Ticker

6/recent/ticker-posts

Ad Code

Responsive Advertisement

ಉಪ ನೋಂದಣಿ ಕಚೇರಿ ಮೇಲೆ ಎಸಿಬಿ ದಾಳಿ,1.75.250 ನಗದು ವಶ

ಕರ್ನಾಟಕ ಗಡಿಬಾಗವಾದ ಕರ್ನೂಲ್ ಜಿಲ್ಲೆಯ ಆಲೂರು ಉಪ ನೋಂದಣಿ ಕಚೇರಿ ಮೇಲೆ ಎಸಿಬಿ ದಾಳಿ,1.75.250 ನಗದು ವಶ-ಶಿವನಾರಾಯಣಸ್ವಾಮಿ ಎ.ಸಿ.ಬಿ,ಡಿಎಸ್ಪಿ

ಬಳ್ಳಾರಿ ಆ 25. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಎಸಿಬಿ ಅಧಿಕಾರಿಗಳು ಇಂದು ಸಂಜೆ 4.15 ಕ್ಕೆ ಎಸಿಬಿ ಡಿಎಸ್‌ಪಿ ಮತ್ತು ಸಿಬ್ಬಂದಿಯೊAದಿಗೆ ಆಲೂರಿನ ಸಬ್ ರಿಜಿಸ್ಟಾರ್ ಕಛೇರಿಮೇಲೆ ದಾಳಿ ನಡೆಸಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಬ್ ರಿಜಿಸ್ಟ್ರಾರ್ ಶ್ರೀನಿವಾಸ ಮತ್ತು ಇಬ್ಬರು ಡಾಕ್ಯೂಮೆಂಟ್ ಬರಹಗಾರರಿದ್ದರು. ವಿವಿಧ ವ್ಯಕ್ತಿಗಳಿಂದ ಸ್ವೀಕರಿಸಿದ ದೂರುಗಳನ್ವಯ, ನೋಂದಣಿಯ ಸಮಯದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವೆAದು, ಕೈ ಬಿಸಿ ಮಾಡಿದರೇ ಮಾತ್ರ ಕೆಲಸ ಆಗುತ್ತೆ ,ಇಲ್ಲಂದ್ರೆ ಅವರ ಚಪ್ಪಲಿ ಸವಿದರೂ ಕೆಲಸವಾಗುವುದು ಕಷ್ಟವೆಂದು ನಮಗೆ ದೂರುಬಂದಿದ್ದಕಾರಣ ನಾವು ದಾಳಿ ಮಾಡಬೇಕಾಯ್ತು, ದಾಳಿ ಮಾಡಿದಾಗ 1.75.250 ದಾಖಲೆಗಳಿಲ್ಲದ ನಗದು ವಶಕ್ಕೆ ಪಡೆದಿದ್ದೀವಿ  ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. 

ಇನ್ನು ಮುಂದೆ ಯಾರಾದರೂ, ಯಾವ ಕಚೇರಿಯಲ್ಲಾದರೂ ಲಂಚಕ್ಕೆ ಬೇಡಿಕೆ ಇಟ್ಟರೇ  14400 ಗೆ ಕರೆ ಮಾಡಬೇಕೆಂದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜೆ.ಶಿವನಾರಾಯಣ ಸ್ವಾಮಿ ಎಸಿಬಿ ಡಿಎಸ್ಪಿ ಕರ್ನೂಲ್ ಇವರು ತಿಳಿಸಿದ್ದಾರೆ. ಇದನ್ನು ನಾವು ಸರ್ಕಾರಕ್ಕೆ ವರದಿ ಕಳುಹಿಸುತ್ತೇವೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡುತ್ತೇವೆ ಎಂದರು. 

ಇನ್ನೊಂದು ಪ್ರಮುಖ ಅಂಶವೆAದರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಯಾವುದೇ  ಬರಹಗಾರರು ಇರಬಾರದು ಎಂದು ಜೆ.ಶಿವನಾರಾಯಣ ಸ್ವಾಮಿ ಎಸಿಬಿ ಡಿಎಸ್ಪಿ ತಿಳಿಸಿದ್ದಾರೆ. ಈಸಂಧರ್ಭದಲ್ಲಿ ಎಸಿಬಿ ಅಧಿಕಾರಿಗಳ ಸಿಬ್ಬಂದಿ ಮತ್ತು ಆಲೂರು ಪೋಲೀಸ್‌ಠಾಣೇಯ ಪೋಲೀಸ್ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.


Post a Comment

0 Comments

Ad Code

Responsive Advertisement