ನಗರದ ಯಲಹಂಕದಲ್ಲಿನ ರಮಡಾ ಹೋಟೆಲ್ ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದ ಫೈನಲ್ ನಲ್ಲಿ ಮೇಘಾ ರವೀಂದ್ರಸ್ವಾಮಿ ವಿಜೇತೆಯಾಗುವ ಮೂಲಕ ಮಿಸೆಸ್ ಇಂಡಿಯಾ ಕರ್ನಾಟಕ 2021ರ ಕಿರೀಟ ಮುಡಿಗೇರಿಸಿಕೊಂಡರು.
ಈ ಬಾರಿಯ ಸೌಂದರ್ಯ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಶ್ರದ್ಧಾ ದಾಮೋದರ್. ಎರಡನೇ ರನ್ನರ್ ಅಪ್ ಆಗಿ ನವ್ಯಾಗೌಡ ಮತ್ತು ಶೀತಲ್ ನೆಟಲ್ ಕರ್, ಮೂರನೇ ರನ್ನರ್ ಅಪ್ ಆಗಿ ಶಿಲ್ಪಾ ಶ್ರೀಧರ್ ಮತ್ತು ಅರ್ಚನಾ ಜಯರಾಮ್ ಹಾಗೂ ನಾಲ್ಕನೇ ರನ್ನರ್ ಅಪ್ ಆಗಿ ಡಾ ಶ್ವೇತಾ ಜಕ್ಕಾ ಮತ್ತು ನೀತು ಆರ್ ಪ್ರಸನ್ನ ಆಯ್ಕೆಯಾದರು.
ಮೂರು ಸುತ್ತುಗಳಲ್ಲಿಯೂ ಅತ್ಯುತ್ತಮ ಪ್ರದರ್ಶನ ತೋರಿದ ಗೃಹಿಣಿಯರು ಅಂತಿಮ ಆಯ್ಕೆಗಾಗಿ ತೀವ್ರ ಕಸರತ್ತು ತೋರಿಸಿದರು.
ವಿವಿಧ ಆಕರ್ಷಣೆಗಳನ್ನ ಹೊಂದಿದ್ದ ಮಿಸೆಸ್ ಇಂಡಿಯಾ ಕರ್ನಾಟಕ ಫೈನಲ್‍ನಲ್ಲಿ 25 ಸ್ಪರ್ಧಿಗಳ ಭಾಗವಹಿಸಿದ್ದರು. ಆಡಿಷನ್‍ನಲ್ಲಿ ಭಾಗವಹಿಸಿದ್ದ ನೂರಾರು ಗೃಹಿಣಿಯರಲ್ಲಿ ಅಂತಿಮವಾಗಿ 25 ಜನರನ್ನ ಮಾತ್ರ ಫೈನಲ್‍ಗೆ ಆಯ್ಕೆ ಮಾಡಲಾಗಿತ್ತು.
ಅಂತಿಮ ಹಣಾಹಣಿಯು ಈ ಹಿಂದಿನ ಸುತ್ತಿನ ಆಯ್ಕೆಗಳ ಆಧಾರದ ಮೇಲೆ ನೆರವೇರಿತು. ಮೂರು ಸುತ್ತಿನ ಮೂಲಕ ಈ ಆಯ್ಕೆಯ ಪ್ರಕ್ರಿಯೆಯನ್ನ ನಡೆಸಲಾಯಿತು. ಸ್ಪರ್ಧಿಗಳು ಸಾಸ್ಕøತಿಕ ಹಿನ್ನೆಲೆಯ ಯಾವುದೇ ಸಂದೇಶವುಳ್ಳ ಅಥವಾ ಥೀಮ್ ಬೇಕಾದರು ಆಯ್ದುಕೊಳ್ಳಬಹುದಾಗಿತ್ತು. ಹೀಗಾಗಿ ಗೃಹಿಣಿಯರು ತರಹೇವಾರಿ ವಿಶೇಷ ಉಡುಪು, ರೂಪಿನೊಂದಿಗೆ ತೀರ್ಪುಗಾರರಿಗೆ ಸವಾಲು ಹಾಕಿದರು. ಎರಡನೇ ಸುತ್ತಿನಲ್ಲಿ ಸಾಸಿ ಎಲೆಗೆಂಝಾ ವಿನ್ಯಾಸಗಾರ್ತಿ ಸಂಧ್ಯಾ ವಿನ್ಯಾಸಗೊಳಿಸಿರುವ ಹವಾಯಿನ್ ಥೀಮ್‍ನಲ್ಲಿ ಕಂಗೊಳಿಸಿದರು. ಸೊಬಗಿನೊಂದಿಗೆ ಬಿನ್ನಾಣದಿಂದ ಬಳುಕಿದ ನಾರಿಯರ ಪರೇಡ್ ಪ್ರೇಕ್ಷಕರ ಕಣ್ಮನ ರಂಜಿಸಿತು. ನಂತರದಲ್ಲಿ ಅಂತಿಮ ಸುತ್ತಿನಲ್ಲಿ ವೆಸ್ಟ್‍ರ್ನ್ ಗೌನ್ ನಲ್ಲಿ ಸ್ಪರ್ಧಿಗಳು ಕಾಣಿಸಿಕೊಳ್ಳುವ ಮೂಲಕ ವೇದಿಕೆಗೆ ಕಿಚ್ಚು ಹಚ್ಚಿದರು.
