Ticker

6/recent/ticker-posts

Ad Code

Responsive Advertisement

ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಆನ್ ಫ್ಯೂಚರಿಸ್ಟಿಕ್ ಟ್ರೆಂಡ್ಸ್ ಇನ್ ಎಂಬೆಡೆಡ್ ಸಿಸ್ಟಮ್ಸ್ ಅಂಡ್ ನೆಟ್‌ವರ್ಕಿಂಗ್” ಉದ್ಘಾಟನೆ .

 


ಆರ್.ವೈ.ಎಂ.ಇ.ಸಿಯಲ್ಲಿ “ಎರಡನೇಯ ಅಂತರಾಷ್ಟ್ರಿಯ ಮಟ್ಟದ ತಾಂತ್ರಿಕ ಸಮ್ಮೇಳನ ಐಸಿಎಫ್‌ಟಿಇಎನ್-2021 “2ನೇ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಆನ್ ಫ್ಯೂಚರಿಸ್ಟಿಕ್ ಟ್ರೆಂಡ್ಸ್ ಇನ್ ಎಂಬೆಡೆಡ್ ಸಿಸ್ಟಮ್ಸ್ ಅಂಡ್ ನೆಟ್‌ವರ್ಕಿಂಗ್”  ಉದ್ಘಾಟನೆ .

ಬಳ್ಳಾರಿ ಜುಲೈ 07. ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂಪರ್ಕ ವಿಭಾಗದಲ್ಲಿ  ದಿನಾಂಕ 07 ಮತ್ತು 08 ಜುಲೈ  2021 ರಂದು “ಎರಡನೇಯ ಅಂತರಾಷ್ಟ್ರಿಯ ಮಟ್ಟದ ತಾಂತ್ರಿಕ ಸಮ್ಮೇಳನICFTEN-2021 2nd International Conference on Futuristic Trends in Embedded Systems and Networking” , ಉದ್ಘಾಟನೆ ಸಮಾರಂಭವು ನೆರವೇರಿತು. 


ಸಂಪನ್ಮೂಲ ವ್ಯಕ್ತಿಗಳಾದ ಡಾ|| ಜಸ್ಟಿನ್ ಡಾವೆಲ್ಸ್ ಸಹಾಯಕ ಪ್ರಧ್ಯಾಪಕರು, ಡೆಲ್ಫ್, ತಾಂತ್ರಿಕ ಮಹಾವಿದ್ಯಾಲಯ ನೆದರ್‌ಲ್ಯಾಂಡ್, ಇವರು ಗ್ರಾಫ್ರಿಕ್ಸ್ನ ಮಾದರಿಗಳು, ಮಷಿನ್ ಲರ್ನಿಂಗ್, ಸಿಗ್ನಲ್ ಪ್ರೋಸಸಿಂಗ್, ಕಂಪುಟೆಷನಲ್ ನ್ಯೂರೋ ಸೈನ್ಸ್, ಇಂಟಲಿಜೆAಟ್ ಟ್ರಾನ್ಸ್ಪೋರ್ಟೆಷನ್ ಸಿಸ್ಟಮ್ ಹಾಗೂ 7000 ಕ್ಕು ಅಧಿಕ ಸಂಶೋಧನೆಗಳನ್ನು ಪ್ರಕಟಿಸಿದ್ದಾರೆ. ಇಂದಿನ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ತಮ್ಮ ಕಲಿಕೆಯ ಜೊತೆಗೆ ಸ್ಕಿಲ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಡಿಜಿಲ್ ಇಂಡಿಯಾ, ಈ ವೇದಿಕೆಗಳನ್ನು ಬಳಸಿಕೊಂಡು ಸಮಾಜಕ್ಕೆ ಪೂರಕವಾಗುವಂತಹ ತಂತ್ರಜ್ಞಾನವನ್ನು ಪ್ರಸ್ತುತ ಪಡಿಸುವಂತವರಾಗಬೇಕು, ಆ ನಿಟ್ಟಿನಲ್ಲಿ ಸಂಶೋಧನೆಗೆ ಸಮಯ ಮೀಸಲು ಇಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರೋಫೆಸರ್ ಧನುಂಜಯ್ ಸಿಂಗ್ ಉಪಾಧ್ಯಕ್ಷರು, eಉಔಗಿ ಫೌಂಡೆಷನ್ ಬೆಂಗಳೂರು ಇವರು ವಿದ್ಯಾರ್ಥಿಗಳು ಪುಸ್ತಕದ ಜ್ಞಾನಾರ್ಜನೆಯ ಜೊತೆಗೆ ಸಮಾಜದಲ್ಲಿ ಒದಗುವ ಸೌಲ್ಯಭ್ಯಗಳ ಕುರಿತು ಗಮನಕೊಡಬೇಕು, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮೀಸಲಿಟ್ಟಿರುವ ಸರ್ಕಾರದ ಅನುದಾನವನ್ನು ಬಳಸಿಕೊಂಡು ಸಮಾಜಮುಖಿ ಬೆಳವಣಿಗೆಯ ಕಡೆ ಒತ್ತುಕೊಡಬೇಕು ಮತ್ತು ವಿವಿಧ ಸರ್ಕಾರದ ಅನುದಾನದ ಯೋಜನೆಗಳನ್ನು ವಿವರಿಸಿದರು.

