ಮಲ್ಲೇಶ್ವರ ಬಹಳ ಹಳೆಯ ಬಡಾವಣೆ.ಕಾಡು ಮಲ್ಲೇಶ್ವರ ಎಂದರೆ ಮೊದಲು ಇಲ್ಲಿ ಕಾಡು ಇತ್ತು ಎಂತಲೂ ಹೇಳುತ್ತದೆ ಇತಿಹಾಸ.ಈ ಬಡಾವಣೆಯ ಮರಗಳೂ ಬಹಳ ಹಳೆಯವು.ಹಾಗಾಗಿ ಆಗಾಗ ದೊಡ್ಡ ದೊಡ್ಡ ಮರಗಳು ಆಗಾಗ ಬುಡ ಸಮೇತ ಕಿತ್ತುಕೊಂಡು ಬಂದು ಉದುರುತ್ತವೆ.ಅನೇಕರ ಮನೆಗಳಲ್ಲಿ ನೆಟ್ಟ ತೆಂಗಿನ ಮರಗಳದೂ ಅದೇ ಕಥೆ.ಬುಡದಲ್ಲಿರು ಬೇರು ಕಿತ್ತುಕೊಂಡು ಬಂದು ಅನೇಕ ತೆಂಗಿನ ಮರಗಳು ಯಾವಾಗ ಬೇಕಾದರೂ ಬೀಳಬಹುದು ಎಂಬ ಸ್ಥಿತಿ ತಲುಪಿರುತ್ತದೆ.ಈ ಮರಗಳು ಬಿದ್ದಾಗ ವಿದ್ಯುತ್ ತಂತಿಗಳ ಮೇಲೋ, ಯಾವುದೋ ಕಟ್ಟಡದ ಮೇಲೋ, ರಸ್ತೆಯಲ್ಲಿ ನಿಂತ ವಾಹನಗಳ ಮೇಲೋ ಆಗಾಗ ಬೀಳುತ್ತಲೇ ಇರುತ್ತದೆ.ಸಾರ್ವಜನಿಕರ ಹುಯದೃಷ್ಡಿಯಿಂದ ಎಲ್ಲರೂ ಇಂತಹ ವಿಚಾರಗಳನ್ನು ಗಮನಿಸಿ ಸಂಬಂಧಪಟ್ಟವರ ಗಮನಕ್ಕೆ ತಂದು ಆಗಾಗ ಸರಿಪಡಿಸುತ್ತಲೇ ಇರಬೇಕು.ಇನ್ನು ಮುಂದೆಯೂ ಮಲ್ಲೇಶ್ವರದಲ್ಲಿ ಸಾಕಷ್ಟು ಮರಗಳು ಉದುರುವುದನ್ನು ಖಂಡಿತವಾಗಿ ಊಹಿಸಬಹುದು.ಇದೆಲ್ಲಾ ಯಾರು ನೋಡಿಕೊಳ್ಳಬೇಕಾದ ಕೆಲಸ ಬೆಸ್ಕಾಂ, ಅರಣ್ಯ ಇಲಾಖೆ, ಬಿಬಿಎಂಪಿ.ಇವುಗಳನ್ನು ಗಮನಿಸಬೇಕಾದ ಶಾಸಕರು ಮತ್ತು ಬಿಬಿಎಂಪಿ ಸದಸ್ಯರ ಕರ್ತವ್ಯಗಳೇನು ಖಂಡಿತ ನಿಖರವಾಗಿ ತಿಳಿಯುವುದಿಲ್ಲ.