ಮದುವೆಯಾದ ಮಹಿಳೆಯರಲ್ಲಿನ ಪ್ರತಿಭೆಗೆ ಅತ್ಯುತ್ತಮ ವೇದಿಕೆ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ರೂಪಿತವಾಗಿರುವ ಮಿಸೆಸ್ ಇಂಡಿಯಾ ಕರ್ನಾಟಕ ಈ ಬಾರಿಯೂ ಮತ್ತಷ್ಟು ಮೆರಗು ತುಂಬಿಕೊಂಡಿತ್ತು. ನಾಡಿನ ಅನೇಕ ಗೃಹಿಣಿಯರಿಗೆ ಆತ್ಮವಿಶ್ವಾಸ ಹಾಗೂ ಹೆಮ್ಮೆ ಪಡುವಂತೆ ಮಾಡುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.
ಈ ಕುರಿತು ಮಾತನಾಡಿದ ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯ ಆಯೋಜಕಿ, ನಿರ್ದೇಶಕಿ ಹಾಗೂ ಮಿಸೆಸ್ ಏಶಿಯಾ ಇಂಟರ್‍ನ್ಯಾಷನಲ್ ಪ್ರತಿಭಾ ಸಂಶಿಮಠ, "ಕೇವಲ ಸೌಂದರ್ಯಕ್ಕಷ್ಟೇ ಈ ಸ್ಪರ್ಧೆ ಸೀಮಿತವಲ್ಲ. ಹೆಣ್ಣಿನೊಳಗೆ ಅಡಗಿರುವ ಅನೇಕ ಕಲೆಯನ್ನ ಅರಿಯುವುದಕ್ಕೆ ಒಂದು ಅತ್ಯುತ್ತಮ ಅವಕಾಶವಾಗಿಯೂ ಈ ಸ್ಪರ್ಧೆ ರೂಪುಗೊಂಡಿದೆ. ಇವರೆಲ್ಲಾ ಕೇವಲ ಮಾಡೆಲ್‍ಗಳಷ್ಟೇ ಅಲ್ಲ. ಇಡೀ ಸ್ತ್ರೀ ಸಮುದಾಯಕ್ಕೆ ರೋಲ್ ಮಾಡೆಲ್‍ಗಳು ಎಂಬುದನ್ನ ತೋರಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಯನ್ನ ಆಯೋಜಿಸಲಾಗಿದೆ", ಎಂದರು.
ಮಿಸೆಸ್ ಇಂಡಿಯಾ ಕರ್ನಾಟಕದಲ್ಲಿ ವಿಜೇತರಾದವರು ರಾಷ್ಟ್ರಮಟ್ಟದಲ್ಲಿ ದೀಪಾಲಿ ಫಡ್ನಿಸ್ ಆಯೋಜಿಸುವ ಮಿಸೆಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಾರೆ.
ಇನ್ನಿತರ ಟೈಟಲ್ ವಿಜೇತರ ಪಟ್ಟಿ
ಸೂಪರ್ ಕ್ಲಾಸಿಕ್ ವಿನ್ನರ್ - ರಜಿನಿ ಲಕ್ಕಾ
ಸೂಪರ್ ಕ್ಲಾಸಿಕ್ ಫಸ್ಟ್ ರನ್ನರ್ ಅಪ್ - ಪ್ರೇಮಾ ಆನಂದ್
ಕ್ಲಾಸಿಕ್ ವಿನ್ನರ್ - ಶ್ರುತಿ ಶಿವಲಿಂಗಯ್ಯ
ಕ್ಲಾಸಿಕ್ ಫಸ್ಟ್ ರನ್ನರ್ ಅಪ್ ರೇಖಾ ಸತೀಶ್
ಕ್ಲಾಸಿಕ್ ಸೆಕೆಂಡ್ ರನ್ನರ್ ಅಪ್ - ಶೈಲಜಾ ಮಾಯಿಬಮ್
ಕ್ಲಾಸಿಕ್ ಥರ್ಡ್ ರನ್ನರ್ ಅಪ್ - ಮಂಜುಳಾ ರಘುರಾಮ್
ಕ್ಲಾಸಿಕ್ ಫೋರ್ಥ್ ರನ್ನರ್ ಅಪ್ - ಪ್ರತಿಭಾ ಎಸ್









0 Comments