ಬೆಂಗಳೂರು: ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಕಾರ್ಯದರ್ಶಿಯಾಗಿ ಜಿ. ಶ್ರೀಧರ್ ಅವರನ್ನು ನೇಮಕ ಮಾಡಲಾಗಿದೆ.
ಮುಳಬಾಗಿಲು ತಾಲೂಕಿನ ಗೋಪಸಂದ್ರದ ದಿವಂಗತ ಹೆಚ್ ಎನ್ ಗೋಪಾಲಕೃಷ್ಣರಾಯರ ಪುತ್ರರಾದ ಜಿ.ಶ್ರೀಧರ್ ರವರು ಕರ್ನಾಟಕ ಸರ್ಕಾರ ಸಂಸದೀಯ ವ್ಯವಹಾರಗಳ ಇಲಾಖೆಯಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿರುವುದು ಸ್ವಾಗತಾರ್ಹ. ಇದು ಬ್ರಾಹ್ಮಣ ಸಮುದಾಯಕ್ಕೆ ಹೆಮ್ಮೆ ತರುವ ವಿಷಯ. ಇವರಿಗೆ ನಮ್ಮೆಲ್ಲರ ಅಭಿನಂದನೆಗಳು.
ಈಗಾಗಲೇ ಕಳೆದ ಮೂರು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿದ್ದ ದ್ವಾರಕಾನಾಥ್ ಬಾಬು ಅವರ ಅವಧಿ ಜುಲೈ 31ರಂದು ಅಂತ್ಯವಾಗಿದ್ದನ್ನು ಇಲ್ಲಿ ಗಮನಿಸಬಹುದು.
2018ರಿಂದ ಕಾರ್ಯದರ್ಶಿ ಹುದ್ದೆ ಖಾಲಿ ಇದ್ದು, ಆ ಹುದ್ದೆಯಿಂದ ನಿವೃತ್ತರಾಗಿದ್ದ ದ್ವಾರಕಾನಾಥ್ ಬಾಬುರನ್ನೇ ಮೊದಲಿಗೆ ಎರಡು ವರ್ಷ, ನಂತರ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮುಂದುವರಿಸಲಾಗಿತ್ತು. ಈ ಹುದ್ದೆಗೆ ಅರ್ಹರು ಇದ್ದರೂ ಅವರನ್ನು ಮುಂದುವರಿಸಿದ ಬಗ್ಗೆ ಹಿರಿಯ ಅಧಿಕಾರಿಗಳ ವಲಯದಲ್ಲಿ ತೀವ್ರ ಆಕ್ಷೇಪವೂ ಕಂಡು ಬಂದಿತ್ತು.
ಇಲಾಖೆಯಲ್ಲಿ ವಿಶೇಷ ಕಾರ್ಯದರ್ಶಿಯಾಗಿರುವ ಶ್ರೀಧರ್ ಅವರನ್ನು ಖಾಲಿ ಹುದ್ದೆಗೆ ನೇಮಿಸಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ವಿಪ್ರ ಸಮಾಜದ ಅನೇಕಾನೇಕ ಗಣ್ಯರು ಜಿ. ಶ್ರೀಧರ್ ರವರು ಸಂಸದೀಯ ಇಲಾಖೆ ಕಾರ್ಯದರ್ಶಿಯಾಗಿ ನೇಮಕಗೊಂಡಿರುವುದನ್ನು ಸ್ವಾಗತಿಸಿದ್ದಾರೆ.

0 Comments