ಕೋವಿಡ್ ನೆಪವೊಡ್ಡಿ ಮೇಯರ್,ಉಪಮೇಯರ್ ಚುನಾವಣೆಯನ್ನು ಬಿಜೆಪಿ ಸರಕಾರ ಮುಂದೂಡಿದೆ0ದು ಆರೋಪಿಸಿದ ಪಾಲಿಕೆ ಸದಸ್ಯರು ಮುಲ್ಲಂಗಿ ನಂದೀಶ್,ಆಸೀಫ್
ಬಳ್ಳಾರಿ ಜುಲೈ 01: ಭರ್ಜರಿ ಕೊರೋನ ಸಮಯದಲ್ಲಿ ಬಿಜೆಪಿ ಸರಕಾರ ಚುನಾವಣೆ ನಡೆಸಿ,ಕೊರೋನ ಪ್ರಕರಣಗಳು ಕಡಿಮೆಯಾಗಿ,ಲಾಕ್‌ಡೌನ್ ಸಡಲಿಸಿದಮೇಲೇ ಕೋವಿಡ್ ನೆಪವೊಡ್ಡಿ ಮೇಯರ್,ಉಪಮೇಯರ್ ಸ್ಥಾನದ ಚುನಾವಣೆಯನ್ನು ಬಿಜೆಪಿ ಸರಕಾರ 6 ತಿಂಗಳ ಮುಂದೂಡಿದೆAದು ಬಳ್ಳಾರಿ ಮಹಾನಗರ ಪಾಲಿಕೆಯ 18 ನೇ ವಾರ್ಡಿನ ಸದಸ್ಯರು ಮುಲ್ಲಂಗಿ ನಂದೀಶ್ ಮತ್ತು 30 ನೇ ವಾರ್ಡಿನ ಸದಸ್ಯ ಎನ್.ಎಂ.ಡಿ. ಆಸೀಫ್ ಭಾಷಾ ಆರೋಪಿಸಿದ್ದಾರೆ. ಈಗಾಗಲೇ ಮಹಾನಗರ ಪಾಲಿಕೆ ಚುನಾವಣೆ ಮುಕ್ತಾಯಗೊಂಡು ಎರಡು ತಿಂಗಳು ಕಳೆದರೂ ಕೂಡಾ ಮೇಯರ್, ಉಪಮೇಯರ್ ಆಯ್ಕೆಗೆ ಮಾತ್ರ ಇನ್ನೂ ಮುಹೂರ್ತವನ್ನು ಫಿಕ್ಸ್ ಮಾಡಿಲ್ಲ.ಇದರಿಂದ ಬಳ್ಳಾರಿ ಮಹಾನಗರದ ನಾನಾ ಅಭಿವೃದ್ಧಿ ಕಾರ್ಯಗಳು ಕುಂಠಿತ ಆಗಿವೆ ಎಂಬ ಆರೋಪಗಳು ಕೂಡಾ ಜನರಿಂದ ಕೇಳಿಬರುತ್ತಿವೆ ಎಂದು ಅವರು ತಿಳಿಸಿದರು.ಏಪ್ರಿಲ್ 30ರಂದು ಮಹಾನಗರ ಪಾಲಿಕೆ ಚುನಾವಣೆ ಮುಕ್ತಾಯವಾಗಿ 60 ದಿನಗಳು ಕಳೆದು ಹೋಗಿವೆ. ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆಯನ್ನು ಕೋವಿಡ್ ಕಾರಣವೊಡ್ಡಿ ಮುಂದಿನ ಆರು ತಿಂಗಳ ಅವಧಿಗೆ ರಾಜ್ಯ ಸರ್ಕಾರ ಮುಂದೂಡಿದೆ. ಮಹಾನಗರ ಪಾಲಿಕೆ ಚುನಾವಣಾ ಪ್ರಕ್ರಿಯೆ ನಡೆದಾಗ ಇಲ್ಲದ ಕೋವಿಡ್ ಕಾರಣ ಈಗ್ಯಾಕೆ? ಎಂದು ಮಹಾನಗರ ಪಾಲಿಕೆ ಸದಸ್ಯರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇದಲ್ಲದೇ, ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆ ಮುಂದೂಡಿರುವ ಹಿಂದೆಯೇ ರಾಜ್ಯ ಸರ್ಕಾರದ ಹುನ್ನಾರ ಎದ್ದು ಕಾಣುತ್ತಿದೆ ಎಂದು ಪಾಲಿಕೆ ಸದಸ್ಯರು ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ. ಚುನಾಯಿತರಾಗಿ ಎರಡು ತಿಂಗಳಾಗಿವೆ. ಮೇಯರ್, ಉಪ ಮೇಯರ್ ಆಯ್ಕೆಯ ಪ್ರಕ್ರಿಯೆ ನಡೆಯದ ಕಾರಣ, ನಮ್ಮ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಇದು ಬಿಜೆಪಿಗರಿಗೆ ಬೇಕಾಗಿದೆ. ಯಾಕಂದ್ರೆ, ಕಾಂಗ್ರೆಸ್‌ನ ಹಾಲಿ ಸದಸ್ಯರು ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿದ್ರೆ, ಅಧಿಕಾರ ವರ್ಗವಾಗಲಿ ಅಥವಾ ಪಾಲಿಕೆ ಸದಸ್ಯರಾಗಲಿ ನಮ್ಮ ಹಿಡಿತಕ್ಕೆ ಸಿಗೋದಿಲ್ಲ. ಸ್ಥಳೀಯ ಬಿಜೆಪಿ ಶಾಸಕರನ್ನೂ ಕಡೆಗಣಿಸುವ ಸಾಧ್ಯತೆ ಇರುತ್ತೆ. ಹೀಗಾಗಿ ಮುಂದಿನ ಆರು ತಿಂಗಳ ಅವಧಿಗೆ ಮುಂದೂಡಿದ್ರೆ ನಮಗೆ ಒಳಿತಾಗಲಿದೆಂಬ ಹೊಟ್ಟೆಕಿಚ್ಚನ್ನು ಬಿಜೆಪಿ ಸರಕಾರ ತೋರಿಸುತ್ತಿದೆ ಎಂದು, ಈಗ ನಮ್ಮ ಸದಸ್ಯರೆಲ್ಲರೂ ಕೆಲಸ ಕಾರ್ಯಗಳನ್ನು ಮಾಡಲು ಉತ್ಸಾಹದಿಂದ ಇದ್ದಾರೆ ಈಗ ನಾವು ಕಾಲುಗಳಿದ್ದು ಕುಂಟರಾಗಿದ್ದೇವೆ ಎಂದು ಮಹಾನಗರ ಪಾಲಿಕೆ ಸದಸ್ಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆಯ ಕಾಂಗ್ರೆಸ್‌ನ ಸದಸ್ಯರೆಲ್ಲರೂ ಸೇರಿ ನಮ್ಮ ಹಿರಿಯನಾಯಕರೊಂದಿಗೆ ಚರ್ಚಿಸಿ,ಮುಂದೇನು ಮಾಡಬೇಕೆಂದು ಸಮಾಲೋಚನೆ ನಡೆಸುತ್ತೇವೆ, ಸರ್ಕಾರದಮೇಲೇ ಕೂಡಲೇ ಮೇಯರ್,ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಬೇಕೆಂದು ಒತ್ತಡ ಹೇರಲಿದ್ದೇವೆ ಎಂದು ತಿಳಿಸಿದರು.

0 Comments