ಬೆಂಗಳೂರಿನ ಆರ್.ವಿ. ವಿಶ್ವವಿದ್ಯಾಲಯವು ಪ್ರತಿಭಾವಂತ ಹಾಗೂ ಕೋವಿಡಿನಿಂದ ತೊಂದರೆಗೊಳಗಾಗಿರುವ ವಿದ್ಯಾರ್ಥಿಗಳಿಗೆ, ನೂರು ವಿದ್ಯಾರ್ಥಿ ವೇತನ/ಸ್ಕಾಲರ್ಶಿಪ ಗಳನ್ನು ಘೋಷಿಸಿದೆ. ಇದು ಈಗ ಪ್ರಾರಂಭವಾಗಲಿರುವ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸಲಾಗುವುದು.
ಇದಲ್ಲದೇ, ಸ್ಕೂಲ್ ಆಫ್ ಎಕನಾಮಿಕ್ಸ ಆಂಡ್ ಫೈನಾನ್ಸ ನ ಬಿಬಿಎ, ಬಿಕಾಮ್, ಮತ್ತು ಬಿಎ ಎಕನಾಮಿಕ್ಸ ತರಬೇತಿಗಳಿಗೆ, ೯೫ % ಪಡೆದ ಹತ್ತು ವಿದ್ಯಾರ್ಥಿಗಳಿಗೆ ೧೦೦% ಸ್ಕಾಲರ್ಶಿಪ್ ಕೊಡಲಾಗುವುದು, ೮೦ರಿಂದ ೯೫ ರಷ್ಟು ಅಂಕ ಪಡೆದವರಿಗೆ, ಶೈಕ್ಷಣಿಕ ಶುಲ್ಕದ ೨೫ ರಷ್ಟು ೨೫ ಬಿಬಿಎ, ಬಿಕಾಮ್ ವಿದ್ಯಾರ್ಥಿಗಳಿಗೆ, ಮತ್ತು ಹತ್ತು ಬಿಎ ಎಕನಾಮಿಕ್ಸ ವಿದ್ಯಾರ್ಥಿಗಳಿಗೆ ಕೊಡಲಾಗುವುದು.
ಲಿಬೆರಲ್ ಆರ್ಟ್ಸ ಆಂಡ್ ಸೈನ್ಸಸ್ ಸ್ಕೂಲಿಗೆ ೧೫ ಲಕ್ಷ ರೂಪಾಯಿಗಳ ಮೊತ್ತವನ್ನು ನಿಗದಿಪಡಿಸಲಾಗಿದ್ದು, ಇದನ್ನು ಅತ್ಯಂತ ಪ್ರತಿಭಾವಂತರಿಗೂ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದವರಿಗೆ ನೀಡಲಾಗುವುದು. ಆರ್.ವಿ. ಸಂಸ್ಥೆಯ ಆಯ್ಕೆ ಸಮಿತಿಯು ಈ ನಿರ್ಧಾರಗಳನ್ನು ಕೈಗೊಳ್ಳುತ್ತದೆ.
ಡಿಸೈನ್ ಸ್ಕೂಲಿಗೆ ೧೫ ಲಕ್ಷ ರೂಪಾಯಿಗಳ ಮೊತ್ತವನ್ನು ನಿಗದಿಪಡಿಸಲಾಗಿದ್ದು, ಸ್ಕಾಲರ್ಶಿಪ ಗಳು ನಾಲ್ಕು ವರ್ಷಗಳ ಬಿ.ಡೆಸ್ ಹಾಗು ಎರಡು ವರ್ಷಗಳ ಎಮ್.ಡೆಸ್ ಗೆ ಕೊಡಲಾಗುತ್ತದೆ. ಶೈಕ್ಷಣಿಕ ಶುಲ್ಕದ ೫೦ % ರಷ್ಟು Undergraduate Common Entrance Exam for Design (UCEED) ಪರೀಕ್ಷೆಯಲ್ಲಿ ೧-೪೦೦ ರಾಂಕ್ ಪಡೆದವರಿಗೂ ಮತ್ತು NID Design Aptitude Test (DAT) ಪರೀಕ್ಷೆಯಲ್ಲಿ ೮೧-೧೦೦ ಅಂಕಗಳನ್ನು ಪಡೆದವರಿಗೆ ನೀಡಲಾಗುವುದು. ೪೦೧-೮೦೦ ರಾಂಕ್ ಮತ್ತು ೬೬-೮೦ ಅಂಕ ಪಡೆದವರಿಗೆ ೩೦ ರಷ್ಟು, ೮೦೧-೧೫೦೦ ರಾಂಕ್ ಮತ್ತು ೫೧-೬೫ ಅಂಕ ಪಡೆದವರಿಗೆ ೧೫ ರಷ್ಟು ನೀಡಲಾಗುವುದು.
ಮೊದಲನೇ ವರ್ಷದ ಫಲಿತಾಂಶದ ಮೇರೆಗೆ ಸ್ಕಾಲರ್ಶಿಪ್ ಗಳನ್ನು ಮುಂದುವರೆಸಲಾಗುವುದು.
