ಬಳ್ಳಾರಿ,ಜು.01: ಕೇಂದ್ರ ಪುರಸ್ಕತ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆಯಡಿ ಈಗಾಗಲೇ 10 ಸಾವಿರ ರೂ. ಸಾಲ ಸೌಲಭ್ಯ ಪಡೆದಂತಹ ಬೀದಿ ಬದಿ ವ್ಯಾಪಾರಸ್ಥರಿಗೆ 2ನೇ ಅವಧಿ ಬ್ಯಾಂಕಿನಿ0ದ 20 ಸಾವಿರ ರೂ. ಸಾಲ ಸೌಲಭ್ಯಕ್ಕಾಗಿ ನಗರದ ಬೀದಿ ಬದಿ ವ್ಯಾಪಾರಸ್ಥರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಯೋಜನೆಯಡಿ 2ನೇ ಅವಧಿ ಈಗಾಗಲೇ ಬ್ಯಾಂಕಿನಿ0ದ 10 ಸಾವಿರ ರೂ. ಸಾಲ ಸೌಲಭ್ಯವನ್ನು ಮಾ.31 ರೊಳಗೆ ಪೂರ್ಣ ಪ್ರಮಾಣದಲ್ಲಿ ಮರುಪಾವತಿಮಾಡಿ ಸಂಬ0ಧಿಸಿದ ಬ್ಯಾಂಕ್ ನಿಂದ ಸಾಲ ಮರುಪಾವತಿ ಮಾಡಿದ ಪ್ರಮಾಣ ಪತ್ರ ಪಡೆದು ಪಿಎಮ್ - ಸ್ವಾನಿಧಿ ಪೋರ್ಟಲ್ ಮೂಲಕ 20ಸಾವಿರ ರೂ. ಸಾಲ ಪಡೆಯಲು ಆನ್‌ಲೈನ್ ಮೂಲಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 08392-273479/278168ಗೆ ಅಥವಾ ಮಹಾನಗರ ಪಾಲಿಕೆ, ವಲಯ ಕಚೇರಿ-2(ಹಳೆಯ ಕಚೇರಿ)ರ ಡೇ-ನಲ್ಮ್ ಶಾಖೆಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

0 Comments