ಬೀದರ್ (ಆ.16): ಸೆ.03ರಂದು ನಡೆಯಲಿರುವ ಬೀದರ್ ನಗರ ಸಭೆಯ ವಾರ್ಡ್ ನಂಬರ್ 26 ಮತ್ತು 32ರ ಚುನಾವಣೆಯ ಸಿದ್ದತೆ ವಿಚಾರವಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಪುರ್ ರವರ ನೇತೃತ್ವದಲ್ಲಿ ಜೆಡಿಎಸ್ ನಾಯಕರು ಸಭೆ ನಡೆಸಿದರು.
ಬೀದರ್ ನಗರದಲ್ಲಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ನಿವಾಸದಲ್ಲಿ ಸಭೆ ನಡೆಸಿದ ಜೆಡಿಎಸ್ ನಾಯಕರು, ಮುಂಬರುವ ನಗರ ಸಭೆ ಚುನಾವಣೆಯ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಕಾರ್ಯ, ಗೆಲುವಿನ ತಂತ್ರಗಳು, ಪಕ್ಷದ ಬೆಳವಣಿಗೆ, ಮುಂಬರುವ ಚುನಾವಣೆಗಳ ಸಿದ್ದತೆ ಸೇರಿದಂತೆ ಅನೇಕ ವಿಷಯಗಳ ಸಂಬಂಧ ಚರ್ಚಿಸಿದರು.
ಇದೇ ವೇಳೆ ನಗರಸಭೆ ಚುನಾವಣೆಯಲ್ಲಿ ವಿಜೇತರಾದ ಪಕ್ಷದ ಸದಸ್ಯರಾದ (ಅವರ ಕುಟುಂಬಸ್ಥರು) ರಾಜು ಚಿಂತಾಮಣಿ, ಸೈಯದ್ ಸೌದ್, ದ್ರೌಪದಿ ಕಾಳೆ, ಹಿಂದುಮತಿ ಚಿದ್ರಿ, ಅರುಣ್, ದಾವೂದ್, ಶಿವಕುಮಾರ್ ಬಾವಿಕಟ್ಟಿರವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರಾಜಶೇಖರ್ ಜಾವಳೆ, ನಬಿ ಖುರೇಸಿ, ಅಶೋಕ್ ಕೊಡ್ಗೆ, ರಾಜು ಚಿಲರ್ಗಿ, ಸೌದ್ ಖಾದ್ರಿ, ಸುದರ್ಶನ್, ಸುರ್ಯಕಾಂತ ದಂಡಿನ್, ಅಭಿ ಕಾಳೆ, ಸಾಹೇಬ್ ರೇಕುಳಗಿ, ಅತಿಕ್ ಅಹ್ಮದ್, ದೇವೆಂದ್ರ ಸೋನಿ, ಅನಿಲ್ ಸುರಳಿ, ಬಸವರಾಜ್ ಪಾಟೀಲ್ ಆರೋಗೇರಿ, ಬಾಬು ಗಾದ್ಗಿ, ಅಬೇದ್ ಹಲಿ ಸೇರಿದಂತೆ ಅನೇಕರಿದ್ದರು.
VARTHAJALA, MALLESWARA, BENGALURU 560 003. 080-23319247




0 Comments