ಈ ಎರಡು ದಿನಗಳ ತಾಂತ್ರಿಕ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸಂಶೋಧಕರಿAದ, 95 ವಿವಿಧ ಸೋಶೋಧನಾ ಲೇಖನಗಳು ತಾಂತ್ರಿಕ ಸಮ್ಮೇಳನದಲ್ಲಿ ಪ್ರಸ್ತುತಗೊಳ್ಳಲಿವೆ. ಸಂಶೋಧಕರು ಪ್ರಸ್ತುತ ಪಡಿಸಿದ ಸಂಶೋಧನಾ ಲೇಖನಗಳಲ್ಲಿ ಅತ್ಯುತ್ತಮವಾದ ಲೇಖನವೊಂದಕ್ಕೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ವಿ.ಟಿ.ಯು ಬೆಳಗಾವಿ, ಜೆ.ಎನ್.ಟಿ.ಯು ಅನಂತಪುರ, ವಿ.ಎಸ್.ಕೆ.ಯು.ಬಿ ಬಳ್ಳಾರಿ ಮುಂತಾದ ವಿಶ್ವವಿದ್ಯಾನಿಲಯದ ಸಂಶೋಧಕರು ತಾಂತ್ರಿಕ ಸಮ್ಮೇಳನದಲ್ಲಿ ವಾಸ್ತವಿಕವಾಗಿ ಪಾಲ್ಗೋಳ್ಳಲಿದ್ದಾರೆ.

ವಿ.ವೀ.ಸಂಘದ ಅಧ್ಯಕ್ಷರಾದ ಹೆಚ್ .ಎಮ್ ಗುರುಸಿದ್ದಸ್ವಾಮಿ,  ಮಾತನಾಡುತ್ತಾ “ಇತ್ತೀಚಿನ ದಶಕಗಳಲ್ಲಿ ಭಾರತೀಯ ಸರ್ಕಾರದ ಎನ್.ಬಿ.ಎ ಮತ್ತು ನ್ಯಾಕ್ ಅಕ್ರೀಡಿಟೀಷನ್‌ಗಳು ಮುಖ್ಯವಾಗಿದ್ದು ಹೊಸ ಆವಿಷ್ಕಾರಗಳಿಗೆ ಆದ್ಯತೆ ನೀಡುತ್ತಿರುವುದು ಹಾಗೂ ಪೆಟೆಂಟ್‌ಗಳು ಭಾರತೀಯರಿಂದ ಆಗಬೇಕೆಂದು ವಿಷೇಷ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲೆಕ್ಟಾçನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿAಗ್ ವಿಭಾಗದಲ್ಲಿ ಇಂತಹ ಒಳ್ಳೆಯ ಕಾರ್ಯಕ್ರಮ ನಡೆಸಿದ್ದು ತುಂಬಾ ಶ್ಲಾಘನೀಯ” ಎಂದರು

ವಿ.ವೀ.ಸAಘದ ಕಾರ್ಯದರ್ಶಿಗಳಾದ ಬಿ.ವಿ ಬಸವರಾಜ ಮಾತನಾಡುತ್ತಾ ಸಂಶೋಧನಾ  ವಿದ್ಯಾರ್ಥಿಗಳು ತಮ್ಮ ದೈನಂದಿನ ಓದಿನ ಜೊತೆ ಜೊತೆಗೆ ವಿದ್ಯಾರ್ಥಿಗಳನ್ನು ಹೊಸ ಹೊಸ ಆವಿಷ್ಕಾರಗಳಿಗೆ ಈ ತರಹದ ಸಮ್ಮೇಳನಗಳು ಉಪಯುಕ್ತವಾಗುತ್ತವೆ ಎಂದು ತಿಳಿಸಿದರು.ವಿ.ವೀ.ಸಂಘದ ಉಪಾಧ್ಯಕ್ಷರು ಹಾಗೂ ಕಾಲೇಜಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾದ ಶ್ರೀ ಅಲ್ಲಂ ಚನ್ನಪ್ಪ ಅವರು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇಂತಹ ಅಂತರಾಷ್ಟೀಯ ಸಮ್ಮೇಳನದಲ್ಲಿ ಭಾಗವಹಿಸಿ ತಾಂತ್ರಿಕ ಬರೆಯುವಿಕೆಯನ್ನು ವಿವಿಧ ಕ್ಷೇತ್ರಗಳಲ್ಲಿ ಮಂಡಿಸಿ ಕಾಲೇಜಿಗೆ ಕೀರ್ತಿ ತರಬೇಕೆಂದು ಶುಭಹಾರೈಸಿದರು.

