Ticker

6/recent/ticker-posts

Ad Code

Responsive Advertisement

ಬಳ್ಳಾರಿಯ ಕೋವಿಡ್ ಆಸ್ಪತ್ರೆಯಲ್ಲಿ ಸೆಲ್ ಆನ್ ವ್ಹೀಲ್ಸ್ ಅನುಷ್ಠಾನ

ಬಳ್ಳಾರಿ ಜುಲೈ 28. ರೋಗಿಗಳು ಮತ್ತು ಆರೋಗ್ಯ ಸೇವಾ ಪೂರೈಕೆದಾರರಿಗೆ ತೋರಣಗಲ್ಲಿನ ಸಾವಿರ ಹಾಸಿಗೆಗಳ ಆಕ್ಸಿಜನೇಟೆಡ್ ಕೊವಿಡ್ ಕೇರ್ ಜಿಲ್ಲಾ ಆಸ್ಪತ್ರೆಯಲ್ಲಿ ತಡೆರಹಿತವಾದ ಸಂಪರ್ಕ ಕೊಡಲು ಇಂಡಸ್‌ಟವರ್ ಲಿಮಿಟೆಡ್ ಸಂಸ್ಥೆಯು ವಿಐ ಸಹಯೋಗದಲ್ಲಿ 30 ಮೀಟರ್ಗಳ ವಿಶೇಷವಾದ ಉನ್ನತ ಸೆಲ್‌ಆನ್ ವೀಲ್ಸ್ ಸೇವೆಯನ್ನು ಅನುಷ್ಠಾನಗೊಳಿಸಿದೆ. ಆಸ್ಪತ್ರೆಯ ಉನ್ನತ ಪ್ರಮಾಣದ ಮೊಬೈಲ್ ಟ್ರಾಫಿಕ್ ನಿರ್ವಹಿಸಲಿದೆ ಎಂದರು. ಜೆಎಸ್‌ಡಬ್ಲ್ಯೂ ಸಂಸ್ಥೆಯು ಬಳ್ಳಾರಿ ಜಿಲ್ಲಾಡಳಿತ ಸಹಯೋಗದೊಂದಿಗೆ ಆಸ್ಪತ್ರೆಯನ್ನು ನಿರ್ಮಿಸಿದೆ.


ಇಂಡಸ್ ಈಗಾಗಲೇ 14 ಟೆಲಿಕಾಂ ಶಾಶ್ವತ ಟವರ್‌ಗಳನ್ನು  ಟೌನ್‌ಶಿಪ್‌ನಲ್ಲಿಯೇ ಸ್ಥಾಪಿಸಿದೆ. ಇಂಡಸ್ ಟವರ್‌ನ  ಕರ್ನಾಟಕ ಸಿಇಓ ಸಾಶಾದ್ರಿರಾಮಾನುಜಂ ಪ್ರಕಾರ ಚಲಿಸಬಲ್ಲ ಮೊಬೈಲ್ ತಾಣಕ್ಕಾಗಿ ತೋರಣಗಲ್ಲಿನ ಜೆಎಸ್ಡಬ್ಲ್ಯೂ ಕ್ಯಾಂಪಸ್ ಒಳಗಡೆ ಆಸ್ಪತ್ರೆ ಮತ್ತು ಆಮ್ಲಜನಕ ಘಟಕದ ಹತ್ತಿರ ತಾಣವನ್ನು ನಿರ್ಮಿಸಲಾಗಿದೆ. 

ಇದು ತುರ್ತು ಅಗತ್ಯವಾಗಿದ್ದು ಕೋವಿಡ್-19 ಚಿಕಿತ್ಸೆ ಪಡೆಯುತ್ತಿರುವ ಪಡೆಯುತ್ತಿರುವ ರೋಗಿಗಳ ಕುಟುಂಬ ಮತ್ತು ಬಂಧು-ಮಿತ್ರರೊAದಿಗೆ ಯಾವಾಗಲೂ ಸಂಪರ್ಕದಲ್ಲಿರಲು ನೆರವಾಗುತ್ತದೆ ಮುಂಚೂಣಿಯಲ್ಲಿ ಕೋವಿಡ 19 ರÀ ವಿರುದ್ಧ ಹೋರಾಟ ನಡೆಸುತ್ತಿರುವ ಆಸ್ಪತ್ರೆ ಸಿಬ್ಬಂದಿಗಳು ರೋಗಿಗಳಿಗೆ ಒದಗಿಸುವುದಲ್ಲದೆ ಆಡಳಿತದ ಕೆಲಸಕ್ಕೆ ನೀಡುವುದರ ಜೊತೆಗೆ ಅವರ ಕುಟುಂಬಗಳೊAದಿಗೆ ಸಂಪರ್ಕದಲ್ಲಿರಲು ನೆರವಾಗುತ್ತದೆ ಎಂದರು. ವೊಡಾಫೋನ್ ಐಡಿಯಾ ಲಿಮಿಟೆಡ್ ಕರ್ನಾಟಕ ಆಂಧ್ರಪ್ರದೇಶ ಮತ್ತು ತೆಲಂಗಾಣದ ಕ್ಲಸ್ಟರ್ ಹೆಡ್ ಅರವಿಂದ್ ನೇವಾತಿ ಪ್ರಕಾರ ಬಳಕೆದಾರರಿಗೆ ಉನ್ನತ ಗ್ರಾಹಕ ಅನುಭವ ನೀಡಲು ಅದರಲ್ಲಿಯೂ ಮುಖ್ಯವಾಗಿ ಸಾಂಕ್ರಮಿಕದ ಸಂದರ್ಭದಲ್ಲಿ ಉನ್ನತ ಸೇವೆ ನೀಡಲು ಬದ್ಧರಾಗಿದ್ದೇವೆ 

