ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ನೂತನ ಕಚೇರಿ ಇಂದು ಉದ್ಘಾಟನೆಗೊಂಡಿತು. ಪಕ್ಷದ ಹಿರಿಯ ಮುಖಂಡ, ಮಾಜೀ ಶಾಸಕ ಎಚ್ ಡಿ ಬಸವರಾಜ್ ಅವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಚಾಮರಾಜಪೇಟೆ ವಾರ್ಡಿನ ಕಚೇರಿಯು ಚೆನ್ನಬಸವ ಸ್ವಾಮೀಜಿಯವರಿಂದ ಉದ್ಧಾಟನೆಗೊಂಡಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಹಸಂಚಾಲಕ ವಿಜಯ್ ಶರ್ಮಾ, ಬೆಂಗಳೂರು ನಗರ ಉಪಾಧ್ಯಕ್ಷ ಸುರೇಶ್ ರಾಥೋಡ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ, ಚಾಮರಾಜಪೇಟೆ ವಿಧಾನ ಸಭಾ ಅಧ್ಯಕ್ಷೆ ಶಿಲ್ಪ ಬಿ, ಉಸ್ತುವಾರಿ ಜಗದೀಶ್, ರಾಜ್ಯ ರಾಜಕೀಯ ಚಟುವಟಿಕೆಗಳ ಅಧ್ಯಕ್ಷ ಲಕ್ಷ್ಮೀಕಾಂತ್ ರಾವ್ ಮತ್ತು ಫಣಿರಾಜ್ ಉಪಸ್ಥಿತರಿದ್ದರು. ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.


0 Comments