ಬಳ್ಳಾರಿ ನಗರದ ಬಸವನಕುಂಟೆ, ದೇವಿನಗರ ಜನರು ನನ್ನ ಕೈ ಬಿಡಲ್ಲ ಎಂಬ ವಿಶ್ವಾಸ ವಿತ್ತು ಆದರೆ ಕಾರ್ಪೂರೇಷನ್ ಚುನಾವಣೆಯಲ್ಲಿ ಫಲಿತಾಂಶ ಬೇರೆ ರೀತಿ ಬಂತು. ಕಾರಣಂತರಗಳಿ0ದ ನಿಮ್ಮಿಂದ ದೂರ ಆಗಿದ್ದು ನಿಜ ಆದರೇ ಬಸವನಕುಂಟೆ ಮತ್ತು ದೇವಿನಗರ ಜನರ ಬೆಂಬಲದಿ0ದ ನಾನು ಇಷ್ಟು ಎತ್ತರಕ್ಕೆ ಬೆಳದಿದ್ದೇನೆ ಎಂಬುದನ್ನು ನಾನೂ ಮರೆತಿಲ್ಲ ಎಂದು ಸಾರಿಗೆ ಸಚಿವ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ತಿಳಿಸಿದರು.ನಗರದ 38ನೇ ವಾರ್ಡಿನ ವ್ಯಾಪ್ತಿಯಲ್ಲಿ ದೇವಿನಗರದ ಮುಖ್ಯ ರಸ್ತೆಯ ಬಸವ ಕುಂಟೆ ಹತ್ತಿರದ ಫೀರ್ ಸಾಬ್ ಮಕಾನ್ ಹತ್ತಿರದ ಬಿಜೆಪಿ ಮುಖಂಡರಾದ ವಿ. ಅನೂಪ್ ಕುಮಾರ್ ಅವರ ನೂತನ ಜನ ಸಂಪರ್ಕ ಕಚೇರಿಯನ್ನು ಸಾರಿಗೆ ಸಚಿವ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ರವರು ಶನಿವಾರ ಉದ್ಘಾಟಿಸಿ ಮಾತನಾಡಿದರು.
ನಿಮ್ಮೊಂದಿಗೆ ಇರುತ್ತೇನೆ:-38ನೇ ವಾರ್ಡಿನ ಜನರು ನಮ್ಮೊಂದಿಗೆ ಶ್ರೀರಾಮುಲು ಇಲ್ಲ, ಸೋಮಶೇಖರ ರೆಡ್ಡಿ ಇಲ್ಲ ಎಂದು ಕಾರ್ಪೂರೇಷನ್ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಲಿಲ್ಲ. ನಿಮ್ಮಿಂದ ದೂರವಾದ ನೋವು ನನಗೂ ಇದೆ. ಕಾರ್ಪೂರೇಷನ್ ಚುನಾವಣೆಯಲ್ಲಿ ಸೋತರು ಬಿಜೆಪಿ ಯುವ ಮುಖಂಡರಾದ ವಿ. ಅನೂಪ್ ಕುಮಾರ್ ಜನರೊಂದಿಗೆ ಇರಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಜನಸೇವೆ ಮಾಡಬೇಕು ಎಂದು ಜನ ಸಂಪರ್ಕ ಕಚೇರಿ ಪ್ರಾರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಹಾಗೂ ಶಾಸಕರಾದ ಸೋಮಶೇಖರ ರೆಡ್ಡಿ ರವರು ಈ ಕಚೇರಿಗೆ ಬಂದು ನಿಮ್ಮ ಕಷ್ಟಗಳಿಗೆ ಸ್ಪಂದಿಸುವ ಮೂಲಕ ನಿಮ್ಮೊಂದಿಗೆ ಪ್ರೀತಿ ವಿಶ್ವಾಸದಿಂದ ಇರುತ್ತೇವೆ ಎಂದರು.ನಗರ ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ, ಚುನಾವಣೆಯಲ್ಲಿ ಗೆದ್ದ ಕಾರ್ಪೂರೇಟರ್‌ಗಳೇ ಕಚೇರಿ ಪ್ರಾರಂಭಿಸಿಲ್ಲ, ಆದರೆ ಚುನಾವಣೆಯಲ್ಲಿ ಸೋತರು ಕಚೇರಿ ಆರಂಭಿಸಿರುವ ವಿ.ಅನೂಪ್ ಕುಮಾರ್ ಅವರನ್ನು ಅಭಿನಂದಿಸುತ್ತೇನೆ. ಈ ಜನ ಸಂಪರ್ಕ ಕಚೇರಿಯಿಂದ ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಿ ಎಂದರು.
