Ticker

6/recent/ticker-posts

Ad Code

Responsive Advertisement

ಛಲವಾದಿ ಶಾಸಕ ನೆಹರು ಓಲೇಕಾರ್ ಗೆ ಸಚಿವ ಸ್ಥಾನಕ್ಕೆ ಮನವಿ

ಬಳ್ಳಾರಿ ಜುಲೈ 28.(ಕಂಪ್ಲಿ): ನೂತನ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ಛಲವಾದಿ ( ಬಲಗೈ ) ಸಮುದಾಯಕ್ಕೆ ಸೇರಿದ ಹಾವೇರಿ ಶಾಸಕ ನೆಹರು ಚ ಓಲೆಕಾರ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷ ವಕೀಲ ಮೋಹನ್ ಕುಮಾರ್ ದಾನಪ್ಪ ಇಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ 35 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಛಲವಾದಿ ಸಮಾಜದವರು ಹಲವಾರು ವರ್ಷಗಳಿಂದ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿರುತ್ತಾರೆ , 

ಭಾರತೀಯ ಜನತಾ ಪಕ್ಷದಿಂದ 6 ಜನ ಛಲವಾದಿ ಸಮಾಜದವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.ಈ 6 ಜನರಲ್ಲಿ ನೆಹರು ಚ ಓಲೇಕಾರರು 3 ಭಾರಿ ಶಾಸಕರಾಗಿ ಮತ್ತು 3 ಬಾರಿ ಕರ್ನಾಟಕ ರಾಜ್ಯ ಎಸ್ ಸಿ , ಎಸ್ ಟಿ ಆಯೋಗದ ಅಧ್ಯಕ್ಷರಾಗಿ ಹಾಗೂ ರಾಜ್ಯ ಮಟ್ಟದ ಇತರೆ ಪ್ರಾಧಿಕಾರಗಳ ಅಧ್ಯಕ್ಷರು / ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ನೆಹರು ಚ ಓಲೇಕಾರರು ಹಿರಿಯ ಅನುಭವವುಳ್ಳ ರಾಜಕಾರಣಿಯಾಗಿದ್ದಾರೆ.

ಭಾರತೀಯ ಜನತಾ ಪಕ್ಷದ ನಿಷ್ಠಾವಂತರಾಗಿದ್ದಾರೆ ಪಕ್ಷದ ನಿಷ್ಟತೆಯನ್ನು ಮತ್ತು ಅನುಭವವನ್ನು ಪರಿಗಣಿಸಿ ಛಲವಾದಿ ಸಮಾಜದ ಪ್ರಗತಿಗಾಗಿ ಈ ಸಚಿವ ಸಂಪುಟದಲ್ಲಿ ಹಾವೇರಿ ಶಾಸಕ ಶ್ರೀ ನೆಹರು ಚ ಓಲೇಕಾರ ರವರಿಗೆ ಸಚಿವ ಸ್ಥಾನವನ್ನು ನೀಡುವಂತೆ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ, ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರಿಗೆ ಪತ್ರಿಕಾ ಪ್ರಕಟಣೆ ಮುಖಾಂತರ ಓತ್ತಾಯಿಸಿದ್ದಾರೆ.


Post a Comment

0 Comments

Ad Code

Responsive Advertisement