ಬಳ್ಳಾರಿ ಆ 02. ಸಂಡೂರು ವಿಧಾನಸಭ ಕ್ಷೇತ್ರದ ಶಾಸಕರಾದ ಇ.ತುಕರಾಂ ರವರು ಹಾಗೂ ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಜಿ.ಎಸ್.ಮೊಹಮ್ಮದ್ ರಫಿಕ್, ರವರ ನೇತೃತ್ವದಲ್ಲಿ ದಿನಾಂಕ 02-08-2021ರ ಸೋಮವಾರದಂದು ಬಳ್ಳಾರಿ-ಹೊಸಪೇಟ್ ಹೆದ್ದರಿಯಲ್ಲಿರುವ ಕುಡುತಿನಿಯ ಮುಸ್ಲೀಂ ಸ್ಮಾಶನಕ್ಕೆ 20 ರೂ ಲಕ್ಷ ವೆಚ್ಚದಲ್ಲಿ ಗೋಡೆ(ಕಾಂಪೊAಡ್)ನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಯಿತು.
ಮತ್ತು ಕುಡಿತಿನಿಯ ಪ್ರಸಿದ್ದ ಕೋಳಿ ಮಾರುಕಟ್ಟೆ (ಕೋಳಿ ಬಜಾರ್) ಗೆ 67 ಲಕ್ಷ ರೂ ವೆಚ್ಚದ ಸೀಮೆಂಟ್ ರಸ್ತೆಯನ್ನು ಹಾಕುವ ಕಾಮಗಾರಿಗೆ ಚಾಲನೆ ನೀಡಲಾಯಿತು. ಮಾನ್ಯ ಶಾಸಕರು ಮತ್ತು ಅಧ್ಯಕ್ಷರು ಸ್ವತಃ ತಮ್ಮ ಹಸ್ತಗಳಿಂದ ಕಾಮಗರಿಗೆಗೆ ಚಾಲನೆೆಯನ್ನು ನೀಡಿದರು.
ಈ ಸಂದAರ್ಬದಲ್ಲಿ ಮಾಜಿ ಎಮ್.ಎಲ್.ಸಿ, ಕೆ.ಎಸ್.ಎಲ್. ಸ್ವಾಮಿ, ಕುಡುತಿನಿ ಪಟ್ಟಣದ ಪಂಚಾಯಿತಿ ಅಧ್ಯಕ್ಷರಾದ ರಾಜಶೇಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ, ಎ.ಕಮರಪ್ಪ, ಸದಸ್ಯರಾದ ರಾಮಲಿಂಗಪ್ಪ, ಸ್ಥಳಿಯ ಮುಖಂಡರಾದ ಚಂದ್ರಪ್ಪ, ದೊಡ್ಡ ಬಸಪ್ಪ, ಯುವ ಮುಖಂಡರಾದ ಉದಯ್, ಶಿವು, ಶಂಕರ್, ಶುಭನ್, ಪೆನ್ನಯ್ಯ, ಮತ್ತು ಕಾಂಗ್ರೆಸ್ ನ ಎಲ್ಲಾ ಸ್ಥಳೀಯ ಹಿರಿಯ ಮುಖಂಡರು, ಅನೇಕ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರವನ್ನು ಯಶಸ್ವಿಗೊಳಿಸಿದರೆಂದು ಜಿ.ಎಸ್.ಮಹಮ್ಮದ್ ರಫೀಕ್ ಅಧ್ಯಕ್ಷರು ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿ.ಬಳ್ಳಾರಿ ತಿಳಿಸಿದ್ದಾರೆ.

0 Comments