11ನೇ ಶತಮಾನದಲ್ಲಿ ಇಟಗಿಯಲ್ಲಿ ನಿರ್ಮಿಸಿದ, ಮಹದೇವ ದೇವಾಲಯವು. ದೇವಾಲಯ ಚಕ್ರವರ್ತಿ ಎಂದು ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. ಇಟಗಿಯವರಾದ ರಮೇಶ ಸುರ್ವೆ ಇದುವರೆಗೆ, ನಾಡಿನ ಪತ್ರಿಕೆಗಳಿಗೆ ಅನೇಕ ಲೇಖನ ಹಾಗೂ ಸಾಕ್ಷö್ಯಚಿತ್ರ, ಮಂದಾಕಿನಿ ಎಂಬ ಸಿನಿಮಾ ನಿರ್ಮಿಸಿ ಒಂದು ಹಾಡಿನಲ್ಲಿ ದೇವಲಾಯವನ್ನು ತೋರಿಸಿದ್ದಾರೆ. ಈಗ ನಡೆಯುತ್ತಿರುವ ಇಟಗಿ ಉತ್ಸವಕ್ಕೆ ಕಾರಣಕರ್ತರು ಕೂಡಾ.
ಅವರೇ ಪತ್ರಿಕೆಗಳಿಗೆ ಫೋಟೋ ಸಮೇತ ಇದುವರೆಗೆ 8 ಲೇಖನಗಳನ್ನು ಬರೆದಿದಾರೆ. ಪ್ರಜಾವಾಣಿ, ಕನ್ನಡಪ್ರಭ, ಸುಧಾ, ಕರ್ಮವೀರ, ಪ್ರಿಯಾಂಕ ಹಾಗೂ ನಮಸ್ಕಾರ, ಸೇರಿದಂತೆ, ಕರ್ನಾಟಕದ ದೇವಾಲಯಗಳು ಎಂಬ ಪುಸ್ತಕಕ್ಕು ಲೇಖನ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ರಮೇಶ ಸುರ್ವೆ ಪ್ರಧಾನ ಸಂಪಾದಕತ್ವದಲ್ಲಿ, ದೇವಾಲಯ ಚಕ್ರವರ್ತಿ ಇಟಗಿ ಮಹದೇವ ದೇವಾಲಯ ಕುರಿತು ಬೃಹತ್ ಪುಸ್ತಕವನ್ನು ಪ್ರಕಟಿಸಲು ನಿರ್ಧರಿಸಿz್ದೆÃವೆ.
ಈಗಾಗಲೇ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನ ಅಥವಾ ಬೇರೆ ಗ್ರಂಥಗಳಲ್ಲಿ ಪ್ರಕಟವಾದ ಬಿಡಿ ಲೇಖನ ಅಥವಾ ಹೊಸದಾಗಿ ಬರೆದಿರುವ ಲೇಖನಗಳಿದ್ದರೆ, ಲೇಖಕರು ಕೆಳಕಂಡ ವಿಳಾಸಕ್ಕೆ ಕಳುಹಿಸಲು ವಿನಂತಿ.
ಲೇಖನದ ಜೊತೆಗ ಪೋಟೋ ಹಾಗೂ ಅದ್ಭುತ ಬರಹಗಳ ಈ ಪುಸ್ತಕ ಕನಿಷ್ಠ 400 ಪುಟಗಳಾಗುವ ನಿರೀಕ್ಷೆಯಲ್ಲಿದ್ದು, ಪ್ರವಾಸೋದ್ಯಮ ದೃಷ್ಟಿಯಿಂದ ಉಪಯುಕ್ತವಾಗಲಿದೆ. ಪುಸ್ತಕದಲ್ಲಿ ದೇಗುಲ ಕುರಿತು ಸಮಗ್ರವಾದ ಪರಿಚಯ ಹಾಗೂ ದೇವಸ್ಥಾನಕ್ಕೆ ಬೇಕಿರುವ ಮೂಲಭೂತ ಸೌಕರ್ಯ, ಬಸ್ ನಿಲ್ದಾಣ, ಪ್ರವಾಸಿ ಮಂದಿರ, ಪ್ರವಾಸಿಗರಿಗಾಗಿ ಹೋಟೆಲ್ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್‌ಗಳ ಬೇಡಿಕೆಗಳ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ಸಾಧ್ಯ.
ಗ್ರಂಥವು 21-11-2021ರಂದು ರಮೇಶ ಸುವೆರ್ಯವರ 65ನೇ ಜನ್ಮದಿನಾಚರಣೆಯಂದು, ಕೊಪ್ಪಳದ ಸಾಹಿತ್ಯ ಭವನದಲ್ಲಿ ಬಿಡುಗಡೆಯಾಗಲಿದೆ. ಲೇಖನಗಳನ್ನು ಕಳುಹಿಸಲು ಕೊನೆಯ ದಿನಾಂಕ 30-09-2021.
ಲೇಖನದ ಜೊತೆಗೆ ಲೇಖಕರ ಭಾವಚಿತ್ರ, ಸಂಪೂರ್ಣ ವಿಳಾಸ ಮತ್ತು ಮಾಹಿತಿಯೊಂದಿಗೆ ನಮ್ಮ ವಿಳಾಸಕ್ಕೆ ಕಳುಹಿಸಿ. (ಡಿಟಿಪಿ ಮಾಡಿ ಕಳುಹಿಸಿದರೆ ಒಳ್ಳೆಯದು) ಚಿಠಿಠಿಚಿಟisu@gmಚಿiಟ.ಛಿom . ನಮ್ಮ ವಿಳಾಸ : ರುದ್ರಪ್ಪ ಭಂಡಾರಿ, ಪ್ರಕಾಶಕರು, ಅಪ್ಪಳಿಸು ಪಿಂರ‍್ಸ್ ಅಂಡ್ ಪಬ್ಲಿರ‍್ಸ್, ಇಟಗಿ ರಸ್ತೆ, ಅಂಬೇಡ್ಕರ್ ನಗರ, ಕುಕನೂರು - 583232. ಮೊಬೈಲ್ : 9880542805 / 7815985505.


0 Comments