ಮಲ್ಲೇಶ್ವರದಲ್ಲಿ ಜೋರಾಗಿ ಮಳೆ ಬಿದ್ದಾಗ ದೊಡ್ಡ ಮರಗಳ ರೆಂಬೆ ಕೊಂಬೆಗಳು ಎಷ್ಟೋ ವಾಹನಗಳ ಮೇಲೆ ಬಿದ್ದು ಹಾನಿಯಾಗುತ್ತಲೇ ಇರುತ್ತದೆ.ಬಹುತೇಕ ಮನೆಗಳಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿಕೊಳ್ಳಲೂ ಪಾರ್ಕಿಂಗ್ ಇಲ್ಲ.ಸಣ್ಣ ಪ್ಯಾಸೇಜಿನಲ್ಲೂ ಒಂದರ ಹಿಂದೊಂದು ದ್ವಿಚಕ್ರ ವಾಹನ ನಿಂತರೆ ಎಲ್ಲರಿಗೂ ತೊಂದರೆ.ಇನ್ನು ರಸ್ತೆಗಳಲ್ಲೇ ದ್ವಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರದ ವಾಹನಗಳು ಸದಾ ನಿಂತಿರುತ್ತದೆ.ಟ್ರಾಫಿಕ್ ಸಮಸ್ಯೆ ಇರುವ ಕಾರಣಕ್ಕೆ ರಸ್ತೆಯಲ್ಲಿ ನಿಂತ ವಾಹನಗಳಿಗೆ ಯಾವುದೋ ವಾಹನಗಳು ಗುದ್ದಿಕೊಂಡೋ ಉಜ್ಜಿಕೊಂಡು ಹೋಗಿ ವಾಹನಗಳು ಹಾನಿಗೊಂಡಿರುತ್ತದೆ.ಮರದ ರೆಂಬೆ ಕೊಂಬೆಗಳು ಬಿದ್ದು ಕಾರಿನ ಮುಂಭಾಗದ ಗಾಜು ಮುರಿದರೆ ಮೇಲ್ಭಾಗದಲ್ಲೋ ಹಿಂಭಾಗದಲ್ಲೋ ಮುಂಭಾಗದಲ್ಲೋ ದಪ್ಪನೆಯ ಕೊಂಬೆ ಬಿಟ್ಟು ವಾಹನಗಳು ಡೆಂಟಾಗುತ್ತದೆ.ವಿಮಾ ಸಂಸ್ಥೆಗಳ ಕ್ಲೈಮುಗಳನ್ನು ವಾಹನಗಳು ಒಳಗೊಂಡು ವಿಮಾ ಕಂಪನಿಗಳಿಗೂ ನಷ್ಟ. ಜನನಿಬಿಡ ಪ್ರದೇಶಗಳು ಇಂತಹ ಅವಘಡಗಳು ಸಂಭವಿಸದಂತೆ ಮುನ್ನೆಚರಿಕೆ ಅಗತ್ಯ ! ಗೆದ್ದಲು ಹಿಡಿದ ಮರ.ಯಾವಾಗ ಬೇಕಾದರೂ ಉರುಳುತ್ತದೆ ಎಂದು ಅಂದಾಜಿಸಬಹುದಾಗ ಮರಗಳನ್ನು ಸಂಬಂಧಪಟ್ಟವರು ಗಮನಿಸಿ ಅವುಗಳನ್ನು ಸುರಕ್ಷಿತವಾಗಿ ತೆಗೆಸುವುದರಿಂದ ನಾನಾ ಹಾನಿಗಳನ್ನು ತಡೆಯಬಹುದು. ಮಲ್ಲೇಶ್ವರದಲ್ಲಿ ಮರಗಳು ಉರುಳುವುದು ಸಾಮಾನ್ಯ ಅಂತ ಯಾರೂ ಗಮನಿಸದೇ ಬೇಕಾಬಿಟ್ಟಿಯಾಗಿದ್ದು ಬಿಟ್ಟರೆ ಬಹು ದೊಡ್ಡ ಹಾನಿಗಳಾಗಬಹುದು ? ಯಾಕೆ ಯಾರೂ ಇಂತಹ ವಿಷಯಗಳನ್ನು ಗಮನಿಸುವುದಿಲ್ಲ ?
C.N.Ramesh


0 Comments