Ticker

6/recent/ticker-posts

Ad Code

Responsive Advertisement

ಜೀವನ ಅಂದ್ರೆ ಚೌ ಚೌ ಭಾತ್ !

ಕೇಸರಿ ಭಾತ್ ಮತ್ತು ಖಾರಾ ಭಾತ್ ಎರಡನ್ನೂ ಒಟ್ಟಿಗೆ ಕರೆಯುವುದಾದರೆ ಅದು ಚೌ ಚೌ ಭಾತ್ ! ಚೌ ಚೌ ಇಲ್ಲದ ಚೌ ಚೌ ಭಾತ್ ! ಇದೆರಡರ ಸಮ ಪ್ರಮಾಣ ನನಗನ್ನಿಸಿದ್ದು ನಮ್ಮ‌ ಬದುಕಿನ ಹೋಲಿಕೆ. ಒಂದೆರಡು ಚಮಚ ಕೇಸರಿ ಭಾತ್ ಜಾಸ್ತಿ ಇದ್ದು ಖಾರಾ ಭಾತ್ ಕಡಿಮೆ ಇದ್ದರೂ ಕೇಸರಿ ಭಾತ್ ತಿಂದ ನಂತರ ಬಾಯಿಯಲ್ಲಿ ಬಂಕೆ.ಅದೇ ಸಿಹಿಯ ರುಚಿ ನಾಲಿಗೆಯ ಮೇಲೆ ಬಹಳ ಸಮಯ ಉಳಿಸಿಕೊಳ್ಳುವ ಮನಸ್ಸಾಗುವುದಿಲ್ಲ.ಖಾರಾ ಭಾತ್ ತಿಂದ ನಂತರವೇ ಸಮಾಧಾನ.ನಾಲಿಗೆ ಒಂದು ನಿಯಂತ್ರಣಕ್ಕೆ ಸಿಕ್ಕು ಒಂದು ಕಾಫಿ ಕುಡಿಯುವ ಮನಸ್ಸು ಬರುತ್ತದೆ.


ಬದುಕಿನಲ್ಲಿ‌ ಸಿಹಿ‌ ಮತ್ತು‌ ಕಹಿ‌ ಅನುಭವಗಳು‌ ನಿರಂತರವಾಗಿ‌ ನಮಗಾಗುತ್ತಲೇ ಇರುತ್ತದೆ.ಇವೆರಡೂ ನಮ್ಮ‌ ಬದುಕಿಗೆ ಅನಿವಾರ್ಯ ಮತ್ತು ಅವಶ್ಯಕ ಅಗತ್ಯತೆ ಅಂತಲೇ ಭಾವಿಸುತ್ತೇನೆ. ಒಂದು ಮಟ್ಟದಲ್ಲಿ ಸಿಹಿಗಿಂತ ಕಹಿಯೇ ಪ್ರಿಯವಾಗುತ್ತದೆ.ಬದುಕಿನಲ್ಲಿ ಸಾಧನೆ ಶ್ರೀಮಂತಿಕೆ ಇದೆಲ್ಲವೂ ಒಂದು ಹಂತದಲ್ಲಿ ಸಾಕು ಎನ್ನಿಸುತ್ತದೆ.ದುಡ್ಡೂ ಕಾಸು ಆಸ್ತಿ ಆಂತಸ್ತು ತುಂಬಾ ಮುಖ್ಯವಾಗುವುದಿಲ್ಲ.ಬದುಕು ಬಯಸುವುದು ಒಂದು ನೆಮ್ಮದಿ.ನಿರಂತರ ಮನದ ಖುಷಿ.ಉತ್ತಮ‌ ಆರೋಗ್ಯ ದೈಹಿಕ‌ ಮತ್ತು ಮಾನಸಿಕ ಸ್ವಾಸ್ಥ್ಯ ! ಉಳಿದಿದ್ದು ಯಾವುದೂ ಅಷ್ಟೊಂದು ಅನಿವಾರ್ಯವಲ್ಲ ಎನ್ನುವುದು ಬದುಕು ನನಗೆ ನೀಡಿದ ಅನುಭವ.
ತುಂಬಾ ಸುಖವಾಗಿದ್ದರೂ ಏನೋ ಒಂದು ಕೊರತೆ ಕೆಲವರಿಗಿದ್ದರೆ ಅನೇಕ ಕೊರತೆಗಳ ನಡುವೆಯೇ ಅನೇಕರು ಸುಖ ಕಂಡುಕೊಂಡಿರುತ್ತಾರೆ ಇಷ್ಟೇ ಬದುಕು.‌ಕೆಲವರು ಪ್ರೀತಿಯಿಂದ ಆತ್ಮೀಯವಾಗಿ ಮಾತನಾಡಿದರೆ ಇನ್ನೂ ಕೆಲವರಿಗೆ ಇದ್ಯಾವುದೂ ಬೇಕಾಗಿಲ್ಲ. ಇದೆಲ್ಲಾ ಅವರವರ ಆದ್ಯತೆಗಳು ಮತ್ತು ಅವರವರ ಖುಷಿ ಅಷ್ಟೇ. ಅರಿಷಡ್ವರ್ಗಗಳಲ್ಲಿ ನಾವು ಎಲ್ಲವನ್ನೂ ಗೆಲ್ಲಲು ಸಾಧ್ಯವಿಲ್ಲ.ಎಲ್ಲವನ್ನೂ ಗೆದ್ದ ತ್ರಿವಿಕ್ರಮನಂತೆ ಬಿಂಬಿಸಿಕೊಳ್ಳಬಹುದಷ್ಟೇ ! ಅಧ್ಯಾತ್ಮದತ್ತ ಹೊರಟ ಮಂದಿಗೆ ನಾಮಸ್ಮರಣೆ ಪಾರಾಯಣದಲ್ಲಿ ತೊಡಗಿಸಿಕೊಳ್ಳುವ ಮಂದಿಗೂ ಪ್ರಾಪಂಚಿಕ ಗೊಡವೆ, ಆಸೆ ಬುರುಕತನ,ತಾನೇ ಗ್ರೇಟ್ ಎಂಬ ಭಾವನೆ ಬಂದರೆ ಏನು ಪ್ರಯೋಜನ ? ಬಿಸಿ ಬಿಸಿ ಕೇಸರಿ ಭಾತ್ ಬಿಸಿ ಬಿಸಿ ಖಾರಾ ಭಾತ್ ಸಮ ಪ್ರಮಾಣದಲ್ಲಿ ಸ್ವಲ್ಪ ತಿಂದರೆ ಮಾತ್ರವೇ ಸಂತೃಪ್ತಿ
C.N.RAMESH

Post a Comment

0 Comments

Ad Code

Responsive Advertisement