Ticker

6/recent/ticker-posts

Ad Code

Responsive Advertisement

BIG BREAKING NEWS : ಸಿಸಿಬಿ ಕಾರ್ಯಾಚರಣೆ : 52 ಲಕ್ಷ ಮೌಲ್ಯದ, ವಿವಿಧ ಮಾಧರಿಯ ಚಿನ್ನದ ಸರಗಳ ಪತ್ತೆ


ಬೆಂಗಳೂರು ನಗರದಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕ್ಷಣಾರ್ಧದಲ್ಲಿ ಸರ ಕಳ್ಳತನ ಮಾಡಿ ಹೊರ ರಾಜ್ಯ / ಜಿಲ್ಲೆಗಳಲ್ಲಿ ವಿಲೇವಾರಿ ಮಾಡುತ್ತಿದ್ದ ತಂಡದ ಬಂಧನ 52 ಲಕ್ಷ ಮೌಲ್ಯದ 1 ಕೆ.ಜಿ 90 ಗ್ರಾಂ ತೂಕದ 18 ವಿವಿಧ ಮಾಧರಿಯ ಚಿನ್ನದ ಸರಗಳ ಪತ್ತೆ. 


ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ಸರಹದ್ದಿನಲ್ಲಿ ಒಂಟಿ ಮಹಿಳೆಯರನ್ನು ಹಾಗೂ ವೃದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕ್ಷಣಾರ್ಧದಲ್ಲಿ ಸರಕಳ್ಳತನ ಮಾಡಿ ಹೊರ ಜಿಲ್ಲೆ / ರಾಜ್ಯಗಳಲ್ಲಿ ವಿಲೇವಾರಿ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಸಿಸಿಬಿ ಅಧಿಕಾರಿಗಳು ಪತ್ತೆ ಮಾಡಿ 52 ಲಕ್ಷ ಮೌಲ್ಯದ 1 ಕೆ ಜಿ 90 ಗ್ರಾಂ ತೂಕದ 18 ಚಿನ್ನದ ಸರಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ. 

ಆರೋಪಿಗಳು 2016 ನೇ ಇಸವಿಯಿಂದ ಬೆಂಗಳೂರಿನ ಹಲವಾರು ಸ್ಥಳಗಳಲ್ಲಿ ಸರಗಳ್ಳತನ ಮಾಡಿದ್ದು  ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದರು. 

ಆರೋಪಿಯನ್ನು ದಸ್ತಗಿರಿಮಾಡಿ ಆರೋಪಿಗಳ ಮಾಹಿತಿ ಮೇರೆಗೆ ತಮಕೂರು ಮತ್ತು ಬೆಳಗಾಂ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಮಾರಾಟ ಮಾಡಿದ್ದ ಚಿನ್ನದ ಒಡವೆಗಳನ್ನು ಅಮಾನತ್ತು ಪಡಿಸಿರುತ್ತೆ.

ಈ  ಆರೋಪಿಗಳಿಂದ ಕಳವು ಮಾಲು ಸ್ವೀಕರಿಸಿದ್ದ ಹಿರಿಯೂರಿನ ಒಬ್ಬ ವ್ಯಕ್ತಿ ಮತ್ತು ಕಳವು ಮಾಲು ಸ್ವೀಕರಿಸುತ್ತಿದ್ದ ವ್ಯಕ್ತಿಯನ್ನು ಸಹಾ ದಸ್ತಗಿರಿ ಮಾಡಿ ನಂತರ ಈತನಿಂದ ಚಿನ್ನದ ಒಡವೆಳನ್ನು ವಶಪಡಿಸಿಕೊಳ್ಳಲಾಯಿತು.  

ಸಿಸಿಬಿ ಡಿಸಿಪಿ ಶ್ರೀ ರವಿಕುಮಾರ್ ಹಾಗೂ ಸಿ.ಸಿ.ಬಿ ಮಹಿಳಾ ಸಂರಕ್ಷಾಣಾ ದಳದ ಎ.ಸಿ.ಪಿ ಶ್ರೀ. ನಾಗರಾಜ್ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಹಜರೇಶ್ ಕಿಲ್ಲೇದಾರ್, ಮತ್ತು ಸಿಬ್ಬಂದಿಯವರಾದ ಪೊಲೀಸ್ ಹೆಡ್ ಕಾನ್ಸ್ಟೇಬಲ್‌ಗಳಾದ ಶ್ರೀ.ನವಾಜ್ ಖಾನ್, ಮುಫೀಜ್ ಖಾನ್, ರಾಘವೇಂದ್ರ, ನಾಗರಾಜ್, ಶ್ರೀನಿವಾಸ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಗಳಾದ ಶ್ರೀ.ರವಿಕುಮಾರ್, ಶ್ರೀ ಪರಶುರಾಮ್, ಸಮೀರ್, ಪ್ರಕಾಶ್ ರವರುಗಳ ತಂಡ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ದಸ್ತಗಿರಿ ಮಾಡಿ ಬೆಂಗಳೂರು ನಗರದಲ್ಲಿ ವರದಿಯಾಗಿದ್ದ ಸುಮಾರು 18 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, 1 ಕೆ.ಜಿ 90 ಗ್ರಾಂ ತೂಕದ, ಅಂದಾಜು ಬೆಲೆ 52,00,000/- ಲಕ್ಷ ರೂ ಮೌಲ್ಯದ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿರುತ್ತೆ. 

ಆರೋಪಿಗಳ ಬಂದನದಿ0ದ ಕೆ.ಆರ್ ಪುರಂ ಠಾಣೆ-2, ಮಹಾಲಕ್ಷಿ  ಲೇಔಟ್ ಠಾಣೆ-2, ಯಲಹಂಕ ನ್ಯೂ ಟೌನ್ ಠಾಣೆ-1, ಬನಶಂಕರಿ ಠಾಣೆ-1, ಮೈಕೋ ಲೇಔಟ್ ಠಾಣೆ-1, ಹೆಬ್ಬಾಳ ಪೊಲೀಸ್ ಠಾಣೆ-1, ಬೈಯಪ್ಪನಹಳ್ಳಿ ಠಾಣೆ-1 ಬ್ಯಾಟರಾಯನಪುರ ಠಾಣೆ-1, ಸದಾಶಿವ ನಗರ ಠಾಣೆ-1, ಪೀಣ್ಯ ಠಾಣೆ-1, ಸುಬ್ರಮಣ್ಯಪುರ ಠಾಣೆ-3, ಯಶವಂತಪುರ ಠಾಣೆ-2, ವಿವೇಕ ನಗರ ಠಾಣೆ-1 ಪ್ರಕರಣಗಳು ಪತ್ತೆಯಾಗಿರುತ್ತೆ. 

Post a Comment

0 Comments

Ad Code

Responsive Advertisement