ಬಳ್ಳಾರಿ,ಆ.21-ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ ಆಗಸ್ಟ್ 23ರಿಂದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ 350ನೇ ಆರಾಧನಾ ಮಹೋತ್ಸವಗಳು ಜರುಗಲಿವೆ.
ಭಾರತದ ವೈದಿಕ ಸಿದ್ಧಾಂತ ತತ್ವಗಳ, ಧರ್ಮಗಳ ಪ್ರಚಾರಕ್ಕಾಗಿ ಲೋಕಮಾನ್ಯ ಗ್ರಂಥಗಳನ್ನು ರಚಿಸಿ ಮಾನವ ಜನಾಂಗದ ಕಲ್ಯಾಣ, ನಾಡು ನುಡಿಗಳ ಬೆಳವಣಿಗೆ, ಶಾಂತಿ ಸ್ಥಾಪನೆಗಾಗಿ ತಮ್ಮ ಅಖಂಡ ಪುಣ್ಯರಾಶಿಯನ್ನು ಭಕ್ತರಿಗೆ ಕಾಮಧೇನು, ಕಲ್ಪವೃಕ್ಷದಂತೆ ಧಾರೆಯೆರೆಯುತ್ತಾ ಮಂತ್ರಾಲಯ ಮಹಾಕ್ಷೇತ್ರದಲ್ಲಿ ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿರುವ ಶ್ರೀ ಗುರುರಾಯರ ಆರಾಧನೆಯನ್ನು ಇಲ್ಲಿನ ಸತ್ಯನಾರಾಯಣಪೇಟೆಯಲ್ಲಿರುವ ಶ್ರೀಮಠದಲ್ಲಿ ಆಚರಿಸಲಾಗುತ್ತಿದೆ.
ಆ.23ರಂದು ಪೂರ್ವಾರಾಧನೆ, 24ರಂದು ಮಧ್ಯಾರಾಧನೆ ಮತ್ತು 25 ರಂದು ಉತ್ತರಾರಾಧನೆ ನಡೆಯಲಿವೆ.ಈ ಹಿನ್ನೆಲೆಯಲ್ಲಿ ಆಗಸ್ಟ್ 22ರಂದು ಬೆಳಿಗ್ಗೆ 10 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 6 ಗಂಟೆಗೆ ಧ್ವಜಾರೋಹಣ, ಗೋಪೂಜಾ, ಪ್ರಾರ್ಥನೋತ್ಸವ, ಶಾಕೋತ್ಸವ, ಧನ-ಧಾನ್ಯ ಪೂಜಾ, ಶ್ರೇಯಃ ಪ್ರಾರ್ಥನೆ ಮತ್ತು ಮಹಾಮಂಗಳಾರತಿ ನಡೆಯಲಿದೆ. ಆರಾಧನಾ ದಿನಗಳಲ್ಲಿ ಪ್ರತಿನಿತ್ಯ ಪ್ರಾತಃಕಾಲ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ, ಪಂಚಾಮೃತಾಭಿಷೇಕ, ಕನಕ ಮಹಾಪೂಜೆ, ಅರ್ಚನೆ, ನೈವೇದ್ಯ, ಅಲಂಕಾರ, ಹಸ್ತೋದಕ, ಮಹಾ ಮಂಗಳಾರತಿ ಜರುಗಲಿವೆ.
ಸಂಜೆ ದೀವಟಿಗೆ ಮಂಗಳಾರತಿ, ಉತ್ಸವ ಮತ್ತು ಸ್ವಸ್ತಿವಾಚನ ಮತ್ತು ಮಹಾ ಮಂಗಳಾರತಿ ನಡೆಯಲಿದೆ. ಈಗಾಗಲೇ ಆ.18ರಿಂದ ಆ.22ರತನಕ ಸಂಜೆ 6 ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಮತ್ತು ಶ್ರೀ ಮಧ್ವಸಂಘದ ಸಹಯೋಗದಲ್ಲಿ ಪಂಡಿತರಿAದ ಶ್ರೀ ರಾಘವೇಂದ್ರ ವಿಜಯ ಪ್ರವಚನ ಕಾರ್ಯಕ್ರಮಗಳು ಆರಂಭಗೊ0ಡಿವೆ.
ಆಗಸ್ಟ್ 25 ರಂದು ಉತ್ತರಾರಾಧನೆ ನಿಮಿತ್ತ ಬೆಳಿಗ್ಗೆ 9 ಗಂಟೆಗೆ ಮಹಾ ರಥೋತ್ಸವ,
ಆ.26 ರಂದು ಬೆಳಿಗ್ಗೆ 9 ಗಂಟೆಗೆ ಸಾಮೂಹಿಕ ಶ್ರೀ ಪವಮಾನ ಹೋಮ ನಡೆಯಲಿದೆ.ಶ್ರೀ ರಾಯರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಭಕ್ತರು ತಮ್ಮ ಭದ್ರತೆ ಆದ್ಯತೆ ದೃಷ್ಟಿಯಿಂದ ಸರ್ಕಾರದ ಸೂಚೆಯನ್ವಯ ಕಡ್ಡಾಯವಾಗಿ ಮುಖ ಗವುಸು, ಸ್ಯಾನಿಟೈಸರಿಂಗ್, ಥರ್ಮಲ್ ಸ್ಕಾö್ಯನಿಂಗ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಮಠದ ವ್ಯವಸ್ಥಾಪಕರು ಕೋರಿದ್ದಾರೆ.
0 Comments