ಹೊಸಪೇಟೆ, ಆ.22: ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಎಂ.ವೆಂಕಯ್ಯನಾಯ್ಡು ಮತ್ತು ಅವರ ಕುಟುಂಬದವರು ಹಂಪಿಯ ಎದುರು ಬಸವಣ್ಣ ಮಂಟಪದ ಎದುರು ಹಂಪಿ ಬೈ ನೈಟ್ ಕಾರ್ಯಕ್ರಮವನ್ನು ಶನಿವಾರ ರಾತ್ರಿ ವೀಕ್ಷಿಸಿದರು.
ಉಪರಾಷ್ಟ್ರಪತಿಗಳು ಸಂಜೆ 7:20ಕ್ಕೆ ಆಗಮಿಸಿ ತಮಗೆ ಮತ್ತು ತಮ್ಮ ಕುಟುಂಬದವರಿಗಾಗಿ ವ್ಯವಸ್ಥೆ ಮಾಡಲಾಗಿದ್ದ ಅಸನಗಳ ಮೇಲೆ ಕುಳಿತುಕೊಳ್ಳುತ್ತಲೇ ಮಳೆ ಶುರುವಾಯಿತು.ಉಪರಾಷ್ಟ್ರಪತಿಗಳು,ಪತ್ನಿ ಎಂ.ಉಷಾ ಹಾಗೂ ಅವರ ಕುಟುಂಬದವರಿಗೆ ಭದ್ರತಾ ಸಿಬ್ಬಂದಿ ಛತ್ರಿಗಳನ್ನಿಡಿದುಕೊಂಡು ನಿಂತರು.ವಿಜಯನಗರ ಸಾಮ್ರಾಜ್ಯದ ಇತಿಹಾಸ ಪ್ರಸ್ತುತಪಡಿಸುವಿಕೆ,ತ್ರೇತ್ರಾಯುಗ,ದ್ವಾಪರಯುಗ,ಸುಗ್ರೀವ-ವಾಲಿ ಕದನ,ಕಿಷ್ಕಿಂದಾ ಕಾಂಡ, ಮಾತಂಗ ಮುನಿ,ಸತ್ಯ ಹರಿಶ್ಚಂದ್ರ,ಪ0ಪ ವಿರೂಪಾಕ್ಷೇಶ್ವರ ಇತಿಹಾಸ ಸಾರುವ ಸುಮಾರು 30ನಿಮಿಷಗಳ ಧ್ವನಿ ಬೆಳಕಿನ ಕಾರ್ಯಕ್ರಮ ವೀಕ್ಷಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಧ್ವನಿ ಮತ್ತು ಬೆಳಕಿನ ಅಧ್ಬುತ ವ್ಯವಸ್ಥೆಗೆ ಉಪರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದರು.ಮಳೆ ಬಿರುಸಾಗುತ್ತಲೇ ಕುಟುಂಬದ ಸದಸ್ಯರು ಕಾರಿನೊಳಗೆ ಕುಳಿತು ಹಂಪಿ ಬೈ ನೈಟ್ ವೀಕ್ಷಿಸಿದರು.ಕಾರ್ಯಕ್ರಮದ ಆರಂಭದಿAದ ಕೊನೆಯವರೆಗೆ ಮಳೆ ಸುರಿಯುತ್ತಲೇ ಇತ್ತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ,ಎಎಸ್ಪಿ ಬಿ.ಎನ್.ಲಾವಣ್ಯ ಮತ್ತಿತರರು ಇದ್ದರು.ಇದಕ್ಕೂ ಮುಂಚೆ ಮಯೂರ ಭುವನೇಶ್ವರಿ ಅತಿಥಿಗೃಹದ(ಹೋಟಲ್) ಆವರಣದ ಗಾರ್ಡನ್ ನಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.ಉಪರಾಷ್ಟ್ರಪತಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆ ಸಂದರ್ಭದಲ್ಲಿ ಆಗಮಿಸಿದ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹಾಗೂ ಮಾಜಿ ಸಂಸದರಾದ ಸಣ್ಣ ಫಕ್ಕೀರಪ್ಪ,ಜೆ.ಶಾಂತಾ ಮತ್ತು ಮಾಜಿ ಶಾಸಕ ಸುರೇಶ ಬಾಬು ಅವರು ಕುಳಿತುಕೊಂಡು ಸಾಂಸ್ಕೃತಿಕ ಕಾರ್ಯಕ್ರಮ ಮುಗಿದ ನಂತರ ಉಪರಾಷ್ಟ್ರಪತಿಗಳಿಗೆ ಸನ್ಮಾನಿಸಿದರು.
0 Comments