ಭಾರತದ 75ನೆಯ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಪ್ರಕಟಣೆಗಳಿಗೆ 50% ರಿಯಾಯಿತಿ ನೀಡಲಿದೆ. ಈ ರಿಯಾಯಿತಿಯನ್ನು 2021ರ ಆಗಸ್ಟ್ 1 ರಿಂದ 31ರವರೆಗೆ ರಜಾ ದಿನಗಳೂ ಸೇರಿದಂತೆ ಬೆಳಗ್ಗೆ 11.00ರಿಂದ 5.00ರವರೆಗೆ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದಲ್ಲಿರುವ ಪುಸ್ತಕ ಮಾರಾಟ ವಿಭಾಗದಲ್ಲಿ ನೀಡಲಾಗುವುದು.
ಈ ವಿಶೇಷ ರಿಯಾಯಿತಿಯ ಪ್ರಯೋಜನವನ್ನು ಪುಸ್ತಕ ಮಾರಾಟಗಾರರು, ಸಾಹಿತ್ಯಾಸಕ್ತರು, ವಿದ್ಯಾಥಿಗಳು, ಸಂಶೋಧಕರು, ಜನಸಾಮಾನ್ಯರು ಉಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ. ಈ ವಿಶೇಷ ರಿಯಾಯಿತಿಯ ವಿವರ ಈ ಕೆಳಕಂಡಂತಿದೆ.
1. ಕನ್ನಡ ರತ್ನಕೋಶ, ಸಂಕ್ಷಿಪ್ತ ಕನ್ನಡ ನಿಘಂಟು ಹಾಗೂ ಸಂಕ್ಷಿಪ್ತ ಕನ್ನಡ ಇಂಗ್ಲಿಷ್ ನಿಘಂಟು ಶೇ. 10
2. ಬೃಹತ್ ಕನ್ನಡ-ಕನ್ನಡ ನಿಘಂಟು (1-8 ಸಂಪುಟ) ಶೇ20 / 25
(ಸದಸ್ಯತ್ವ ಹೊಂದಿರುವವರಿಗೆ ಶೇ. 25 / ಹೊಂದಿಲ್ಲದವರಿಗೆ ಶೇ. 20)
3. ಪರೀಕ್ಷಾ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಪುಸ್ತಕಗಳಿಗೆ ಶೇ. 50
4. ಸ್ಮರಣ ಸಂಚಿಕೆಗಳು ಶೇ. 75

0 Comments