Ticker

6/recent/ticker-posts

Ad Code

Responsive Advertisement

ಇಪ್ಪತ್ತೈದು ಲಕ್ಷ ರೂ. ಬೆಲೆ ಬಾಳುವ ನಾಲ್ಕು ಕಾರುಗಳ ವಶ: ಬ್ಯಾಟರಾಯನಪುರ ಪೊಲೀಸರ ಸಾಧನೆ

ದಿನಾಂಕ: 28-04-2021 ರ 10-00 ಗಂಟೆಗೆ ಟೊಯೋಟಾ ಇಟಿಯೋಸ್ ಕಾರ್ ನಂ. ಕೆಎ-01-ಎಎಫ್-6328 ವಾಹನವನ್ನು ಸರ್ವೀಸ್ ಮಾಡಿಸಲು ಮೈಸೂರು ರಸ್ತೆ, ನಾಯಂಡಹಳ್ಳಿ ಜಂಕ್ಷನ್ ಬಳಿ ಇರುವ ಷೋರೂಮ್ ಬಳಿ ನಿಲ್ಲಿಸಿದ್ದಾಗ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. 


ಬ್ಯಾಟರಾಯನಪುರ ಠಾಣೆಯ ಇನ್ಸ್‍ಪೆಕ್ಟರ್ ಎಂ.ಎನ್. ನಾಗರಾಜು ಹಾಗೂ ಸಿಬ್ಬಂದಿ ಜೂ. 26ರಂದು ಸದರಿ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದ್ದು, ಆರೋಪಿ ಕಡೆಯಿಂದ ಬ್ಯಾಟರಾಯನಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳವು ಮಾಡಿದ್ದ ಒಟ್ಟು 25,00,000/- ರೂ. (ಇಪ್ಪತ್ತೈದು ಲಕ್ಷ ರೂಪಾಯಿಗಳು) ಬೆಲೆ ಬಾಳುವ ನಾಲ್ಕು ಕಾರುಗಳನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಬ್ಯಾಟರಾಯನಪುರ ಪೊಲೀಸರು ಯಶಸ್ವಿಯಾಗಿರುತ್ತಾರೆ.

Post a Comment

0 Comments

Ad Code

Responsive Advertisement