ವಿ.ವೀ.ಸಂಘದ ಸಹ ಕಾರ್ಯದರ್ಶಿಗಳಾದ ದರೂರು ಶಾಂತನಗೌಡ, ಖಜಾಂಚಿಗಳಾದ  ಗೋನಾಳ್ ರಾಜಶೇಖರ್ ಗೌಡ ಶುಭ ಹಾರೈಸಿದರು.ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, “ಮುಂದಿನ ದಿನಗಳಲ್ಲಿ ಸಮಾಜಕ್ಕೆ ಉಪಯುಕ್ತವಾಗುವ, ಜನ ಸಮಾನ್ಯರಿಗೆ ಸರಳವಾಗಿ ಅತ್ಯಂತ ಕಡಿಮೆ ಬೆಲೆಗೆ ಗುಣಮಟ್ಟದ ಆವಿಷ್ಕಾರಗಳು ಮಾರುಕಟ್ಟೆಗೆ ಬರುವುದಕ್ಕೆ ಈ ತರಹದ ಕಾರ್ಯಕ್ರಮಗಳು ಪುಷ್ಠಿಯನ್ನು ಒದಗಿಸುತ್ತವೆ. ಭಾಗವಹಿಸಿದ ಎಲ್ಲಾರು ಇದರ ಸದುಪಯೋಗವನ್ನು ಪಡೆದು ಶಿಕ್ಷಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕೆಂದರು.

ಉಪಪ್ರಾ0ಶುಪಾಲರು ಹಾಗೂ ಸಮ್ಮೇಳನದ ಅಧ್ಯಕ್ಷರಾದ ಡಾ|| ಸವಿತಾ ಸೊನೋಳಿ, “ಈ ಕಾರ್ಯಗಾರದಿಂದ ತಾಂತ್ರಿಕ ಜಿಜ್ಞಾಸೆ , ಹೊಸತನವನ್ನು ಕಂಡುಹಿಡಿಯುದು ಪ್ರೇರಕವಾಗಲು ಉದ್ಧೇಶಿಸಲಾಗಿದೆ, ಎಲೆಕ್ಟಾçನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿAಗ್ ವಿಭಾಗದಲ್ಲಿ ಈ ವರ್ಷ ಅನೇಕ ಸಾಧನೆಗಳನ್ನು ಮಾಡಿರುತ್ತಾರೆ - ಶ್ರೀಮತಿ ರಾಧಿಕ ವೈ.ಟಿ ವಿ.ತಾ.ವಿ. ವಿಶ್ವವಿದ್ಯಾಲಯದಲ್ಲಿ 4ನೇಯ ರ‍್ಯಾಂಕ್ ಗಳಿಸಿರುತ್ತಾರೆ, ಕರ್ನಾಟಕದ ವಿ.ಜಿ.ಎಸ್.ಟಿ ಎರಡನೇಯ ಹಂತದಿ0ದ 10 ಲಕ್ಷ ಅನುದಾನ, ನೈನ್ ವತಿಯಿಂದ 3ಲಕ್ಷ ಅನುದಾನ ಹಾಗೂ 2 ಕೆ.ಸಿ.ಎಸ್.ಟಿ ಪ್ರಾಜೆಕ್ಟ್ ಗಳಿಗೆ ಅನುದಾನ ಪಡೆದಿದ್ದು, ಎಂದು ತಿಳಿಸುತ್ತಾ ಸಭೆಯನ್ನು ಸ್ವಾಗತಿಸಿದರು.ಡಾ|| ಪ್ರಭಾವತಿ ಎಸ್ ಪ್ರೋಫೆಸರ್ ಇಸಿಇ ವಿಭಾಗ, ನಿಯೋಜಕರು ಇವರು ಎರಡನೇಯ ಅಂತರಾಷ್ಟ್ರಿಯ ಮಟ್ಟದ ತಾಂತ್ರಿಕ ಸಮ್ಮೇಳನದ ವಿಷಯವಾರು ಮಾಹಿತಿಯನ್ನು ನೀಡಿದರು. ಶ್ರೀಮತಿ ವಾಣಿ .ಹೆಚ್ ಕಾರ್ಯಕ್ರಮವನ್ನು ನಿರೂಪಿಸಿದರು, 

ಪ್ರಶಾಂತ್ ಖೇಣಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು ಮತ್ತು ಕೆ. ಫಣೀಂದ್ರ ರೆಡ್ಡಿ ವಂದನಾರ್ಪಣೆ ಮಾಡಿದರು. ವಿವಿಧ ವಿಭಾಗದ ಮುಖ್ಯಸ್ಥರು, ಭೋಧಕ, ಭೋಧಕೇತರರ ಸಿಬ್ಬಂದಿಯವರು ಮತ್ತು ಇನ್ನಿತರರು ಭಾಗವಹಿಸಿದ್ದರು. 


Post a Comment

0 Comments

Ad Code

Responsive Advertisement