರಿ ಪತ್ರಿಕಾಗೋಷ್ಠಿಯನ್ನು ನಗರದ ಹೊಯ್ಸಳ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಮರಾಠ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಸೇನೆಯ ರಾಜ್ಯ ಯುವ ಘಟಕದ ಅಧ್ಯಕ್ಷರಾದ ವಿನೋದ್ ಎಂ. ಚವ್ಹಾಣ್ ಅವರು, ಕರ್ನಾಟಕದಲ್ಲಿ ಕ್ಷತ್ರಿಯ ಮರಾಠ ಸಮಾಜವು ಸುಮಾರು ೪೦ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಸಮುದಾಯಕ್ಕೆ ಇತ್ತೀಚೆಗೆ ರಚನೆಗೊಂಡ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸ್ಥಾನಮಾನ ದೊರೆಯದಿರುವುದು ದುರಾದೃಷ್ಟಕರ ಸಂಗತಿ. ಈ ಹಿಂದೆ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರಾದ ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಜವಳಿ ಮತ್ತು ಕೈಮಗ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಶ್ರೀಮಂತ್ ಬಾಳಸಾಹೇಬ್ ಪಾಟೀಲ್ ಅವರನ್ನು ಸಂಪುಟದಿ0ದ ಕೈಬಿಟ್ಟಿರುವುದು ಮರಾಠರ ಪರವಾಗಿ ಇದ್ದ ಒಬ್ಬ ಸಚಿವರಿಲ್ಲದೇ ಇರುವುದು ಸಮಸ್ತ ಕರ್ನಾಟಕ ಮರಾಠ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದೆ.ಈ ಹಿಂದೆಯೂ ಸಹ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರು ೨೦೧೮ರ ಚುನಾವಣೆ ಸಂದರ್ಭದಲ್ಲಿ ಬೀದರ್‌ನಲ್ಲಿ ಮರಾಠ ಸಮುದಾಯಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದ ಕೇವಲ ೨೪ ತಾಸುಗಳಲ್ಲಿ ಪ್ರವರ್ಗ ೩ಬಿ ಯಿಂದ ೨ಎಗೆ ಮೀಸಲಾತಿ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು.
ಆದರೆ ೨೪ ತಿಂಗಳುಗಳ ಕಾಲ ಮುಖ್ಯಮಂತ್ರಿಗಳಾಗಿದ್ದರೂ ಸಹ ತಮ್ಮ ಹೇಳಿಕೆಯನ್ನು ಉಳಿಸಿಕೊಳ್ಳಲಾಗಿಲ್ಲ. ಹಾಗೂ ಈಗಾಗಲೇ ೨೦೧೨ ಡಿಸೆಂಬರ್ ೩೦ರಂದು ೯ನೇ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಶಂಕರಪ್ಪ ನವರ ವರದಿಯ ಶಿಫಾರಸ್ಸಿನ ಅನ್ವಯ ಪ್ರವರ್ಗ ೩ಬಿ ಯಿಂದ ೨ಎಗೆ ಮರಾಠ ಸಮುದಾಯದ ಮೀಸಲಾತಿಯನ್ನು ಈ ಕೂಡಲೇ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು. ಇತ್ತೀಚೆಗೆ ಮರಾಠ ಅಭಿವೃದ್ಧಿ ನಿಗಮ ಮಂಡಳಿ ಘೋಷಿಸಿದ್ದರೂ ಯಾವುದೇ ಅನುದಾನ ಮತ್ತು ಅಧ್ಯಕ್ಷರ ನೇಮಕ ಮಾಡದೇ ಅದರ ಅನುಷ್ಠಾನವನ್ನು ಮರೆತಿರುವುದು ಮರಾಠ ಜನಾಂಗವನ್ನು ಕಡಗಣನೆ ಮಾಡಿರುವುದು ಎದ್ದು ಕಾಣಿಸುತ್ತಿದೆ. ಹೀಗೆ ರಾಜಕೀಯವಾಗಿಯೂ ಸಮುದಾಯಕ್ಕೆ ಯಾವುದೇ ಸಚಿವ ಸ್ಥಾನ ನೀಡದಿರುವುದು ಸಾಂಪ್ರದಾಯಿಕ ಬಿಜೆಪಿಯ ಮತದಾರರಾದ ಖಟ್ಟರ್ ಹಿಂದುತ್ವವಾದಿಗಳಾದ ಮರಾಠ ಸಮುದಾಯದ ಕಡೆಗಣನೆ ಮಾಡಿರುವುದು ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಭಾರೀ ಹಿನ್ನೆಡೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು. ಈ ಕೂಡಲೇ ಮರಾಠ ಸಮುದಾಯದ ಹಿರಿಯರಾದ ಶ್ರೀಮಂತ್ ಪಾಟೀಲ್‌ರಿಗೆ ಬೊಮ್ಮಾಯಿ ರವರ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮರಾಠ ಮುಖಂಡರುಗಳಾದ ಮುರಾರಿರಾವ್ ಜಾಧವ್, ಯಶ್ವಂತ್‌ರಾವ್ ಜಗತಾಪ್, ನಾಗರಾಜರಾವ್ ಚವ್ಹಾಣ್, ಶರದ್ ಶಿಂಧೆ, ವಸಂತರಾವ್, ಲಕ್ಷö್ಮಣ್‌ರಾವ್ ಬಾಬರ್, ಅಮರೇಷ್ ಘೋರ್ಪಡೆ, ದಿನೇಶ್ ನಲವಡೆ, ರುದ್ರೋಜಿರಾವ್ ಶಿಂಧೆ ಮತ್ತಿತರ ಮರಾಠ ಸಮುದಾಯದ ಹಲವಾರು ಮುಖಂಡರು ಭಾಗವಹಿಸಿದ್ದರು.

0 Comments