ತುಮಕೂರು ಜಿಲ್ಲೆ ಕೊರಟಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ OXFAM ಇಂಡಿಯಾ ಸ್ಥಾಪಿಸಿರುವ ಆಮ್ಲಜನಕ ಘಟಕವನ್ನು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಕೆ.ಸುಧಾಕರ್ ನಾಳೆ ದಿನಾಂಕ 24-07-2021 ರಂದು ಉದ್ಟಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾಧಿಕಾರಿ ಪಾಟೀಲ್ ಯಲಗೌಡ ಶಿವನಗೌಡ ಅಮತ್ತು OXFAM ಇಂಡಿಯಾದ ನಿರ್ದೇಶಕರಾದ ಪಂಕಜ್ ಆನಂದ್ ಉಪಸ್ಥಿತರಿರಲಿದ್ದಾರೆ.
OXFAM ಇಂಡಿಯಾ ತನ್ನ “ಮಿಷನ್ ಸಂಜೀವಿನಿ” ಯೋಜನೆಯಡಿ ಕೋವಿಡ್-19 ಸಾಂಕ್ರಾಮಿಕವನ್ನು ತಡೆಯುವ ನಿಟ್ಟಿನಲ್ಲಿ ಸ್ಥಾಪಿಸಿರುವ 300 LPM ಘಟಕವು ಸುತ್ತಲಿನ 46 ಹಳ್ಳಿಗಳ ಜನರಿಗೆ ಅನುಕೂಲವಾಗಲಿದೆ.
ಕಳೆದ ಏಪ್ರಿಲ್ 2021 ರಿಂದ ಕರ್ನಾಟಕದಲ್ಲಿ ಕೋವಿಡ್ ಮತ್ತು ಲಾಕ್ ಡೌನ್ ನಿಂದ ನೊಂದ ಸುಮಾರು 300 ಕುಟುಂಬಗಳಿಗೆ ಆಹಾರ ಕಿಟ್ ಒದಗಿಸಿದ್ದೇವೆ. ಆರೋಗ್ಯ ಸಲಕರಣೆಗಳಾದ ಆಮ್ಲಜನಕ ಸಿಲಿಂಡರ್, BiPAP ಮೆಷಿನ್ ಗಳು ಮತ್ತು ಆಮ್ಲಜನಕ ಸಾಂದ್ರಕಗಳು, ಬೆಡ್ ಗಳು ಹಾಗೂ PPE ಕಿಟ್ ಗಳನ್ನು ಮೂರು ಸರ್ಕಾರಿ ಆಸ್ಪ್ರತ್ರೆಗಳು, ಒಂದು ಸೇವಾ ಆಸ್ಪತ್ರೆ ಹಾಗೂ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒದಗಿಸಿದ್ದೇವೆ.
ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ 9 ಆಸ್ಪತೆಗಗಳಿಗೆ ಮತ್ತು 40 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆರೋಗ್ಯ ಉಪಕರಣಗಳನ್ನು ನೀಡಲಿದ್ದೇವೆ. 850 ಕುಟುಂಬಗಳಿಗೆ ಆಹಾರ ಮತ್ತು ಶುಚಿತ್ವದ ಕಿಟ್ ಗಳನ್ನು ಒದಗಿಸಿರುವ ಜೊತೆಗೆ ನಮ್ಮ ಸಂಸ್ಥೆಯು ರಾಜ್ಯದಾಧ್ಯಂತ 7000 ಆಶಾ ಕಾರ್ಯಕರ್ತೆಯರ ಜೊತೆ ಕೆಲಸ ಮಾಡುತ್ತಾ ಅವರಿಗೆ ಆರೋಗ್ಯ ಕಿಟ್ ಗಳನ್ನು ಒದಗಿಸುತ್ತಿದೆ. ತನ್ಮೂಲಕ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಸೆಣಸಲು ಬೇಕಾದ ನಡವಳಿಕೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದೂ ಸೇರಿದಂತೆ ಜನರಲ್ಲಿ ಲಸಿಕೆ ಬಗ್ಗೆ ಇರುವ ತಿರಸ್ಕಾರವನ್ನು ಹೊಡೆದೋಡಿಸುವ ಪ್ರಯತ್ನವೂ ನಡೆದಿದೆ.
