Ticker

6/recent/ticker-posts

Ad Code

Responsive Advertisement

ಜಿಲ್ಲಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಚರಣೆ

ಬೆಂಗಳೂರು ನಗರ ಜಿಲ್ಲೆ ಆ,7; ಬೆಂಗಳೂರು ನಗರ ಜಿಲ್ಲೆಯ ಒಟ್ಟಾರೆ  837 ಕೆರೆಗಳಿವೆ. ಇವುಗಳಲ್ಲಿ 24 ಕೆರೆಗಳ ಪ್ರದೇಶದ ಸರ್ವೆ ಕಾರ್ಯ ಕೈಗೊಂಡಿದ್ದು. ಮಾನ್ಯ ಜಿಲ್ಲಾಧಿಕಾರಿ ಜಿ.ಮಂಜುನಾಥ್ ರವರ ನೇತೃತ್ವದಲ್ಲಿ ಕೆರೆಯ ಒತ್ತುವರಿ ತೆರವು ಕಾರ್ಯಚರಣೆ ನಡೆಸಲಾಯಿತು.

ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ 5 ತಾಲೂಕಿನಲ್ಲಿ ಒಟ್ಟು ರೂ 67,74,75,000 ಮೌಲ್ಯದ ಒಟ್ಟು 24 ಕೆರೆಗಳ 42-29.12 ಎ/ಗು ವಿಸ್ತೀರ್ಣದ ಜಮೀನುಗಳನ್ನು ಒತ್ತುವರಿ ತೆರವುಗೊಳಿಸಲಾಗಿದೆ. ಅದಲ್ಲದೆ ಯಲಹಂಕ ತಾಲೂಕಿನಲ್ಲಿ ಸುಮಾರು ರೂ .2,40,00,000. ಮೌಲ್ಯದ 0-16 ಗುಂಟೆ ಸರ್ಕಾರಿ ಖರಾಬು, ಆನೇಕಲ್ ತಾಲ್ಲೂಕಿನಲ್ಲಿ ಸುಮಾರು ರೂ 1,20,00,00. ಮೌಲ್ಯದ 3-20 ಎ/ಗು ಸರ್ಕಾರಿ ಗೋಮಾಳದ ಜಮೀನು ಹಾಗೂ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಸುಮಾರೂ 1,00,00,000. ಮೌಲ್ಯದ ಸರ್ಕಾರಿ ಗುಂಡು-ತೋಪು ಹಾಗೂ ಸುಮಾರು 1,12,00,000 ಮೌಲ್ಯದ 0-18 ಗುಂಟೆ ಸರ್ಕಾರಿ ತೋಪನ್ನು  ವಶಕ್ಕೆ ಪಡೆಯಲಾಯಿತು.

 ಬೆಂಗಳೂರಿನ ಯಲಹಂಕ ತಾಲ್ಲೂಕಿನ ಹೆಸರುಘಟ್ಟ ಹೋಬಳಿಯ ಶಿವಕೋಟೆ ಸರ್ವೆ ನಂ 37 ರಲ್ಲಿ  5-20 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ,  ಕಸಘಟ್ಟಪುರ ಸ.ನಂ 19 ರಲ್ಲಿ 1-05 ಎ/ಗು, ಕಾಕೋಳು ಗ್ರಾಮ ಸ.ನಂ 39 ರಲ್ಲಿ 1.10 ಎ/ಗು,  ಜಾಲ ಹೋಬಳಿಯ ಚಿಕ್ಕ ಜಾಲ ಗ್ರಾಮದ ಸ.ನಂ 24 ರಲ್ಲಿ 0-16 ಗು. ಸರ್ಕಾರಿ ಖರಾಬು, ಚಲುಮಕುಂಟೆ ಗ್ರಾಮದ ಸ.ನಂ 18 ರಲ್ಲಿ 4-23 ಎ/ಗು, ಸರ್ಕಾರಿ ಕೆರೆ. ಒಟ್ಟು 12.34 ಎ/ಗು ವಿಸ್ತೀರ್ಣದ, ರೂ 12,48,75,000 ಮೌಲ್ಯಧ  ಸರ್ಕಾರಿ ಕೆರಯ ಪ್ರದೇಶವನ್ನು ತೆರವುಗೊಳಿಸಿಲಾಯಿತು.

