Ticker

6/recent/ticker-posts

Ad Code

Responsive Advertisement

ವಿಶ್ವ ಯುವ ಕೌಶಲ್ಯ ಮಾಸಾಚರಣೆ ಹಾಗೂ ಭಾರತದ ಸ್ವತಂತ್ರ ಅಮೃತ ಮಹೋತ್ಸವ

ಮಧುಗಿರಿ: ವಿಶ್ವ ಯುವ ಕೌಶಲ್ಯ ಮಾಸಾಚರಣೆ ಹಾಗೂ ಭಾರತದ ಸ್ವತಂತ್ರ ಅಮೃತ ಮಹೋತ್ಸವದ ಅಂಗವಾಗಿ ಇಂದು ಯುಕ್ತ ಕೌಶಲ್ಯ ತರಬೇತಿ ಕೇಂದ್ರದಲ್ಲಿ YUKTHA MSYEP ತರಬೇತಿಗಳನ್ನು ಪಡೆದ ವಿದ್ಯಾರ್ಥಿ ಫಲಾನುಭವಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆ ಬಗ್ಗೆ ತಿಳಿಸುತ್ತಾ ವಿಶೇಷವಾಗಿ ಭಾರತ ಭಾಗ್ಯವಿಧಾತ ಕಿರುಚಿತ್ರವನ್ನು ವೀಕ್ಷಿಸಿ ನಂತರ ಮಧುಗಿರಿ ಪುರಸಭೆ ಮುಖ್ಯ ಮುಖ್ಯಾಧಿಕಾರಿ ನಜ್ಮಾ ರವರು ವಿದ್ಯಾರ್ಥಿಗಳು ಉತ್ತಮ ಗುರಿಯ ಇಟ್ಟುಕೊಂಡು ಆ ಗುರಿಯನ್ನು ಮುಟ್ಟಲು ಪ್ರಯತ್ನಗಳು ಬದಲಾಗಬೇಕೆಂದು ಹಾಗೆ ನಾವು ಇಟ್ಟುಕೊಂಡಿರುವ ನಮ್ಮ ಗುರಿ ಬದಲಾಗಬಾರದು ಎಂದು ಸ್ಪೂರ್ತಿದಾಯಕ ನುಡಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾ ಇಂಥ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕೌಶಲ್ಯಗಳನ್ನು ನೀಡುತ್ತಿರುವ ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ಸಿಬ್ಬಂದಿಗಳು ಅಭಿನಂದನೆಗಳು ಹಾಗೂ 75ನೇ ಸ್ವತಂತ್ರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. 




ಯುಕ್ತ ಕೌಶಲ್ಯ ತರಬೇತಿ ವ್ಯವಸ್ಥಾಪಕ ನಿರ್ದೇಶಕ ಮಧುಗಿರಿ ದಿಲೀಪ್ ವಿದ್ಯಾರ್ಥಿಗಳಿಗೆ ವಿವಿಧ ಕೌಶಲ್ಯಗಳ ಯುವಸಬಲಿಕರಣ ಕಾರ್ಯಕ್ರಮದಲ್ಲಿ ಪ.ಜಾತಿ /ಪ.ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿರುವ ಕಂಪ್ಯೂಟರ್ ಸ್ಪೋಕನ್ ಇಂಗ್ಲೀಷ್ ವ್ಯಕ್ತಿತ್ವ ವಿಕಸನ ಜೀವನ ಕೌಶಲ್ಯ ಮತ್ತು ವೃತ್ತಿಪರ ತರಬೇತಿಗಳನ್ನು ಸದುಪಯೋಗಪಡಿಸಿ ಕೊಳ್ಳುವಂತೆ ಕಾರ್ಯಕ್ರಮ ಕುರಿತು ಮಾಹಿತಿಯನ್ನು ನೀಡಿದರು. ಈ ಸುಂದರ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಆಯೋಜಿಸಿರುವುದನ್ನು ಶ್ಲಾಘಿಸಿದರು. ಉಪಸ್ಥಿತಿಯಲ್ಲಿ ಜಿಲ್ಲಾ ಮುಖ್ಯ ಕಾರ್ಯಕ್ರಮ ಆಯೋಜಕರಾದ ದೀಪಿಕಾ, ವೆಂಕಟೇಶ್, ವಿಭಾಗ ಮುಖ್ಯಸ್ಥರಾದ ತನುಜ ಮತ್ತು ಭಾಗ್ಯ ಲಕ್ಷ್ಮಿ ಹಾಗೂ ಸಿಬ್ಬಂದಿ ಮುಖ್ಯಸ್ಥರಾದ ವಿನೋದ್ ಮತ್ತು ಸಿಬ್ಬಂದಿವರ್ಗದವರು ಮತ್ತಿತರಿದ್ದರು.

Post a Comment

0 Comments

Ad Code

Responsive Advertisement