ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ನಿಧನರಾಗಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಕುರ್ಚಿ ಏರಿದ ಪ್ರಥಮ ವ್ಯಕ್ತಿ ಹಾಗೂ ವಿವಾದಗಳಿಂದಲೇ ಸುದ್ದಿಯಲ್ಲಿದ್ದ ನಾಯಕ, ಹೊಸಾ ರೀತಿಯ ರಾಜಕಾರಣವನ್ನು ಉತ್ತರ ಪ್ರದೇಶದಲ್ಲಿ ಪ್ರಯೋಗಿಸಿ ಚಾಲ್ತಿಗೆ ಬಂದವರು. ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ.
1932 ರಲ್ಲಿ ಜನಿಸಿದ ಕಲ್ಯಾಣ್ ಸಿಂಗ್ ತನ್ನ ಯೌವನದಲ್ಲಿ ಹಿಂದುತ್ವದ ಸಿದ್ಧಾಂತದ ಕಡೆಗೆ ಎಳೆಯಲ್ಪಟ್ಟರು. ಆಗ ರಾಜಕೀಯ ನೆಹರೂವಿಯನ್ ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದ ಕಾಲ. ಹೊಸ ರಸ್ತೆಯಲ್ಲಿ ರಾಜಕೀಯ ಸಾಹಸ ಮಾಡುವುದು ಸುಲಭವಲ್ಲ. ಆದಾಗ್ಯೂ, ಭಾರತೀಯ ಜನಸಂಘದ ಕಾರ್ಯಕರ್ತರಾಗಿ, ಅವರು ಶೀಘ್ರದಲ್ಲೇ ಹೆಸರು ಮಾಡಿದರು ಮತ್ತು 1967 ರಲ್ಲಿ ಜನ ಸಂಘದ ಟಿಕೆಟ್ ಪಡೆದು ಅತ್ರೌಲಿ ವಿಧಾನಸಭಾ ಸ್ಥಾನದಲ್ಲಿ ಸ್ಪರ್ಧಿಸಿ ಗೆದ್ದು. ಬಂದಿದ್ದರು.
0 Comments