ಆನೇಕಲ್ ತಾಲ್ಲೂಕಿನ ಕಸಬ-1 ಹೋಬಳಿ ವಣಕನಹಳ್ಳಿ ಗ್ರಾಮದ ಸ.ನಂ 6 ರಲ್ಲಿ 0-24 ಗುಂಟೆ ವಿಸ್ತೀರ್ಣದ ಸರ್ಕಾರಿ ಕೆರೆ, ಕಸಬಾ-2 ಮಡಿವಾಳ  ಗ್ರಾಮದ ಸ.ನಂ 80 ರಲ್ಲಿ 0-15 ಗುಂಟೆ,  ಅತ್ತಿಬೆಲೆ-2 ಹೋಬಳಿಯ ಚಂದಾಪುರ ಸ.ನಂ.71 ರಲ್ಲಿ 0-12 ಗುಂಟೆ ಹೂವಿನ ಕೆರೆ, ಜಿಗಣಿ-1 ಹೋಬಳಿಯ ಸೊಸೆನೂರು ಗ್ರಾಮದ ಸ.ನಂ 81 ರಲ್ಲಿ 0-28 ಗುಂಟೆ, ಮಂಟಪ  ಗ್ರಾಮದ ಸ.ನಂ 159 ರಲ್ಲಿ 1-20 ಎ/ಗು, ಜಿಗಣಿ-2 ಹೋಬಳಿಯ ಹುಲಿ ಮಂಗಳ ಗ್ರಾಮದ ಸ.ನಂ 156 ರಲ್ಲಿ 3-20 ಎ/ಗು ಸರ್ಕಾರಿ ಗೋಮಾಳು, ಮತ್ತು ಸರ್ಜಾಪುರ ಹೋಬಳಿಯ ಎಸ್ ಮೇಡಹಳ್ಳಿ ಗ್ರಾಮದ 103 ಮತ್ತು 107 ರಲ್ಲಿ 2-06/ಎ/ಗು ಸರ್ಕಾರಿ ಕೆರೆ ಸರ್ಜಾಪುರ-2 ಹೋಬಳಿಯ ಚಿಕ್ಕನಾಗಮಂಗಳ ಗ್ರಾಮದ ಸ.ನಂ 32 ರಲ್ಲಿ 3-00 ಎಕರೆ, ರಾಯಸಂದ್ರ ಗ್ರಾಮದ ಸ.ನಂ 33 ರಲ್ಲಿ 0-35.08 ಗುಂಟೆ, ಸರ್ಜಾಪುರ-3 ಹೋಬಳಿಯ ಬಿ.ಹೊಸಹಳ್ಳಿ ಗ್ರಾಮದ ಸ.ನಂ. 16 ರಲ್ಲಿ 1-39.08 ಎ/ಗು, ಒಟ್ಟು 12-03 ಎ/ಗು ವಿಸ್ತೀರ್ಣದ, ರೂ 12,40,00,000 ಮೌಲ್ಯದ ಕೆರೆಯ ಪ್ರದೇಶವನ್ನು ಒತ್ತುವರಿ ತೆರುವುಗೊಳಿಸಲಾಯಿತು.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಗೋಣಿಪುರು ಗ್ರಾಮದ ಸ.ನಂ 25 ರಲ್ಲಿ 1-11 ಎ/ಗು, ಸರ್ಕಾರಿ ಕೆರೆ. ತಾವರಕೆರೆಯ ಹೋಬಳಿ ಸುಲಿವಾರ ಗ್ರಾಮದ ಸ.ನಂ 90 ರಲ್ಲಿ 1-31 ಎ/ಗು, ಗಾಣಿಕಲ್ಲು ಗ್ರಾಮದ ಸ.ನಂ 18 ರಲ್ಲಿ 0-10 ಗುಂಟೆ, ಉತ್ತರಹಳ್ಳಿ ಹೋಬಳಿಯ ವಡ್ಡರಪಾಳ್ಯ ಸ,ನಂ 25 ರಲ್ಲಿ 1-37 ಎ/ಗು. ಒಟ್ಟು 5.09 ಎ/ಗು ವಿಸ್ತೀರ್ಣದ ರೂ.3,55,00,000 ಮೌಲ್ಯದ ಕೆರೆಯ ಪ್ರದೇಶವನ್ನು ತೆರವುಗೊಳಿಸಲಾಯಿತು.

