Ticker

6/recent/ticker-posts

Ad Code

Responsive Advertisement

'ನಾನು ರಾಜೀನಾಮೆ ನೀಡುವುದಿಲ್ಲ" - ಬಿಎಸ್‌ ಯಡಿಯೂರಪ್ಪ

ನವದೆಹಲಿ: 'ನಾನು ರಾಜೀನಾಮೆ ನೀಡಲಿದ್ದೇನೆ ಎಂಬ‌ ಸುದ್ದಿಯಲ್ಲಿ ಸತ್ಯಾಂಶ ಇಲ್ಲ. ರಾಜೀನಾಮೆ ನೀಡುವುದೂ ಇಲ್ಲ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.

'ನಾನು ಪ್ರಧಾನಿ ಜೊತೆ‌ ರಾಜ್ಯದ ಅಭಿವೃದ್ಧಿ ಹಾಗೂ ಮೇಕೆದಾಟು ಯೋಜನೆ ಬಗ್ಗೆ ಮಾತುಕತೆ‌ ನಡೆಸಿದ್ದೇನೆ.  ಪಕ್ಷದ ವರಿಷ್ಠರಾದ ಅಮಿತ್ ಶಾ, ನಡ್ಡಾ, ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದೇನೆ' ಎಂದು ಅವರು ಹೇಳಿದರು.

ಶನಿವಾರ ಬೆಳಿಗ್ಗೆ ಬಿಜೆಪಿ ರಾಷ್ಟ್ರೀಯ ‌ಅಧ್ಯಕ್ಷ‌ ಜೆ.ಪಿ.‌ನಡ್ಡಾ ಅವರ ಭೇಟಿಗೆ ತೆರಳಿದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 

'ಆಗಸ್ಟ್ ಮೊದಲ ವಾರ ಮತ್ತೆ ದೆಹಲಿಗೆ ಬಂದು ವರಿಷ್ಠರನ್ನು ಭೇಟಿ ಮಾಡುವೆ' ಎಂದು ಅವರು ತಿಳಿಸಿದರು.

Post a Comment

0 Comments

Ad Code

Responsive Advertisement