ನಾವು ನಮ್ಮ ಬಳಗದವರಿಗೆ ಅವರು ಮತ್ತು ಅವರ ಪ್ರೀತಿಪಾತ್ರರು ಚಿಕಿತ್ಸೆಗೆ ಒಳಪಡುತ್ತಿರುವಾಗ,ಕ್ವಾರಂಟೈನ್‌ನಲ್ಲಿರುವಾಗ ಮತ್ತು ಆರೋಗ್ಯ ಸೇವಾ ಮೂಲಸೌಕರ್ಯವನ್ನು ನಮ್ಮ ಸೇವೆಗಳ ಮೇಲೆ ಆಧಾರಪಟ್ಟಿರುವಾಗ ಅವರ ಕನೆಕ್ಟಿವಿಟಿ ಅಗತ್ಯಗಳನ್ನು ಅರ್ಥಮಾಡಿಕೊಂಡಿದ್ದೇವೆ. ಇಂಡಸ್‌ನೊAದಿಗೆ ನಮ್ಮ ಪ್ರಯತ್ನ ಆಸ್ಪತ್ರೆ ಸಿಬ್ಬಂದಿ ಮತ್ತು ಪೋಷಕರಿಗೆ ಈ ಸಂಕೀರ್ಣ ಸಮಯದಲ್ಲಿ ತಕ್ಕಷ್ಟು ಬೆಂಬಲ ನೀಡುತ್ತದೆ ಎಂಬ ಭರವಸೆ ಹೊಂದಿದ್ದೇವೆ ಎಂದರು .ಸೇವೆಯು ತಾತ್ಕಾಲಿಕ ಮೊಬೈಲ್ ಹೆಚ್ಚಳದ ಸಂದರ್ಭದಲ್ಲಿ ಆದ್ಯತೆಯ ಟೆಲಿಕಾಂ ಮೂಲಸೌಕರ್ಯ ವಾಗಿ ಕಾರ್ಯ ನಿರ್ವಹಿಸುತ್ತದೆ ಇದು ಪೋರ್ಟಬಲ್ ಮೊಬೈಲ್ ಸೆಲ್ಯುಲರ್ ಸೈಟ್ ಆಗಿದ್ದು ತಾತ್ಕಾಲಿಕ ನೆಟ್ವರ್ಕ್ ಮತ್ತು ವೈರ್ಲೆಸ್ ಹಾಗೂ ಸೆಲ್ಯುಲರ್ ಸಂಪರ್ಕವನ್ನು ತುಂಬಾ ಕಡಿಮೆ ಇರುವ ಮತ್ತು ಸಂಪರ್ಕವೇ ಇಲ್ಲದಿರುವ ಕಡೆ ಸೌಲಭ್ಯ ನೀಡುತ್ತದೆ.

ಸೇವೆಯನ್ನುಟ್ರೆಲರ್ ಮತ್ತು ವ್ಯಾನ್‌ಗಳ ಮುಖಾಂತರ ಪಡೆಯಬಹುದಾಗಿದ್ದು ಬಾಧಿತವಾದ ಪ್ರದೇಶದಲ್ಲಿ ಅಥವಾ ಪ್ರಮುಖ ಸಂದರ್ಭಗಳಲ್ಲಿ ಬಳಕೆದಾರರು ಹೆಚ್ಚಾದಾಗ ಪೂರ್ಣಪ್ರಮಾಣದ ಸೇವೆ ನೀಡುತ್ತದೆ ಇವುಗಳಿಗೆ ಕಡಿಮೆ ಪ್ರಮಾಣದ ವಾಣಿಜ್ಯ ವಿದ್ಯುಚ್ಛಕ್ತಿ ಮತ್ತು ಗ್ರೌಂಡಿAಗ್ ಅಗತ್ಯವಿದ್ದು ಕಡಿಮೆ ಪ್ರಮಾಣದ ಕಟ್ಟಡ ವ್ಯವಸ್ಥೆಯನ್ನು ಬಯಸುತ್ತದೆ ಎಂದರು.


Post a Comment

0 Comments

Ad Code

Responsive Advertisement