ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಪುರವರದ ಸರ್ಕಲ್ ನಲ್ಲಿ ಗೊಂದಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದವರಿಂದ ವಿಶ್ವ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಪುರವರದ ಎಲ್ಲಾ ಅಂಗಡಿ ಮಳಿಗೆಗಳಿಗೆ ಹಾಗೂ ಸಾರ್ವಜನಿಕರಿಗೆ ರೋಗದಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂದು ತಿಳಿಸಲಾಯಿತು.
ಈ ಸಮಯದಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ಮಹೇಶ್ವರಿ ಮಾತನಾಡಿ ಪರಿಸರ ಸ್ವಚ್ಛತೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಸ್ವಚ್ಛತೆ ಇಲ್ಲ ಅಂದರೆ ಸೊಳ್ಳೆಗಳು ಉತ್ಪತ್ತಿಯಾಗಿ ಮಾರಣಾಂತಿಕ ರೋಗಗಳು ಬರುತ್ತದೆ.
ಸಾರ್ವಜನಿಕರು ಸ್ವಚ್ಛತೆಗೆ ಗಮನ ಹರಿಸಿದರೆ ಮಾತ್ರ ರೋಗದಿಂದ ದೂರ ಇರಬಹುದು ಎಂದರು.
ಈ ಸಮಯದಲ್ಲಿ ಆಶಾ ಕಾರ್ಯಕರ್ತೆ ಯಶೋಧ ಗ್ರಾಮಸ್ಥರು ಮತ್ತಿತರಿದ್ದರು
to Read : ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗುವ ನಾವಿಕನೇ ವೈದ್ಯ click here
https://www.varthajala.live/2021/06/tumkur-dist.html
https://www.varthajala.live/2021/06/tumkur-dist.html


0 Comments