Ticker

6/recent/ticker-posts

Ad Code

Responsive Advertisement

ಸಿಎಂ ಬೊಮ್ಮಾಯಿ ಭೇಟಿ ಮಾಡಲು ಬರುವವರು ಮೊಬೈಲ್ ತರುವಂತಿಲ್ಲ!


ಸಿಎಂ ನಿವಾಸದೊಳಗೆ ಹೋಗುವ ಸಾರ್ವಜನಿಕರಿಗೆ ಮೊಬೈಲ್ ನಿಷೇಧ ಮಾಡುವ ನಿಯಮವನ್ನು ಜಾರಿಗೊಳಿಸಲಾಗಿದೆ. ಸಿಎಂ ಭೇಟಿಗೆ ಬರುವವರು ಮೊಬೈಲ್ ತರುವಂತಿಲ್ಲ ಎಂದು ಬೊಮ್ಮಾಯಿ ಅವರ ಆರ್ ಟಿ ನಗರದ ನಿವಾಸದ ಎದುರು ಫಲಕವನ್ನು ಸಿಬ್ಬಂದಿ ಹಾಕಿದ್ದಾರೆ.

“ಮೊಬೈಲ್ ಫೋನ್ ನಿಷೇಧಿಸಲಾಗಿದೆ” ನಿಷೇಧಿಸಲಾಗಿದೆ ಎಂದು ಫಲಕದಲ್ಲಿ ಬರೆಯಲಾಗಿದೆ. ಆದರೆ ಯಾಕಾಗಿ ಈ ನಿರ್ಬಂಧವನ್ನು ಜಾರಿಗೆ ತರಲಾಗಿದೆ ಎಂಬುವುದು ಸ್ಪಷ್ಟಗೊಂಡಿಲ್ಲ. ಸಿಎಂ ಭೇಟಿಗೆ ಆಗಮಿಸುವವರು ಸಹಜವಾಗಿ ಸೆಲ್ಫೀ ಫೋಟೋಗಳನ್ನು ತೆರೆಯುತ್ತಾರೆ. ಕೆಲವರು ವಿಡಿಯೋಗಳನ್ನು ಕೂಡಾ ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆಯಾ ಎಂಬುವುದನ್ನು ಸಿಎಂ ನಿವಾಸದ ಸಿಬ್ಬಂದಿ ತಿಳಿಸಿಲ್ಲ.

ಇತ್ತೀಚೆಗೆ ಸಿಎಂ ಬೊಮ್ಮಾಯಿ ಅವರು ಸರ್ಕಾರಿ ಸಭೆ ಸಮಾರಂಭಗಳಲ್ಲಿ ಹಾರ, ತುರಾಯಿ ನೀಡುವುದನ್ನು ನಿಷೇಧಿಸಿದ್ದರು. ಅಲ್ಲದೆ ಪದೇ ಪದೇ ಪೊಲೀಸ್ ಗೌರವ ನೀಡುವ ಪದ್ದತಿಯನ್ನು ರದ್ದುಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಝೀರೋ ಟ್ರಾಫಿಕ್‌ಗೆ ಬ್ರೇಕ್ ಹಾಕಿದ್ದಾರೆ.

Post a Comment

0 Comments

Ad Code

Responsive Advertisement