ಬಳ್ಳಾರಿ ಜುಲೈ 01.ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರಾದ ಶ್ರಿಯುತ ಮಹದೇವಪ್ಪ ನವರು ದಿನಾಂಕ 30.06.2021 ರಂದು ವಾಯೋನಿವೃತ್ತಿ ಹೊಂದಿದ್ದು. ಮೂಲತಃ ಬೀದರ ಜಿಲ್ಲೆಯವರು.
ಶ್ರಿಯುತರು ಕಳೆದ ಎರಡು ವರ್ಷಗಳಿಂದ ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರಾದ ಅವರ ಅವಧಿಯಲ್ಲಿ ಗೋಲ್ಡ್ ಬಾಂಡ್, ವಿಶೇಷ ಅಂಚೆ ಲಕೋಟೆ ಬಿಡುಗಡೆ, ಜನ ಸುರಕ್ಷಾ ಯೋಜನೆ ಇತ್ಯಾದಿ ಹಲವಾರು ಯೋಜನೆಗಳಲ್ಲಿ ಬಳ್ಳಾರಿ ವಿಭಾಗ ವನ್ನ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಸಾಧನೆ ಮಾಡುವಲ್ಲಿ ಶ್ರಮವಹಿಸಿದ ಇವರ ಕೊಡುಗೆಯನ್ನು ನಿವೃತ್ತಿ ಸಂದರ್ಭದಲ್ಲಿ ಅವರ ಸಹುದ್ಯೋಗಿಗಳು ಕೊಂಡಾಡಿದರು.
ಕೊವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಕೂವಿಡ್ ನಿಯಮಾವಳಿಗಳನ್ನು ಪಾಲಿಸಿ,ಆತ್ಮೀಯವಾಗಿ ಸನ್ಮಾನಿಸಿ,ಗೌರವಿಸಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಿದರು. ವಿಭಾಗದ ಅಂಚೆ ಅಧಿಕಾರಿಗಳು ಮತ್ತು ವಿಭಾಗೀಯ ಕಛೇರಿ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.
0 Comments