ಕೋಲಾರ : ಕಳೆದ ಒಂಬತ್ತು ವರ್ಷದ ಹಿಂದೆ ಮುಜರಾಯಿ ಇಲಾಖೆಗೆ ಹೋದ ದುರಸ್ತಿ ಪ್ರಸ್ತಾವನೆಗೆ ಇಂದಿಗೂ ಸ್ಪಂದನೆ ಇಲ್ಲದೇ ನಿರ್ಲಕ್ಷ÷್ಯ ವಹಿಸಿರುವುದು ದುರದೃಷ್ಟವೇ ಸರಿ.
ಕೋಲಾರದ ನಗರ ಹೃದಯ ಭಾಗದಲ್ಲಿ ಇರುವಂತಹ, ಅದರಲ್ಲೂ ಸುಮಾರು 300 ವರ್ಷಗಳ ಇತಿಹಾಸವುಳ್ಳ ಶ್ರೀ ಕೋದಂಡರಾಮಸ್ವಾಮಿ ದೇವಾಲಯವು ಸೂಕ್ತ ಭದ್ರತೆ ಹಾಗೂ ಸಂರಕ್ಷಣೆ ಇಲ್ಲದೇ ದಿನೇ ದಿನೇ ಅವಸಾನದ ಅಂಚಿಗೆ ತಲುಪುತ್ತಲಿದೆ.
ದುರಂತವೆ0ದರೆˌ ಇದರ ದುರಸ್ತಿಗೆಂದು ಮುಜರಾಯಿ ಇಲಾಖೆಗೆ ಜಿಲ್ಲಾಧಿಕಾರಿಗಳ ಕಛೇರಿಯಿಂದ ಕಳೆದ ಒಂಭತ್ತು ವರ್ಷಗಳ ಹಿಂದೆಯೇ ಸುಮಾರು 4.40 ಲಕ್ಷ ರೂ.ಗಳ ಪ್ರಸ್ತಾವನೆಯನ್ನ ಕಳುಹಿಸಿದ್ದು ,ಇದಕ್ಕೆ ಮುಜರಾಯಿ ಇಲಾಖೆ ಸ್ಪಂದಿಸದೆ ಇದ್ದುದು ಸೋಜಿಗದ ಸಂಗತಿ.
ಇದೀಗ ದೇವಾಲಯ ಸುತ್ತ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡು ಅವಸಾನದ ಅಂಚಿಗೆ ತಲುಪುತ್ತಿದ್ದು ರಾತ್ರಿ ವೇಳೆ ಇದೊಂದು ಪುಂಡಪೋಕರಿಗಳ ಅಡ್ಡೆಯಾಗಿದೆ.
`ಸಿ’ ಪ್ರವರ್ಗಕ್ಕೆ ಸೇರಿದ ದೇವಾಲಯವಾಗಿರುವುದರಿಂದ ಸದ್ಯ ಇದರ ವಿದ್ಯುತ್ ಬಿಲ್ ನ್ನು ಸ್ದಳೀಯ ಭಕ್ತಾದಿಗಳೇ ಭರಿಸುತ್ತಲಿದ್ದು ಇದು ಸಂಪೂರ್ಣ ಕುಸಿಯುವ ಮುಂಚೆ ಸರ್ಕಾರದ ಅಧಿಕಾರಿಗಳಾಗಲೀ, ಮುಜರಾಯಿ ಸಚಿವರಾಗಲೀ, ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
-ಸಾಯಿನಾಥ ದರ್ಗ ಮತ್ತು ಮಹೇಶ್,
ಕೋಲಾರ,
9845402487



0 Comments