ಆರ್.ವಿ. ಸಂಸ್ಥೆಯು ಅಲಮ್ನಿ ಸ್ಕಾಲರ್ಶಿಪ್ ಗಳನ್ನು ಈ ಹಿಂದೆ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ೨೫೦೦೦ ರೂಪಾಯಿಗಳನ್ನು ನೀಡಲಾಗುವುದು. ಉತ್ತಮ ನಡವಳಿಕೆ, ಉತ್ತಮ ಹಾಜರಿ ಮತ್ತು ಉತ್ತೀರ್ಣರಾದವರಿಗೆ ಪದವಿ ಶಿಕ್ಷಣದ ಪೂರ್ಣಾವಧಿಗೆ ವಿಸ್ತೀರ್ಣಗೊಳಿಸಲಾಗುವುದು. ಆರ್.ವಿ. ಸಂಸ್ಥೆಯಲ್ಲಿ ಸೇವೆಯಲ್ಲಿರುವ ಸಿಬ್ಬಂದಿಯ ಮಕ್ಕಳಿಗೂ ೨೫,೦೦೦ ದ ಸ್ಕಾಲರ್ಶಿಪ್ ನೀಡಲಾಗುವುದು. ವಿದ್ಯಾರ್ಥಿಯ ಪೂರ್ಣ ಶಿಕ್ಷಣಾವದಿಯಲ್ಲಿ ಪೋಷಕರೊಬ್ಬರು ಸಂಸ್ಥೆಯಲ್ಲಿ ಕೆಲಸ ಮುಂದುವರೆಸಿದರೆ, ಪ್ರತಿ ವರ್ಷವೂ ೨೫,೦೦೦ ನೀಡಲಾಗುವುದು.
ಪ್ರೋ-ಉಪ ಚಾನ್ಸಲರ್ ಹಾಗು ಆರ್ ಎಸ್ ಎಸ್ ಟಿ ಟ್ರಸ್ಟಿನ ಜಂಟಿ ಕಾರ್ಯದರ್ಶಿಗಳಾದ ಡಿ,ಪಿ. ನಾಗರಾಜರವರು: “ನಮ್ಮ ಸಂಸ್ಥೆಯು ಸಾರ್ವಜನಿಕ ಸೇವಾ ಸಂಸ್ಥೆಯಾಗಿದ್ದು, ಎಲ್ಲರಿಗೂ ಶಿಕ್ಷಣವನ್ನು ಒದಗಿಸಬೇಕು ಎನ್ನುವುದು ನಮ್ಮ ಉದ್ದೇಶ. ಈ ಸ್ಕಾಲರ್ಶಿಪ್ ಗಳ ಮೂಲಕ ಶಿಕ್ಷಣದ ಬಗ್ಗೆ ನಮಗಿರುವ ಕಾಳಜಿಯನ್ನು ಪ್ರಕಟಿಸುತ್ತಿದ್ದೇವೆ.”
ಪ್ರೋ-ಚಾನ್ಸಲರ್ ಹಾಗು ಆರ್ ಎಸ್ ಎಸ್ ಟಿ ಟ್ರಸ್ಟಿನ ಕಾರ್ಯದರ್ಶಿಗಳಾದ ಎವಿಎಸ್ ಮೂರ್ತಿಯವರು: “ಸಮಾಜದ ಎಲ್ಲ ವರ್ಗಕ್ಕೂ ಶಿಕ್ಷಣ ಒದಗಿಸಬೇಕೆನ್ನುವುದೇ ನಮ್ಮ ಮೂಲ ಉದ್ದೇಶ. ಯೋಗ್ಯ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ದೇಶಕ್ಕೆ ಸೇವೆ ಸಲ್ಲಿಸುವಂತಾದರೆ ನಮ್ಮ ಉದ್ದೇಶ ಸಾರ್ಥಕ.”
ಆರ್.ವಿ. ವಿಶ್ವವಿದ್ಯಾಲಯದ ಕುಲಪತಿಗಳಾದ ಫ್ರೊ. ವೈಎಸ ಆರ್ ಮೂರ್ತಿಯವರು ಹೀಗೆಂದರು: ಈ ವಿಶ್ವವಿದ್ಯಾಲಯವು ವಿಶ್ವಮಟ್ಟಕ್ಕೇರಬೇಕು ಎನ್ನುವುದು ನಮ್ಮ ಆಸೆ. ಸದೃಢ ಯುವ ಜನತೆಯನ್ನು, ಈ ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವವರನ್ನು ತಯಾರು ಮಾಡಬೇಕು. ಆರ್ ಎಸ್ ಎಸ್ ಟಿ ಟ್ರಸ್ಟಿನ ಎಲ್ಲರಿಗೂ ಇಂಥ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದಕ್ಕಾಗಿ ಮಾತ್ರವಲ್ಲ ಇಂಥಾ ವಿದ್ಯಾನಿಧಿಯನ್ನು ಸ್ಥಾಪಿಸಿದಕ್ಕಾಗಿ ಅಭಿನಂದನೆಗಳು.”
ಆರ್.ವಿ. ವಿಶ್ವವಿದ್ಯಾಲಯವು ೨೦೨೧-೨೨ರ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್ಡಿ ಕಾರ್ಯಕ್ರಮಗಳಿಗೆ ಸೇರ್ಪಡೆ ಪ್ರಕ್ರಿಯೆ ಪ್ರಾರಂಭವಾಗಿದೆ.
ಕರ್ನಾಟಕ ವಿಧಾನಸಭೆ ಜಾರಿಗೊಳಿಸಿರುವ ಆರ್.ವಿ. ವಿಶ್ವವಿದ್ಯಾಲಯ ೨೦೧೯ ಆಕ್ಟಿನಂತೆ ಸ್ಥಾಪಿಸಲಾಗಿದೆ. ಯುಜಿಸಿಯ ಸೆಕ್ಶನ್ ೨ಫ್ ಪ್ರಕಾರ ಅನುಮತಿ ದೊರಕಿದೆ.

0 Comments