ಕೋವಿಡ್-19 ರ ಎರಡನೆಯ ಅಲೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಅನೇಕರು ಅಸುನೀಗಿದ್ದಾರೆ. ಹಾಗಾಗಿ OXFAM ಇಂಡಿಯಾ ತನ್ನ “ಮಿಷನ್ ಸಂಜೀವಿನಿ” ಯೋಜನೆಯಡಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಭದ್ರಗೊಳಿಸಲು ಕೆಲಸ ಮಾಡುತ್ತಿದೆ. ಇದು ಮುಂದೆ ಬರಬಹುದಾದ ಮೂರನೆಯ ಅಲೆಗೆ ತಯಾರಿ. ನಮ್ಮ ಸಂಸ್ಥೆ ಯೋಜಿಸಿರುವ ಏಳು ಆಮ್ಲಜನಕ ಘಟಕಗಳಲ್ಲಿ ತುಮಕೂರಿನ ಕೊರಟಗೆರೆ ಆಸ್ಪತ್ರೆಯಲ್ಲಿ ಸ್ಥಾಪಿಸಿರುವುದು ಮೊದಲನೆಯದಾಗಿದೆ.
ಮಾರ್ಚ್ 2020 ರಿಂದ ದೇಶದ 16 ರಾಜ್ಯಗಳಲ್ಲಿ OXFAM ಇಂಡಿಯಾ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಕೆಲಸ ಮಾಡುತ್ತಿದೆ. ನಮ್ಮ ಸಂಸ್ಥೆಯ “ಕೋವಿಡ್ ರೆಸ್ಪಾನ್ಸ್” ನ ಅಡಿಯಲ್ಲಿ 9481 ಕುಟುಂಬಗಳಿಗೆ 2.96 ಕೋಟಿ ರೂಗಳನ್ನು ನೇರವಾಗಿ ಜಮಾ ಮಾಡಿದ್ದೇವೆ.ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳನ್ನು ಈ ವರ್ಷ ಏಪ್ರಿಲ್ ನಿಂದ ಈಚೆಗೆ ಮಿಷನ್ ಸಂಜೀವಿನಿ ಅಡಿಯಲ್ಲಿ 4,58506 ಮಂದಿಗೆ ತಲುಪಿಸಿದ್ದೇವೆ. ಜೊತೆಗೆ ಜೀವ ಉಳಿಸುವ ಸಾಧನಗಳಾದ 400 ಆಮ್ಲಜನಕ ಸಿಲಿಂಡರ್ ಗಳು, 100 ಆಮ್ಲಜನಕ ಸಾಂಧ್ರಕಗಳು, 1700 ಡಿಜಿಟಲ್ ಥರ್ಮಾಮೀಟರ್ ಗಳು, 900 ಆಕ್ಸಿಮೀಟರ್ ಗಳು, 18,000 ಕೋವಿಡ್ ಟೆಸ್ಟಿಂಗ್ ಕಿಟ್ ಗಳು, 25,500 ಸಮುದಾಯ ಸುರಕ್ಷಾ ಕಿಟ್ ಗಳು ಮತ್ತು 15,000 PPE ಕಿಟ್ ಗಳನ್ನು ಕೋವಿಡ್ ಸೆಣಸಲು ಮುಂಚೂಣಿಯಲ್ಲಿರುವ ಫ್ರಂಟ್ ಲೈನ್ ವಾರಿಯರ್ಸ್ ಆದ ಆರೋಗ್ಯ ಕಾರ್ಯಕರ್ತರಿಗೆ ವಿತರಿಸಿದ್ದೇವೆ.
ಈ ಎರಡನೆಯ ಅಲೆಯಲ್ಲಿ ನಮ್ಮ ಸಂಸ್ಥೆಗೆ ಆರೋಗ್ಯ ಕಾಪಾಡುವುದೇ ಬಹಳ ಮುಖ್ಯವಾದ ಆಧ್ಯತೆಯಾಗಿದೆ. OXFAM INDIA CEO ಅಮಿತಾಬ್ ಬೆಹರ್ “ನಾವು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ, ಜಿಲ್ಲಾಡಳಿತಗಳಿಗೆ ಮತ್ತು ಕೋವಿಡ್ ಕೇರ್ ಸೆಂಟರ್ ಗಳಿಗೆ ಆರೋಗ್ಯ ಉಪಕರಗಳಾದ ಆಮ್ಲಜನಕ ಸಾಂದ್ರಕಗಳು, ರೋಗಿಗಳ ನಿಗಾ ಇಡುವ ವ್ಯವಸ್ಥೆ, ಆಕ್ಸಿಮೀಟರ್, ಆಕ್ಸಿಜ಼ನ್ ನಾಸಲ್ ಮಾಸ್ಕ್ ಗಳು, ಥರ್ಮಾಮೀಟರ್ ಹಾಗೂ PPE ಕಿಟ್ ಗಳನ್ನು ಆರೋಗ್ಯ ಸೇವಾ ಸೌಲಭ್ಯ ಒದಗಿಸುತ್ತಿರುವ ಫ್ರಂಟ್ ಲೈನ್ ಆರೋಗ್ಯ ಕಾರ್ಯಕರ್ತರಿಗೆ ತಲುಪಿಸುತ್ತಿದ್ದೇವೆ”. ಎಂದು ಹೇಳಿದರು.
0 Comments