Ticker

6/recent/ticker-posts

Ad Code

Responsive Advertisement

ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಪ್ರಭಾರಿಗಳ ನೇಮಕ

ಬೆಂಗಳೂರು: ಬಿಜೆಪಿ ಎಸ್‍ಸಿ ಮೋರ್ಚಾದ ರಾಜ್ಯ ಪ್ರಭಾರಿಗಳನ್ನಾಗಿ ಕರ್ನಾಟಕದ ಮೂವರನ್ನು ನೇಮಕ ಮಾಡಲಾಗಿದೆ. ಸಂಸದ ಶ್ರೀ ಮುನಿಕೃಷ್ಣ ಅವರನ್ನು ಕೇರಳ ರಾಜ್ಯಕ್ಕೆ, ಶ್ರೀ ವೆಂಕಟೇಶ್ ಮೌರ್ಯ ಅವರನ್ನು ತಮಿಳುನಾಡು ರಾಜ್ಯಕ್ಕೆ ಮತ್ತು ಶ್ರೀ ಜಯಕುಮಾರ್ ಕಾಂಗೆ ಅವರನ್ನು ತೆಲಂಗಾಣ ರಾಜ್ಯಕ್ಕೆ ಪ್ರಭಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.



ಹೊಸದಾಗಿ ನೇಮಕಗೊಂಡವರು ಈ ಜವಾಬ್ದಾರಿ ನೀಡಿರುವ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ,  ಪಿ.ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಎಸ್ಸಿ ಮೋರ್ಚಾದ ರಾಷ್ಟ್ರೀಯ ಪ್ರಭಾರಿಗಳಾದ ಶ್ರೀ ಸಿ.ಟಿ. ರವಿ, ಎಸ್ಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಲಾಲ್ ಸಿಂಗ್ ಆರ್ಯ ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ಎಸ್‍ಸಿ ಮೋರ್ಚಾ ಸಂಘಟನೆಯನ್ನು ವಿವಿಧ ರಾಜ್ಯಗಳಲ್ಲಿ ಬಲಪಡಿಸುವ ದೃಷ್ಟಿಯಿಂದ ಇವರು ಕಾರ್ಯ ನಿರ್ವಹಿಸಲಿದ್ದಾರೆ. 

Post a Comment

0 Comments

Ad Code

Responsive Advertisement