ಬೆಂಗಳೂರಿನ ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಗೋಪಾಲಪುರ ಗ್ರಾಮದ ಸ.ನಂ 103 ರಲ್ಲಿ 0-07 ಗುಂಟೆ, ಕಸಬಾ ಹೋಬಳಿ ಕಾಚರಕನಹಳ್ಳಿ ಸ.ನಂ 153 ರಲ್ಲಿ 5-00 ಎ/ಗುಂಟೆಯ  ಒಟ್ಟು 5-07 ಎ/ಗು ವಿಸ್ತೀರ್ಣದ ರೂ. 25,14,00,000 ಮೌಲ್ಯದ ಕೆರೆಯ ಪ್ರದೇಶವನ್ನು  ತೆರವುಗೊಳಿಸಲಾಯಿತು,

  ಬೆಂಗಳೂರಿನ ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿ, ಬಿದರೆ ಅಗ್ರಹಾರ ಗ್ರಾಮದ ಸ.ನಂ 40 ರಲ್ಲಿ 1-00 ಎಕರೆ,   ಚಿಕ್ಕಗುಬ್ಬಿ ಗ್ರಾಮದ  ಸ.ನಂ 73 ರಲ್ಲಿ 2-20 ಎ/ಗು, ಸರ್ಕಾರಿ ಅಂಗಳು, ಅಣಗಲಪುರು ಗ್ರಾಮದ 54 ರಲ್ಲಿ 0-05 ಗುಂಟೆ, ಗುಂಡುತೋಪು, ಬಯ್ಯನಹಳ್ಳಿ ಗ್ರಾಮದ ಸ.ನಂ 21 ರಲ್ಲಿ 2-35 ಎ/ಗು,  ಮಂಡೂರು ಗ್ರಾಮದ ಸ.ನಂ 79 ರಲ್ಲಿ 0-01.04 ಗುಂಟೆ, ಕನ್ನಮಂಗಲ ಗ್ರಾಮದ ಸ.ನಂ. 132 ರಲ್ಲಿ 0-01. ಗುಂಟೆ, ಗುಂಡು ತೋಪು, ಶಿಗೇಹಳ್ಳಿ ಗ್ರಾಮದ ಸ.ನಂ 10 ರಲ್ಲಿ 0-12 ಗುಂಟೆ  ಸರ್ಕಾರಿ ತೋಪು, ವರ್ತೂರು ಹೋಬಳಿಯ ಸೂಲಿಕುಂಟೆ ಗ್ರಾಮದ ಸ,.ನಂ 112 ರಲ್ಲಿ 0-22-08 ಗುಂಟೆ ಒಟ್ಟು 7-16.12 ಎ/ಗು  ವಿಸ್ತೀರ್ಣದ ರೂ 20,39,00,000 ಮೌಲ್ಯದ ಸರ್ಕಾರಿ ಕೆರಯ ಪ್ರದೇಶವನ್ನು ತೆರೆವುಗೊಳಿಸಲಾಯಿತ್ತು .
ಈ ಕಾರ್ಯಗಾರದಲ್ಲಿ  ತಾಲ್ಲೂಕಿನ ತಹಶೀಲ್ದಾರಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 


Post a Comment

0 Comments

Ad Code

Responsive Advertisement