ಕೋಲಾರ. ನಗರದ ವಲಯದಲ್ಲಿ ಎಪಿಎಂಸಿ ಮಾರುಕಟ್ಟೆಯ ಲಕ್ಷ್ಮೀ ಬಾರ್ ಸಮೀಪ ಇಂದು ಮಧ್ಯಾಹ್ನ ದ್ವಿಚಕ್ರ ವಾಹನ ಹಾಗೂ ಟಮೋಟೋ ಲಾರಿಯ ನಡುವೆ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರಲ್ಲಿ ಒಬ್ಬ ಸ್ದಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬನಿಗೆ ತೀವ್ರ ಸ್ವರೂಪದ ಗಾಯಗಳಾಗಿದೆ.
ಅನ್ಸಾರಿ ನಗರದ ನಿವಾಸಿ ಮಸ್ತಾನ್ ವಲಿ (60) ಸ್ಧಳದಲ್ಲೇ ಸಾವನ್ನಪ್ಪಿದರೆ ಆತನ ಜೊತೆಗಿದ್ದ ಮತ್ತೊಬ್ಬ ಕೆ ಜಿ ಎಫ್ ನ ಪಾತರಹಳ್ಳಿ ನಿವಾಸಿ ಮುಜೀಬ್ ಗೆ ತೀವ್ರ ಗಾಯಗೊಂಡು ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ
ಇತ್ತೀಚಿನ ದಿನಗಳಲ್ಲಿ ಎ ಪಿ ಎಂ ಸಿ ಸುತ್ತ ಮುತ್ತೆಲ್ಲಾ ಕಿರಿದಾದ ರಸ್ತೆಗಳಲ್ಲೆಲ್ಲಾ ಟಮೋಟೋ ಮಂಡಿಗಳು ತಲೆ ಎತ್ತಿದ್ದು ಒಂದು ರಸ್ತೆಗಳಳೆಲ್ಲಾ ನಡೆಯಲೂ ಆಗದಂತೆ ಆಗಿದ್ದು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಈ ರಸ್ತೆಗಳೆಲ್ಲಾ ಟ್ರಾಫಿಕ್ ಜಾಂ ಆಗುತ್ತಲಿದ್ದು ಸಂಚಾರಿ ಪೋಲೀಸರು ಇವರನ್ನು ಕ್ಯಾರೆ ಎನ್ನದೇ ಇರುವುದರಿಂದ ಇಂತಹ ಅಪಘಾತಗಳು ಪದೆ ಪದೇ ನಡೆಯುತ್ತಿದೆ ಎಂದು ಸ್ಥಳೀಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

0 Comments