ಬಳ್ಳಾರಿ ಬೆಳಗಾಯಿತು ಪತ್ರಿಕೆಯ ಸಂಸ್ಥಾಪಕ ಸಂಪಾದಕರು ಹಾಗೂ ವಕೀಲರಾದ ವಿ.ವಿಜಯ್ ಕುಮಾರ್ ಮಾತನಾಡಿ, ಬಸವನ ಕುಂಟೆಯ ಏರಿಯಾಗಳಲ್ಲಿ ನಮ್ಮ ಕಣ್ಣ ಮುಂದೆ ಆಟವಾಡಿ ಬೆಳದ ಹುಡುಗ ಬಿ.ಶ್ರೀರಾಮುಲು ಇಂದು ಜಿಲ್ಲೆಗೆ ಮಾತ್ರವಲ್ಲದೇ ರಾಜ್ಯಕ್ಕೆ ಹೆಸರು ತಂದಿದ್ದಾರೆ. ರಾಜ್ಯದಲ್ಲಿ ಮಂತ್ರಿ ಆಗಿದ್ದಾರೆ.
ಮಂದಿನ ದಿನದಲ್ಲಿ ಡಿಸಿಎಂ ಮಾತ್ರವಲ್ಲದೆ, ಸಿಎಂ ಕೂಡ ಆಗಲಿ. ಬಳ್ಳಾರಿಯ ಜನತೆ ಪಕ್ಷಾತೀತವಾಗಿ ಇದಕ್ಕೆ ಬೆಂಬಲ ನೀಡಬೇಕು ಎಂದು ಆಶಿಸಿದರು.ಬಿಜೆಪಿ ಯುವ ಮುಖಂಡರಾದ ವಿ.ಅನೂಪ್ ಕುಮಾರ್ ಮಾತನಾಡಿ, ಚುನಾವಣೆ ಪ್ರಚಾರ ಸಮಯದಲ್ಲಿ ಕೊಟ್ಟ ಮಾತಿನಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಕಚೇರಿ ಪ್ರಾರಂಭಿಸಿದ್ದೇನೆ.
ಕೇಂದ್ರ ರಾಜ್ಯ ಸರ್ಕಾರದ ಯೋಜನೆಗಳು, ಸಾಮಾಜಿಕ ಭದ್ರತಾ ಯೋಜನೆಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆ. ಅಲ್ಲದೇ ವಾರ್ಡಿನಲ್ಲಿನ ಕುಡಿಯುವ ನೀರು, ವಿದ್ಯುತ್, ಚರಂಡಿ ದುರಸ್ಥಿ ಸಮಸ್ಯೆ, ಸ್ವಚ್ಛತೆ, ಮುಂತಾದ ವಾರ್ಡಿನಲ್ಲಿನ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ.
ವಾರ್ಡಿನಲ್ಲಿನ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ ಎಂಬ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಸಣ್ಣ ಪಕ್ಕೀರ, ರಾಬಕೋ ನಿರ್ದೇಶಕರಾದ ವೀರ ಶೇಖರ್ ರೆಡ್ಡಿ, ವಿ.ವಿ. ಸಂಘದ ಅಧ್ಯಕ್ಷರಾದ ಗೋನಾಳ್ ರಾಜ ಶೇಖರ್ ಗೌಡ, ಕಾರ್ಪೂರೇಟರ್‌ಗಳಾದ, ಇಬ್ರಾಹಿಂ ಬಾಬು, ಶ್ರಿನಿವಾಸ್ ಮೊತ್ಕರ್, ಕೋನಂಕಿ ತಿಲಕ್, ಹನುಮಂತ ಗುಡಿಗಂಟೆ, ಹನುಮಂತು, ಗೋವಿಂದ ರಾಜು, ಅಶೋಕ್, ಬಿಜೆಪಿ ಮುಖಂಡರಾದ ದಿವಾಕರ್, ಓಬಳೇಶ, ಪ್ರಸಾದ್, ವೆಂಕಟ ರಾಮರೆಡ್ಡಿ, ಉಜ್ವಲಾ, ಭೀಮಲಿಂಗ, ವಿ.ಕೆ ಬಸಪ್ಪ, ವಾರ್ಡಿನ ಮುಖಂಡರು, ಸೇರಿದಂತೆ ಇತರರು ಇದ್ದರು.
0 Comments